ವಿಶ್ವಾಸವೇ ಶ್ವಾಸ.. ಕಾಂಗ್ರೆಸ್ ಇಷ್ಟಪಡುವರಿಗೆ ಸ್ವಾಗತ!
‘ಆಪರೇಷನ್ ಹಸ್ತ’ ಮಾಡುವ ಅವಶ್ಯಕತೆ ಇಲ್ಲ!
CM ಮತ್ತು DCM ಮನೆ ಹೊಸ್ತಿಲಲ್ಲಿ ವಿಶೇಷ ಅತಿಥಿಗಳು ಪ್ರತ್ಯಕ್ಷ
ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಎಲೆಕ್ಷನ್ ವಾರ್ಗೆ ತಾಲೀಮು ಆರಂಭಿಸ್ತಿದೆ. ಕೇಂದ್ರ ಕಾಂಗ್ರೆಸ್ಗೆ ಬಿಗ್ ಗಿಫ್ಟ್ ನೀಡಲು ಪ್ಲಾನ್ ರೂಪಿಸ್ತಿದೆ. ಪ್ರತಿ ಜಿಲ್ಲೆ, ಪ್ರತಿ ಕ್ಷೇತ್ರದ ಕುರುಕ್ಷೇತ್ರದಲ್ಲಿ ತನ್ನ ಮತ ಶೇಖರಣೆಯನ್ನ ಏರಿಕೆಗೆ ಈಗಾಗಲೇ ಹುಕುಂ ಜಾರಿ ಆಗಿದೆ. ಗ್ಯಾರಂಟಿ ಭಾಗ್ಯಗಳ ಮೂಲಕ ಸಮರ ಗೆಲ್ಲೋದು ಸಲೀಸಲ್ಲ ಅನ್ನೋದು ಬಲ್ಲ ಕಾಂಗ್ರೆಸ್, ಈಗ ತನ್ನ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಿರೋದು ಗುಟ್ಟಾಗಿ ಏನು ಉಳಿದಿಲ್ಲ.
ಆಪರೇಷನ್ ಇಲ್ಲ ಎನ್ನುತ್ತಲೇ ಡಿಕೆಶಿ ಹೊಸ ಲೆಕ್ಕಾಚಾರ!
ಬೆಂಕಿ ಇಲ್ಲದೇ ಹೊಗೆ ಆಡಲು ಸಾಧ್ಯವಾ? ಅದು ಅಸಾಧ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಕೋಟೆಯಲ್ಲಿ ಎಲೆಕ್ಷನ್ ಅಡುಗೆಗಾಗಿ ಬೆಂಕಿ ಕಾಯಿಸಲಾಗ್ತಿದೆ. ಆದ್ರೆ, ಈ ಬೆಂಕಿ ಬಿಜೆಪಿ ಮನೆ ಮೇಲೆ ಹೊಗೆ ಎಬ್ಬಿಸಿದೆ. ಆಪರೇಷನ್ ಹಸ್ತಕ್ಕೆ ಬಹಿರಂಗ ಚಾಲನೆ ಸಿಕ್ಕಿದ್ದು, ಪ್ರದೇಶವಾರು ರಣ ಬೇಟೆ ಶುರುವಾಗಿದೆ. ಕತ್ತಲಾದ್ರೆ ಸಾಕು, ಬೆಳಗಾದ್ರೆ ಸಾಕು ಸಿಎಂ ಮತ್ತು ಡಿಸಿಎಂ ಮನೆ ಹೊಸ್ತಿಲಲ್ಲಿ ವಿಶೇಷ ಅತಿಥಿಗಳು ಪ್ರತ್ಯಕ್ಷವಾಗ್ತಿದ್ದಾರೆ.
ಸೋಮಶೇಖರ್ ಬೆನ್ನಲ್ಲೇ ಮಾಜಿ ಸಚಿವ ಹೆಬ್ಬಾರ್ ಕೂಡ ಸಿಎಂ ಸಿದ್ದರಾಮಯ್ಯ ಭೇಟಿ ಆಗಿದ್ದಾರೆ. ವಲಸಿಗರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೇಸರಿ ಪಡೆ ಶತಪ್ರಯತ್ನ ನಡೆಸ್ತಿದ್ದು, ನಿನ್ನೆ ರಾತ್ರಿ ಏಕಾಏಕಿ ಸಿಎಂ ಜೊತೆ ಚರ್ಚಿಸಿ ಹೆಬ್ಬಾರ್ ತೆರಳಿದ್ದಾರೆ. ಇತ್ತ, ಡಿಸಿಎಂ ಡಿಕೆಶಿಯನ್ನ ಹೊನ್ನಾಳಿ ಮಾಜಿ ಶಾಸಕ, ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ನಿನ್ನೆ ಭೇಟಿ ಆಗಿದ್ರು.. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಆಪರೇಷನ್ ಇಲ್ಲ. ರಾಜಕೀಯ ಏನೇನೋ ಇರುತ್ತೆ ಅಂತ ಕುತೂಹಲ ಕಾಯ್ದುಕೊಂಡ್ರು.
ಅಧಿಕಾರದಲ್ಲಿದ್ದವರ ಭೇಟಿ ತಪ್ಪೇನು ಎಂದ ಡಿಕೆ!
ಬಿಜೆಪಿ ನಾಯಕರ ಸರಣಿ ಭೇಟಿಗಳ ಕುರಿತು ಡಿಸಿಎಂ ಡಿಕೆಶಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನಾವು ಆಪರೇಷನ್ ಹಸ್ತ ಮಾಡಲ್ಲ ಎಂದಿರುವ ಡಿಕೆಶಿ, ಕ್ಷೇತ್ರದ ಅಭಿವೃದ್ಧಿಗಾಗಿ ಭೇಟಿ ಅಂತ ಕಾರಣ ಕೊಟ್ಟಿದ್ದಾರೆ. ಸ್ನೇಹ, ರಾಜಕೀಯ ಇರುತ್ತೆ, ಬೇರೆ ವಿಚಾರಗಳು ಇರುತ್ತೆ. ಅದನ್ನ ಸಾರ್ವಜನಿಕವಾಗಿ ಹೇಳಲು ಆಗಲ್ಲ ಅಂತ ಡಿಕೆಶಿ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದ್ರು.
ಇತ್ತ, ಸಿಎಂ ಮತ್ತು ಡಿಸಿಎಂ ಭೇಟಿ ಬಳಿಕ ರೇಣುಕಾಚಾರ್ಯ, ಪಕ್ಷ ಸೇರ್ಪಡೆ ಆಗುವಂತೆ ಅವರು ಆಹ್ವಾನ ನೀಡಿಲ್ಲ. ನಾನೂ ಸಹ ಸೇರ್ತೀನಿ ಅಂತ ಹೇಳಿಲ್ಲ.. ಆದ್ರೆ, ನಾನು ದಾವಣಗೆರೆ ಲೋಕಸಭೆ ಟಿಕೆಟ್ ಆಕಾಂಕ್ಷಿ ಅಂತ ರೇಣುಕಾಚಾರ್ಯ, ಟಿಕೆಟ್ಗೆ ಟವೆಲ್ ಹಾಕಿದ್ದಾರೆ.
ಒಟ್ಟಾರೆ, ಲೋಕಸಭೆ ಚುನಾವಣೆಗೆ 200 ಪ್ಲಸ್ ಡೇ ಅಷ್ಟೇ ಬಾಕಿ ಇದೆ.. ಹೀಗಾಗಿ ಬಿಜೆಪಿ ಮತ್ತು ದಳಕ್ಕೂ ಮೊದಲೇ ಕಾಂಗ್ರೆಸ್ ಸಮರಕ್ಕೆ ಸನ್ನದ್ಧಗೊಳ್ತಿದೆ.. ತನ್ನ ಟಾರ್ಗೆಟ್ ರೀಚ್ ಮಾಡಲು ಆಪರೇಷನ್ ಹಸ್ತಕ್ಕೆ ಕೈಚಾಚಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ