newsfirstkannada.com

ಮೈಸೂರು ಲೋಕಸಭಾ ಕ್ಷೇತ್ರ ಕಬ್ಜ ಮಾಡಲು ಹೊರಟ ಕಾಂಗ್ರೆಸ್‌; ಸಿಂಹ VS ಯತೀಂದ್ರ ರಣತಂತ್ರಗಳೇನು?

Share :

04-09-2023

    ಸೋಲಿಸಲು ಹೊರಟಿರುವ ಸಿಎಂ ಸಿದ್ದರಾಮಯ್ಯಗೆ ಪ್ರತಾಪ್​ಸಿಂಹ ಪ್ರಶ್ನೆ

    ‘ಸಿಂಹ’ ಘರ್ಜನೆಗೆ ಸೈಲೆಂಟ್‌ ಆಗೇ ಯತೀಂದ್ರ ಸಿದ್ದರಾಮಯ್ಯ ಟಾಂಗ್

    10 ವರ್ಷಗಳಲ್ಲಿ ಮೋದಿ ಕೊಡುಗೆ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಪ್ರಶ್ನೆ

ಬೆಂಗಳೂರು: ‘ಲೋಕ’ ಕದನದ ಹೊತ್ತಲ್ಲಿ ಕಾಂಗ್ರೆಸ್ ಕಣ್ಣು ಹಳೇ ಮೈಸೂರು ಭಾಗದ ಮೇಲೆ ನೆಟ್ಟಿದೆ. ಅದರಲ್ಲೂ ಮೈಸೂರು-ಕೊಡಗು ಕಬ್ಜ ಮಾಡಲು ಸಿಎಂ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ. ಜೊತೆಗೆ ಮೈಸೂರು-ಕೊಡಗು ಸಂಸದನನ್ನ ಸೋಲಿಸಲು ಟಾರ್ಗೆಟ್‌ ಫಿಕ್ಸ್ ಮಾಡಿದ್ದಾರೆ. ಇದು ಕಮಲ ಪಾಳಯದ ಸಿಂಹವನ್ನ ರೊಚ್ಚಿಗೆಬ್ಬಿಸಿದೆ. ಸಿಎಂ ವಿರುದ್ಧವೇ ಘರ್ಜಿಸುವಂತೆ ಮಾಡಿದೆ. ಇತ್ತ ಸಿಂಹದ ಘರ್ಜನೆಗೆ ಸಿಎಂ ಪುತ್ರ ತಿರುಮಂತ್ರ ಬೋಧಿಸಿದ್ದಾರೆ. ಲೋಕ ಕದನದಲ್ಲಿ ಹಳೇ ಮೈಸೂರು ಭಾಗವನ್ನೇ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಅದರಲ್ಲೂ ಮೈಸೂರು-ಕೊಡಗಿನಲ್ಲಿ ಮತಶಿಕಾರಿ ಮಾಡಲು ಗೃಹಲಕ್ಷ್ಮಿ ಚಾಲನೆ ಮೂಲಕ ಮುಹೂರ್ತ ಫಿಕ್ಸ್ ಮಾಡಿದೆ. ಮೈಸೂರು ಭಾಗದಲ್ಲಿ ಏನೇ ವಿಚಾರ ಬಂದ್ರೂ ಘರ್ಜಿಸೋ ಸಿಂಹವನ್ನ ಬೇಟೆಯಾಡಲು ರಣವ್ಯೂಹ ರಚನೆಯಾಗ್ತಿದೆ. ಇದೀಗ ಇದೇ ವಿಚಾರ ಸಿಂಹ ವರ್ಸಸ್‌ ಯತೀಂದ್ರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ರತಾಪ್ ಸಿಂಹ vs ಯತೀಂದ್ರ ಮಧ್ಯೆ ‘ಲೋಕ’ ಸಮರ
‘ಸಿಂಹ’ ಘರ್ಜನೆಗೆ ಸೈಲೆಂಟ್‌ ಆಗೇ ಯತೀಂದ್ರ ಟಾಂಗ್

ಕಾಂಗ್ರೆಸ್‌ ಕೋಟೆಗೆ ಆಗಾಗ ಲಗ್ಗೆ ಇಟ್ಟು ಘರ್ಜಿಸೋ ಪ್ರತಾಪ್‌ ಸಿಂಹರನ್ನ ಮತಶಿಕಾರಿಯಲ್ಲಿ ಮಗ್ಗಲು ಮುರಿಯಲು ಕೈ ಸಜ್ಜಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯರೇ ಪ್ರತಾಪ್‌ ಸಿಂಹರನ್ನ ಸೋಲಿಸುವಂತೆ ಮತ ಸಮರದ ಶಂಖವನ್ನ ಊದಿದ್ದಾರೆ. ಇದು ಮೈಸೂರಿನಲ್ಲಿ ಓಡಾಡಿಕೊಂಡಿದ್ದ ಸಿಂಹವನ್ನ ಬಡಿದೆಬ್ಬಿಸಿದೆ. ಸಿಎಂಗೆ ಈ ರೀತಿಯ ದಯನೀಯ ಸ್ಥಿತಿ ಬರಬಾರದಿತ್ತು ಅಂತಾ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಇತ್ತ ಬಿಜೆಪಿ ಸಂಸದನ ಸಿಡುಕಿನ ಮಾತಿಗೆ ಯತೀಂದ್ರ ತಿರುಗೇಟು ಕೊಟ್ಟಿದ್ದಾರೆ.

ಅಭಿವೃದ್ಧಿ ಮಾಡ್ತಿರೋ ನನ್ನನ್ನ ಯಾಕೆ ಸೋಲಿಸ್ಬೇಕು-ಪ್ರತಾಪ್ ಪ್ರಶ್ನೆ
ಮತ್ತೆ ಕೇಂದ್ರದಲ್ಲಿ ‘ಕೈ’ ಆಡಳಿತಕ್ಕೆ ಬರಬೇಕು ಅಂತ ಯತೀಂದ್ರ ಟಾಂಗ್

ಇನ್ನೂ, ಇಷ್ಟಕ್ಕೆ ಪ್ರತಾಪ್ ಘರ್ಜನೆಯ ಮಾತುಗಳು ಮುಗಿದಿಲ್ಲ. ಮೈಸೂರಿನಲ್ಲಿ ಅಭಿವೃದ್ಧಿಯ ಪತಾಕೆ ಹಾರಿಸಿರೋ ತಮ್ಮನ್ನ ಯಾಕೆ ಸೋಲಿಸ್ಬೇಕು ಅಂತಾ ಕಾಂಗ್ರೆಸ್‌ನ ಪ್ರಶ್ನಿಸಿದ್ದಾರೆ. ಈ ಮಾತಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿರೋ ಯತೀಂದ್ರ ಸಿದ್ದರಾಮಯ್ಯ, ಈ ಬಾರಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವೇ ಬರಬೇಕು ಅಂತಾ ಗುಡುಗಿದ್ದಾರೆ.

‘ಲೋಕ’ ಕದನಕ್ಕೆ ಮಾತಿನ ಕಹಳೆ ಊದಿದ ‘ಕೈ’ ಸಚಿವ
ಮೋದಿ ಕೊಡುಗೆಯೇನು ಅಂತ ಸಚಿವ ತಂಗಡಗಿ ಪ್ರಶ್ನೆ

ಲೋಕಸಭೆ ಸಮರಕ್ಕೆ ಕಾಂಗ್ರೆಸ್‌ ಮಾತಿನ ಕಹಳೆಯನ್ನ ಮೊಳಗಿಸಿದೆ. ಈ ನಿಟ್ಟಿನಲ್ಲಿ ಮಾತನಾಡಿರೋ ಸಚಿವ ಶಿವರಾಜ್ ತಂಗಡಗಿ, 10 ವರ್ಷಗಳಲ್ಲಿ ಮೋದಿ ಸರ್ಕಾರದ ದೇಶಕ್ಕೆ ನೀಡಿರೋ ಕೊಡುಗೆಯೇನು ಅಂತ ಪ್ರಶ್ನಿಸಿದ್ದಾರೆ. ದಶಪಥ ಹೆದ್ದಾರಿ ನಿರ್ಮಿಸಿ ಮೈಸೂರಿನ ಅಭಿವೃದ್ಧಿ ಮಾಡ್ತಿದ್ದೇನೆ ಎಂಬ ಅಲೆಯಲ್ಲಿ ಸಂಸದ ಪ್ರತಾಪ್‌ ಸಿಂಹ ತೇಲ್ತಿದ್ದಾರೆ. ಜೊತೆಗೆ ಆಗಾಗ ಸರ್ಕಾರದ ವಿರುದ್ಧ ಘರ್ಜಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಹೆಣೆಯುತ್ತಿರೋ ಚಕ್ರವ್ಯೂಹದಲ್ಲಿ ಪ್ರತಾಪ್ ಸಿಂಹ ಸಿಲುಕಿಕೊಳ್ತಾರಾ? ಅಥವಾ ಲೋಕ ಸಮರದಲ್ಲಿ ಮತ್ತೆ ಮೇಲೆದ್ದು ಬರ್ತಾರಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೈಸೂರು ಲೋಕಸಭಾ ಕ್ಷೇತ್ರ ಕಬ್ಜ ಮಾಡಲು ಹೊರಟ ಕಾಂಗ್ರೆಸ್‌; ಸಿಂಹ VS ಯತೀಂದ್ರ ರಣತಂತ್ರಗಳೇನು?

https://newsfirstlive.com/wp-content/uploads/2023/09/bjp-vs-congress-3.jpg

Load More