ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು
ಬಿಜೆಪಿ ಸೋಲಿಗೆ ಅಕ್ಕಿ ಕಡಿತವೇ ಕಾರಣ ಎಂದ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ ವಿಡಿಯೋ ಟ್ವೀಟ್ ಮಾಡಿದ ಕಾಂಗ್ರೆಸ್
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಪಿಎಲ್ ಕಾರ್ಡ್ ಹೊಂದಿರೋ ರಾಜ್ಯದ ಎಲ್ಲರಿಗೂ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಸದ್ಯ ರಾಜ್ಯದಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ತನ್ನ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಹೀಗಾಗಿ ಈ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್ ಹೊಂದಿರೋ ಎಲ್ಲರಿಗೂ 5 ಕೆಜಿ ಅಕ್ಕಿ ಜತೆ 170 ರೂ. ದುಡ್ಡು ಕೊಡಲಾಗುತ್ತಿದೆ.
ಒಂದೆಡೆ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ಮುಂದಾದರೆ ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರು ಬೀದಿಯಲ್ಲೇ ಕಿತ್ತಾಡುತ್ತಿದ್ದಾರೆ. ಸೋಲಿನ ಹತಾಶೆಯಿಂದ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಕ್ಕಿ ಕಡಿತ ಮಾಡಿದ್ದೇ ಸೋಲಿಗೆ ಕಾರಣ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಬೊಮ್ಮಯಿಯವರು ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದರೂ ಶಾಸಕರಾಲ್ಲದವರ ಪರ್ಮಿಷನ್ ಪಡೆಯಬೇಕಿತ್ತು. ಬಡವರ ಅಕ್ಕಿ ಕಡಿತಗೊಳಿಸಿ ಜನವಿರೋಧಿಯಾಗಿತ್ತು ಬಿಜೆಪಿ ಸರ್ಕಾರ ಎಂದು ಎಂ.ಪಿ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದು ಬಿಜೆಪಿಯ ಪೋಸ್ಟ್ ಮಾರ್ಟಮ್ ಎಂದ ಕಾಂಗ್ರೆಸ್
ಈ ಕುರಿತಾದ ವಿಡಿಯೋ ಶೇರ್ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆ ಸೋಲಿನ ಬಳಿಕ ಬಿಜೆಪಿಯ ಪೋಸ್ಟ್ ಮಾರ್ಟಮನ್ನು ಬಿಜೆಪಿಯವರೇ ಮಾಡಿದ್ದಾರೆ ಎಂದು ಕುಟುಕಿದೆ. ಜತೆಗೆ ಡಿಯರ್ ಬಿಜೆಪಿ ಇದೆಲ್ಲವೂ ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲಲಾಗದ ವ್ಯಕ್ತಿಯ ಪ್ರಭಾವವಲ್ಲವೇ? ಎಂದು ಪ್ರಶ್ನಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ