ಬೀದಿಗೆ ಬಂದ ಮಾಜಿ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ ಜಗಳ
ಹಿಂದೂ ಹುಲಿ ನಮಾಜ್ ಮಾಡಿದ್ದೇಕೆ? ಎಂದು ಯತ್ನಾಳ್ಗೆ ನಿರಾಣಿ ಪ್ರಶ್ನೆ
ಇದಕ್ಕೆ ಉತ್ತರ ಕೊಡಿ ಎಂದು ಯತ್ನಾಳ್ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
ಬೆಂಗಳೂರು: ಹಿಂದೂ ಹುಲಿ ಎನ್ನುವವರು ಟೊಪ್ಪಿ ಹಾಕಿ ನಮಾಜ್ ಮಾಡಿದ್ದೇಕೆ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಕೆಂಡಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ ಕಾಂಗ್ರೆಸ್ ಯತ್ನಾಳ್ ಅವರೇ ಮುರುಗೇಶ್ ನಿರಾಣಿ ಮಾತಿಗೆ ಉತ್ತರವಿದೆಯೇ? ಎಂದು ಪ್ರಶ್ನಿಸಿದೆ.
ಬಿಜೆಪಿಯಲ್ಲಿ ಈಗ ಯಾರು ಯಾರ ದ್ವೇಷಿಗಳು ಎನ್ನುವುದು ಬಿಜೆಪಿಗರಿಗೇ ತಿಳಿದಂತಿಲ್ಲ. ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಬಿಜೆಪಿ ನಾಯಕರು ಪಕ್ಷದೊಳಗಿನ ತಮ್ಮ ವಿರೋಧಿಗಳನ್ನು ಹುಡುಕುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯೆ ವಾಕ್ಸಮರ ನಡೆದಿತ್ತು. ಈ ಬೆನ್ನಲ್ಲೀಗ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ನಡುವೆ ಟಾಕ್ ಶುರುವಾಗಿದೆ. ಕಾರ್ಯಕರ್ತರ ಸಭೆಯಲ್ಲಿ ನಿರಾಣಿ ಯತ್ನಾಳ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದರು.
ಯತ್ನಾಳ್ಗೆ ನಿರಾಣಿ ಹೇಳಿದ್ದೇನು..?
ನಾನು ಕೃಷ್ಣಾ ನದಿ ನೀರು ಕುಡಿದಿದ್ದೇನೆ. ವಿಜಯಪುರ ಗಾಳಿಯೂ ಸೇವಿಸಿದ್ದೇನೆ. ಯಾರು ಏನು ಮಾತಾಡುತ್ತಾರೋ ಅದರ ಹತ್ತರಷ್ಟು ಶಬ್ದಗಳು ನನ್ನ ಬಾಯಲ್ಲೇ ಇದೆ. ನಾವು ಶಿಸ್ತಿನಿಂದ ಇರುತ್ತೇವೆ. ನಮ್ಮಲ್ಲಿ ನಿಷ್ಠೆ ಇದೆ. ಯಾರದ್ದೋ ತಪ್ಪಿನಿಂದ ಸೋತಿದ್ದೇವೆ. ಕಳೆದ 35 ವರ್ಷಗಳಿಂದ ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿ ನನ್ನ ತಾಯಿ, ಇಲ್ಲೇ ಇರುತ್ತೇನೆ. ಹಿಂದೂ ಹುಲಿ ಎಂದು ಹೇಳಿಕೊಂಡು ತಲೆ ಮೇಲೆ ಟೊಪ್ಪಿ ಹಾಕಿಕೊಂಡು ನಮಾಜ್ ಮಾಡುವನು ನಾನಲ್ಲ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ