newsfirstkannada.com

‘ಕರ್ನಾಟಕ ವಿರೋಧ ಪಕ್ಷದ ಸ್ಥಾನಕ್ಕೆ ಮೋದಿ ಟವಲ್ ಹಾಕಿದಂತಿದೆ, ಯಾಕಂದರೆ..’ ಎಂದು ಕಾರಣ ತಿಳಿಸಿದ ಕಾಂಗ್ರೆಸ್

Share :

04-08-2023

    ‘ಡಬಲ್ ಇಂಜಿನ್, ಗುಜುರಿ ಇಂಜಿನ್ ಆಗಿ ತುಕ್ಕು ಹಿಡಿದಿದೆ’

    ಮತ್ತೊಮ್ಮೆ ಮೋದಿ ವಿರುದ್ಧ ಕಿಡಿಕಾರಿದ ಕರ್ನಾಟಕ ಕಾಂಗ್ರೆಸ್​

    ಡಾ.ಸುಧಾಕರ್ ಅವರ ಹಳೇ ವಿಡಿಯೋ ಹಂಚಿಕೊಂಡು ಗೇಲಿ

ಕರ್ನಾಟಕ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರಧಾನಿ ಮೋದಿ ಅವರೇ ವಹಿಸಿಕೊಂಡಂತಿದೆ ಎಂದು ಕಾಂಗ್ರೆಸ್​ ಗೇಲಿ ಮಾಡಿದೆ.

ರಾಜ್ಯ ಬಿಜೆಪಿಯಲ್ಲಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಕರ್ನಾಟಕ ಬಿಜೆಪಿಯನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ, ಟ್ವೀಟ್ ಮಾಡಿರುವ ಕಾಂಗ್ರೆಸ್​.. ಬೇರೆಲ್ಲಾ ಕೆಲಸ ಬಿಟ್ಟು ಕರ್ನಾಟಕದ ಬಗ್ಗೆ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನಿರಂತರವಾಗಿ ಮೋದಿ ಮಾತಾಡುತ್ತಿದ್ದಾರೆ, ವಿಪಕ್ಷ ನಾಯಕನ ಸ್ಥಾನಕ್ಕೆ ಮೋದಿಯರು ಟವಲ್ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದೆ. ಜೊತೆಗೆ ಮಣಿಪುರ, ಹರಿಯಾಣ ಹೊತ್ತಿ ಉರಿದರೂ ಅತ್ತ ಸುಳಿಯದ ಪ್ರಧಾನಿಗೆ ನಮ್ಮ ಸರ್ಕಾರದ ಮೇಲೆ ಏಕಿಷ್ಟು ಆಸಕ್ತಿ? ಎಂದು ಪ್ರಶ್ನೆ ಮಾಡಿದೆ.

ಗುಜರಿ ಇಂಜಿನ್ ಆಗಿ ಮೂಲೆ ಸೇರಿದ್ದಾರೆ

ಇನ್ನೊಂದು ಟ್ವೀಟ್​ನಲ್ಲಿ ‘ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ, ಅ ಮಟ್ಟಿಗೆ ಕರ್ನಾಟಕ ಬಿಜೆಪಿ ಹಾಲಿ ನಾಯಕರಿಂದ ತಿರಸ್ಕಾರಕ್ಕೆ ಒಳಪಟ್ಟಿದೆ. ಕರ್ನಾಟಕದ ಬಿಜೆಪಿ ನಾಯಕರನ್ನು ಹೈಕಮಾಂಡ್ ಶತ್ರುಗಳಂತೆ ಕಾಣುತ್ತಿರುವುದಕ್ಕೆ ಸಿಟಿ ರವಿಯ ಪದಚ್ಯುತಿಯೇ ಸಾಕ್ಷಿ. ಡಬಲ್ ಇಂಜಿನ್ ಎಂದು ಮೆರೆದವರು ಈಗ ಗುಜರಿ ಇಂಜಿನ್ ಆಗಿ ತುಕ್ಕು ಹಿಡಿದು ಮೂಲೆ ಸೇರಿದ್ದಾರೆ ಎಂದು ಕುಟುಕಿದೆ.

ಬಿಜೆಪಿ ಇದುವರೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇತ್ತೀಚೆಗೆ ಹೈಕಮಾಂಡ್​ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿಟಿ ರವಿಯವರನ್ನು ಕೆಳಗಿಳಿಸಿತ್ತು. ಆ ಬಳಿಕ ದೆಹಲಿಯತ್ತ ಅವರನ್ನು ಕರೆಸಿಕೊಂಡಿತ್ತು. ಆದರ ಜೊತೆಗೆ ಸುಧಾಕರ್​ ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ಬಗ್ಗೆ ವೈಯಕ್ತಿವಾಗಿ ಮಾತನಾಡಿರುವ ತುಣುಕನ್ನು ಇಟ್ಟುಕೊಂಡು ಕಾಂಗ್ರೆಸ್​​ ಬಿಜೆಪಿ ವಿರುದ್ಧ ಟ್ವೀಟ್ ಮಾಡಿ ಕಾಲೆಳೆದಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕರ್ನಾಟಕ ವಿರೋಧ ಪಕ್ಷದ ಸ್ಥಾನಕ್ಕೆ ಮೋದಿ ಟವಲ್ ಹಾಕಿದಂತಿದೆ, ಯಾಕಂದರೆ..’ ಎಂದು ಕಾರಣ ತಿಳಿಸಿದ ಕಾಂಗ್ರೆಸ್

https://newsfirstlive.com/wp-content/uploads/2023/06/MODI_SIDDU15062023.jpg

Load More