ಫ್ರೀ ಬಸ್ನಿಂದ ತೀರ್ಥಕ್ಷೇತ್ರಗಳತ್ತ ಜನವೋ ಜನ
ಭಕ್ತರಿಂದ ತುಂಬಿ ತುಳುಕುತ್ತಿರೋ ದೇವಾಲಯಗಳು
1 ತಿಂಗಳಲ್ಲಿ ಹರಿದು ಬಂದ ಕೋಟಿಗಟ್ಟಲೇ ಆದಾಯ
ಬೆಂಗಳೂರು: ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಸಿಕ್ಕಿದೆ. ದೇವಾಲಯಗಳ ಆದಾಯಕ್ಕೆ ಬೆಂಬಲ ಸಿಕ್ಕಿದೆ. ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ. ಆರ್ಥಿಕತೆಯ ಚಲನಶೀಲತೆಯ ಬಗ್ಗೆ ಅರಿವಿಲ್ಲದ ಬಿಜೆಪಿಗರ ಪಾಕಿಸ್ತಾನ, ಶ್ರೀಲಂಕಾ ಎಂಬ ಅಪಪ್ರಚಾರಕ್ಕೆ ಉತ್ತರವೂ ಸಿಕ್ಕಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಎಷ್ಟೋ ದಿನಗಳಿಂದ ತಮ್ಮ ನೆಚ್ಚಿನ ದೇವಾಲಯಗಳ ಭೇಟಿಗೆ ಕಾತರಿಸುತ್ತಿದ್ದ ಜನ ಶಕ್ತಿ ಯೋಜನೆಯ ಲಾಭ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ. ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ. ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ? ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಕುಟುಕಿದೆ.
ಶಕ್ತಿ ಯೋಜನೆಯಿಂದ ದೇವಾಲಯಗಳಿಗೆ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಕಳೆದ ವರ್ಷ ಜೂನ್ 11ನೇ ತಾರೀಕಿನಿಂದ ಜುಲೈ 15ರವರೆಗೆ ಪ್ರತಿಷ್ಠಿತ 58 ದೇವಾಲಯಗಳಲ್ಲಿ ಇ-ಹುಂಡಿಗಳ ಮೂಲಕ 19 ಕೋಟಿ ಸಂಗ್ರಹ ಆಗಿತ್ತು. ಇನ್ನು ಶಕ್ತಿ ಯೋಜನೆ ಜಾರಿಯಾದ ಬಳಿಕ ಈ ವರ್ಷ ಜೂನ್ 11ನೇ ತಾರೀಕಿನಿಂದ ಜುಲೈ 15ರವರೆಗೆ ಬರೋಬ್ಬರಿ 24.47 ಕೋಟಿ ರೂ. ಆದಾಯ ಬಂದಿದೆ ಎಂದು ವರದಿಯಾಗಿದೆ.
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಬಿಜೆಪಿ
ಈ ಹಿಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಕರ್ನಾಟಕ ದಿವಾಳಿ ಆಗಲಿದೆ. ಕಾಂಗ್ರೆಸ್ನಿಂದ ಕರ್ನಾಟಕ ಮತ್ತೊಂದು ಪಾಕಿಸ್ತಾನ, ಶ್ರೀಲಂಕಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿತ್ತು ಬಿಜೆಪಿ. ಹೀಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕುಟುಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ