ಮಣಿಪುರ ಮಹಿಳೆಯರ ವಿವಸ್ತ್ರ ಕೇಸ್
ಪ್ರಧಾನಿ ಮೋದಿಗೆ ಕಾಂಗ್ರೆಸ್ನಿಂದ ಪ್ರಶ್ನೆ
ಈಗಲಾದ್ರೂ ಭೇಟಿ ಕೊಡಿ ಎಂದು ಕಿಡಿ!
ಬೆಂಗಳೂರು: ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ಜರುಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಗೆ ಇದುವರೆಗೂ ಅಲ್ಲಿಗೆ ಭೇಟಿ ನೀಡಬೇಕೆಂದು ಮನಸಾಗಲಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಸಂಬಂಧ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಬಗ್ಗೆ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯ ನಡೆಯಬೇಕಾಯ್ತು. ಗಲಭೆಗಳಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಮೋದಿಯವರಿಗೆ ಇದೆಲ್ಲಾ ಸಹಜ ಎನ್ನಿಸುತ್ತಿರಬಹುದೇ? ಎಂದು ಪ್ರಶ್ನೆ ಕೇಳಿದೆ.
ನರೇಂದ್ರ ಮೋದಿ ಹೇಳಿದ್ದೇನು?
ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತಹ ಹೇಯಕೃತ್ಯ ಮಣಿಪುರದಲ್ಲಿ ನಡೆದಿದೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾತಾಡಿದ ಪ್ರಧಾನಿ ಮೋದಿ, ‘ಮಣಿಪುರದ ಘಟನೆಯಿಂದ ನನ್ನನ್ನು ಕೆರಳಿಸಿದೆ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವ ಮಾತೇ ಇಲ್ಲ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ