newsfirstkannada.com

ಸೋನಿಯಾ ಗಾಂಧಿಯನ್ನ ‘ಭಾರತ ಮಾತೆ’ಗೆ ಹೋಲಿಕೆ ಮಾಡಿ ಕಾಂಗ್ರೆಸ್​ ಯಡವಟ್ಟು..!

Share :

18-09-2023

    ಕಾಂಗ್ರೆಸ್​ನಿಂದ ನಿನ್ನೆ ತೆಲಂಗಾಣದಲ್ಲಿ ಬೃಹತ್ ಸಮಾವೇಶ

    ತೆಲಂಗಾಣ ಕಾಂಗ್ರೆಸ್​ ವಿರುದ್ಧ ಬಿಜೆಪಿ ನಿಗಿನಿಗಿ ಕೆಂಡ

    ಬಿಜೆಪಿ ನಾಯಕರಿಂದ ಖಂಡನೆ, ಕ್ಷಮೆ ಕೇಳಲು ಆಗ್ರಹ

ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ಗೆ ಹೋಲಿಕೆ ಮಾಡಿರುವ ಫೋಟೋ ಒಂದು ದೇಶದಲ್ಲಿ ಸಂಚಲನ ಮೂಡಿಸಿದೆ. ತೆಲಂಗಾಣ ಕಾಂಗ್ರೆಸ್​ ಈ ನಡೆ ವಿರುದ್ಧ ಬಿಜೆಪಿ ನಿಗಿನಿಗಿ ಕೆಂಡಕಾರಿದೆ.

ಆಗಿದ್ದೇನು..?
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಿನ್ನೆ ಕಾಂಗ್ರೆಸ್​ ಬೃಹತ್ ಸಮಾವೇಶ ನಡೆಸಿತ್ತು. ಈ ವೇಳೆ ಕರ್ನಾಟಕ ಚುನಾವಣೆಯಲ್ಲಿ ಗ್ಯಾರಂಟಿ ಅಸ್ತ್ರಗಳನ್ನು ಪ್ರಯೋಗಿಸಿದಂತೆ, ಪ್ರಮುಖ 6 ಉಚಿತ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್​ನ ಪ್ರಮುಖರು ಭಾಗಿಯಾಗಿದ್ದರು.

ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ತೆಲಂಗಾಣ ಕಾಂಗ್ರೆಸ್​ ನಾಯಕರು ತಮ್ಮ ಫೋಟೋಗಳ ಜೊತೆಗೆ ರಾಷ್ಟ್ರೀಯ ನಾಯಕರ ಕಟೌಟ್​ ಮತ್ತು ಬ್ಯಾನರ್​​ಗಳನ್ನು ಹಾಕಿದ್ದರು. ಅದರ ಒಂದು ಕಟೌಟ್​ನಲ್ಲಿ ಸೋನಿಯಾ ಗಾಂಧಿಯನ್ನು ಭಾರತ ಮಾತೆಗೆ ಹೋಲಿಕೆ ಮಾಡಿದ್ದಾರೆ. ರಾಷ್ಟ್ರಧ್ವಜ ಬಣ್ಣದ ಸೀರೆಯನ್ನು ಸೋನಿಯಾ ಗಾಂಧಿಗೆ ತೊಡಿಸಿ, ಆಭರಣಗಳನ್ನು ಹಾಕಿ ಭಾರತ ಮಾತೆಯ ರೀತಿಯಲ್ಲಿ ಕಟೌಟ್ ನಿಲ್ಲಿಸಲಾಗಿದೆ.

ಈ ಕಟೌಟ್ ದೇಶಭಕ್ತರನ್ನು, ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, ಜಾಮೀನಿನ ಮೇಲೆ ಹೊರಗಿರುವ ಸೋನಿಯಾ ಗಾಂಧಿಯನ್ನು ಹೋಲಿಸಿ ಭಾರತ ಮಾತೆಗೆ ಕಾಂಗ್ರೆಸ್​ ಅವಮಾನಿಸಿದೆ. ಸೋನಿಯಾ ಕಾಂಗ್ರೆಸ್‌ನ ಹಗರಣಗಳ ಆರೋಪಿ ಮತ್ತು ಪಕ್ಷದ ರಾಜಮಾತೆ ಆಗಿರಬಹುದು. ಆದರೆ ಅವರು ಎಂದಿಗೂ ಸ್ಪಿರಿಟ್ ಆಫ್ ಭಾರತವನ್ನು ಪ್ರತಿನಿಧಿಸುವುದಿಲ್ಲ. ದೇಶದ ಕಲ್ಪನೆಗೆ ಸೋನಿಯಾಗಿಂತ ಹೆಚ್ಚಿನ ಹಾನಿಯನ್ನು ಯಾರೂ ಮಾಡಿಲ್ಲ. ಈ ಹೇಯ ಕೃತ್ಯಕ್ಕೆ ಕಾಂಗ್ರೆಸ್ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನಿಯಾ ಗಾಂಧಿಯನ್ನ ‘ಭಾರತ ಮಾತೆ’ಗೆ ಹೋಲಿಕೆ ಮಾಡಿ ಕಾಂಗ್ರೆಸ್​ ಯಡವಟ್ಟು..!

https://newsfirstlive.com/wp-content/uploads/2023/09/SONIA_GANDHI.jpg

Load More