ಇಂದು ಸಂಸತ್ನ ಮುಂಗಾರು ಅಧಿವೇಶನದ ಕೊನೆ ದಿನ
ವಿಪಕ್ಷಗಳಿಂದ ಇವತ್ತೂ ಕಲಾಪ ಬಹಿಷ್ಕಾರ ಸಾಧ್ಯತೆ
ಮಣಿಪುರ ವಿಚಾರದಲ್ಲಿ ಸಮರ್ಪಕ ಉತ್ತರಕ್ಕೆ ಪಟ್ಟು
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯನ್ನು ಲೋಕಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ. ಲೋಕಸಭೆ ಕಲಾಪದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆ ವೇಳೆ ಅಶಿಸ್ತು ಪ್ರದರ್ಶಿಸಿದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು, ಅಮಾನತು ಮಾಡಿದ್ದಾರೆ. ರಂಜನ್ ಚೌಧರಿ ಅವರು ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಸಮರ್ಪಕ ಉತ್ತರವನ್ನು ನೀಡಿಲ್ಲ ಎಂದು ಸದನದ ನಿಯಮದ ವಿರುದ್ಧ ನಡೆದುಕೊಂಡಿರೋದಕ್ಕೆ ಅಮಾನತು ಮಾಡಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ ಉತ್ತರ ಕೊಡುತ್ತಿದ್ದರು. ಆಗ ವಿಪಕ್ಷಗಳು ಮೋದಿ ಉತ್ತರಕ್ಕೆ ಅಡ್ಡಿಪಡಿಸಿ, ಗಲಾಟೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕಲಾಪದ ನಿಯಮದ ವಿರುದ್ಧ ನಡೆದುಕೊಂಡ ಕಾಂಗ್ರೆಸ್ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿಯನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಸ್ತಾಪ ಮಾಡಿದ್ದರು.
ಅಂದ್ಹಾಗೆ ಮುಂಗಾರು ಅಧಿವೇಶನಕ್ಕೆ ಇವತ್ತು ತೆರೆ ಬೀಳಲಿದೆ. ಈ ಬಾರಿಯ ಅಧಿವೇಶನ ಹೆಚ್ಚು ಚರ್ಚೆ ಇಲ್ಲದೇ, ಬರೀ ಗದ್ದಲ-ಗಲಾಟೆಯಲ್ಲೇ ಕಳೆದುಹೋಗಿದೆ. ಇವತ್ತು ಕೂಡ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ