newsfirstkannada.com

SP ಕಚೇರಿ ಮುಂದೆಯೇ ಹೆಂಡತಿಗೆ ಚಾಕು ಇರಿದು ಕೊಂದ ಕಾನ್​ಸ್ಟೇಬಲ್​​ ವಶಕ್ಕೆ.. ಇಬ್ಬರ ಮಧ್ಯೆ ಆಗಿದ್ದೇನು?

Share :

Published July 1, 2024 at 4:23pm

  ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್​ ಆಗಿದ್ದ ಆರೋಪಿ ಪತಿ

  ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ನಡೆದಿತ್ತು ಜಗಳ

  ಚಾಕು ಇರಿತಕ್ಕೆ ಒಳಗಾಗಿದ್ದ ಪತ್ನಿ ಸ್ಥಳದಲ್ಲೇ ರಕ್ತ ಸ್ರಾವದಿಂದ ಸಾವು

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ತನ್ನ ಕೈಯಾರೆ ಪತ್ನಿಗೆ ಚಾಕು ಇರಿದು ಕೊಲೆ ಮಾಡಿರೋ ಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಇದನ್ನೂ ಓದಿ: ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್

ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಎಂಬಾತ ಪತ್ನಿ ಮಮತಾಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿತಕ್ಕೆ ಒಳಗಾಗಿದ್ದ ಪತ್ನಿ ಸ್ಥಳದಲ್ಲೇ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾರೆ. ಇನ್ನು ಪತ್ನಿಯನ್ನು ಬರ್ಬರವಾಗಿ ಕೂಲೆ ಮಾಡಿ ಆರೋಪಿ ಪತಿ ಪರಾರಿಯಾಗಲು ಯತ್ನಿಸಿದ್ದ. ಆ ಕೂಡಲೇ ಆರೋಪಿ ಕಾನ್ಸ್ ಟೇಬಲ್ ಲೋಕನಾಥ್​ನನ್ನು ಎಸ್ಪಿ ಕಚೇರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಅರೆಸ್ಟ್​ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಅಸಲಿಗೆ ಈ ಇಬ್ಬರ ಮಧ್ಯೆ ಆಗಿದ್ದೇನು?

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತಂತೆ. ಇಂದು ಪತಿ ವಿರುದ್ಧ ಮಮತಾ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದಿದ್ದಾರೆ. ಚಾಕುವಿನಿಂದ ಇರಿದ ಪರಿಣಾಮ ಕೂಡಲೇ ಮಮತಾರನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SP ಕಚೇರಿ ಮುಂದೆಯೇ ಹೆಂಡತಿಗೆ ಚಾಕು ಇರಿದು ಕೊಂದ ಕಾನ್​ಸ್ಟೇಬಲ್​​ ವಶಕ್ಕೆ.. ಇಬ್ಬರ ಮಧ್ಯೆ ಆಗಿದ್ದೇನು?

https://newsfirstlive.com/wp-content/uploads/2024/07/hasana-death.jpg

Load More