newsfirstkannada.com

ಬೆಂಗಳೂರು, ಅಹ್ಮದಾಬಾದ್​ನಲ್ಲಿ ಅಮೆರಿಕಾದ ಹೊಸ ಕಾನ್ಸುಲೇಟ್ ಕಚೇರಿ -ಪ್ರಧಾನಿ ಮೋದಿ ಘೋಷಣೆ

Share :

24-06-2023

    ಅನಿವಾಸಿ ಭಾರತೀಯರ ಸಭೆಯಲ್ಲಿ ಮೋದಿ ಭರವಸೆ

    ಹೊಸ H1-B ವೀಸಾ ನಿಯಮದಿಂದ ಏನ್ ಪ್ರಯೋಜನ

    ಮೂರು ದಿನಗಳ ಮೋದಿ ಅಮೆರಿಕ ಪ್ರವಾಸ ಅಂತ್ಯ

ಪ್ರಧಾನಿ ಮೋದಿ ಅಮೆರಿಕ ಭೇಟಿಯ ಸಂದರ್ಭವನ್ನು ಅಲ್ಲಿರುವ ಲಕ್ಷಾಂತರ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದರು. ಕೊನೆಗೂ ಮೋದಿ, ಅನಿವಾಸಿ ಭಾರತೀಯರಿಗೆ ಗುಡ್​ನ್ಯೂಸ್ ನೀಡಿದ್ದಾರೆ.

ಹೌದು, ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಸೆಂಟರ್​ನಲ್ಲಿ ಶುಕ್ರವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ‘ನೀವು ಈ ಸಭಾಂಗಣವನ್ನು ಭಾರತದ ಪರಿಪೂರ್ಣ ನಕ್ಷೆಯಂತೆ ಮಾಡಿದ್ದೀರಿ. ಇಲ್ಲಿ ಮಿನಿ ಇಂಡಿಯಾ ಹುಟ್ಟಿಕೊಂಡಂತೆ ಕಾಣುತ್ತಿದೆ. ಅಮೆರಿಕಾದಲ್ಲಿ ಭಾರತದ ಸುಂದರ ಚಿತ್ರವನ್ನು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು’ ಎಂದರು.

ನಂತರ H1-B ವೀಸಾ ಕುರಿತು ಮಾತನಾಡಿ, ಭಾರತವು ಅಮೆರಿಕದಲ್ಲಿ ಹೊಸ ಕಾನ್ಸುಲೇಟ್ ಕಚೇರಿ ತೆರೆಯಲಿದೆ. ಮಾತ್ರವಲ್ಲ, ನಮ್ಮ ದೇಶದ ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿಯೂ ಅಮೆರಿಕದ ಹೊಸ ಕಾನ್ಸುಲೇಟ್‌ಗಳು ಪ್ರಾರಂಭವಾಗಲಿವೆ ಎಂದು ಘೋಷಣೆ ಮಾಡಿದ್ದಾರೆ.

H1-B ವೀಸಾ ನಿಯಮಗಳು ಕಠಿಣವಾಗಿದ್ದವು. ಅವುಗಳಲ್ಲಿ ಕೆಲವೊಂದನ್ನು ಮಾರ್ಪಾಡು ಮಾಡಿ ಸರಳೀಕರಿಸಲು ನಿರ್ಧರಿಸಿದ್ದೇವೆ. ಹೊಸ ನಿಯಮದ ಪ್ರಕಾರ H1-B ವೀಸಾ ನವೀಕರಿಸಲು ಭಾರತೀಯರು ಅಮೆರಿಕದಿಂದ ಹೊರಗೆ ಹೋಗಬೇಕಾಗಿಲ್ಲ. ಅಮೆರಿಕದಲ್ಲಿ ಇದ್ದುಕೊಂಡೇ ವೀಸಾ ನವೀಕರಿಸಿಕೊಳ್ಳಬಹುದು ಅಂತಾ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್​ಗೆ ಧನ್ಯವಾದ ಅರ್ಪಿಸಿದರು. ಭಾರತ-ಯುಎಸ್ ಒಪ್ಪಂದಗಳು ಎತ್ತರಕ್ಕೆ ಕೊಂಡೊಯ್ಯಲಿದೆ. ಅದಕ್ಕೆ ಸಹಕಾರ ನೀಡಿದ್ದು ಬೈಡನ್ ಎಂದು ಬಣ್ಣಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು, ಅಹ್ಮದಾಬಾದ್​ನಲ್ಲಿ ಅಮೆರಿಕಾದ ಹೊಸ ಕಾನ್ಸುಲೇಟ್ ಕಚೇರಿ -ಪ್ರಧಾನಿ ಮೋದಿ ಘೋಷಣೆ

https://newsfirstlive.com/wp-content/uploads/2023/06/MODI-5.jpg

Load More