newsfirstkannada.com

ರೈಲು ಪ್ರಯಾಣದ ವೇಳೆ ವಿಷ ಆಹಾರ ಸೇವನೆ.. 8 ಯುವಕರು ಅಸ್ವಸ್ಥ

Share :

12-09-2023

  ಗೋವಾದಲ್ಲಿ ವಿಷ ಆಹಾರ ಸೇವಿಸಿದ ಯುವಕರು

  ಬೆಳಗಾವಿಗೆ ಬರುತ್ತಿದ್ದಂತೆ ಯುವಕರ ಸ್ಥಿತಿ ಗಂಭೀರ

  ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಆರು ಜನ ಯುವಕರು

ಬೆಳಗಾವಿ: ರೈಲು ಪ್ರಯಾಣದ ವೇಳೆ ವಿಷ ಆಹಾರ ಸೇವಿಸಿ 8 ಜನ ಯುವಕರು ಅಸ್ವಸ್ಥಗೊಂಡ ಘಟನೆ ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಬೆಳಕಿಗೆ ಬಂದಿದೆ.

ಗೋವಾದಲ್ಲಿ ವಿಷ ಆಹಾರ ಸೇವಿಸಿದ ಯುವಕರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ರೈಲು ಬೆಳಗಾವಿಗೆ ಬರುತ್ತಿದ್ದಂತೆ ಯುವಕರು ಸ್ಥಿತಿ ಗಂಭೀರವಾಗಿದೆ. ಇದನ್ನು ಕಂಡ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಬಳಿಕ ಎಲ್ಲ ಎಂಟು ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಮತ್ತಿಬ್ಬರು ಯುವಕರು ತೀವ್ರ ಅಸ್ವಸ್ಥರಾಗಿರೋದಾಗಿ ತಿಳಿದುಬಂದಿದೆ.

ವಿಷ ಆಹಾರ ಸೇವಿಸಿದ ಎಲ್ಲರೂ ಉತ್ತರ ಪ್ರದೇಶದ ಝಾನ್ಸಿ ಮೂಲದವರೆಂಬ ಮಾಹಿತಿ ರೈಲ್ವೇ ಪೊಲೀಸರಿಗೆ ಲಭ್ಯವಾಗಿದೆ. ಉದ್ಯೋಗ ‌ಅರಿಸಿ ಉತ್ತರ ಪ್ರದೇಶದಿಂದ ಗೋವಾಕ್ಕೆ ಬಂದಿದ್ದರು. ಮರಳಿ ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ‌ತಮ್ಮೂರಿಗೆ ಮರಳುತ್ತಿದ್ದಾಗ ಅಸ್ವಸ್ಥರಾಗಿದ್ದಾರೆ.

ಯುವಕರು ಮಾರ್ಗ ಮಧ್ಯೆ ವಿಷ ಆಹಾರ ಸೇವಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆಗೆ ‌ನಗರ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸರು ಭೇಟಿ,‌ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲು ಪ್ರಯಾಣದ ವೇಳೆ ವಿಷ ಆಹಾರ ಸೇವನೆ.. 8 ಯುವಕರು ಅಸ್ವಸ್ಥ

https://newsfirstlive.com/wp-content/uploads/2023/09/Belagavi.jpg

Load More