newsfirstkannada.com

ಔಷಧದ ಬದಲು ಕ್ರಿಮಿನಾಶಕ ಸೇವಿಸಿದ ಆರೋಪ; ಎಂಬಿಎ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಆಗಿದ್ದೇನು?

Share :

13-08-2023

  ಔಷಧದ ಬದಲು ಕ್ರಿಮಿನಾಶಕ ಸೇವಿಸಿದ್ನಾ MBA ವಿದ್ಯಾರ್ಥಿ?

  ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಯುವಕ ಆಸ್ಪತ್ರೆಗೆ ದಾಖಲು

  ಔಷಧ ಬಿಟ್ಟು ಕ್ರಿಮಿನಾಶಕ ಸೇವಿಸಿದ್ದೇಕೆ ಅನ್ನೋ ಬಗ್ಗೆ ತನಿಖೆ

ದಾವಣಗೆರೆ: ಔಷಧದ ಬದಲು ಕ್ರಿಮಿನಾಶಕ ಸೇವಿಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ ಎನ್ನಲಾದ ದಾರುಣ ಘಟನೆ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್‌ನಲ್ಲಿ ನಡೆದಿದೆ. ವಿಜಯಕೃಷ್ಣ (24) ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ದಾವಣಗೆರೆಯಲ್ಲಿ ಎಂಬಿಎ ಓದುತ್ತಿದ್ದ ವಿಜಯ್ ಕೃಷ್ಣ ಸಾಕಷ್ಟು ದಿನಗಳಿಂದ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ. ಹೊಟ್ಟೆ ನೋವಿಗೆ ನಾಟಿ ಔಷಧ ನೀಡಿ ಚಿಕಿತ್ಸೆ ಕೊಡಿಸಿದರು ಗುಣಮುಖನಾಗಿರಲಿಲ್ಲ. ಮೊನ್ನೆ ಮಧ್ಯಾಹ್ನ ಔಷಧ ಸೇವಿಸುವ ಬದಲಾಗಿ ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: Breaking News: ಪ್ರವಾಸಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

ವಿಜಯ್ ಕೃಷ್ಣ ಒದ್ದಾಡುತ್ತಿದ್ದನ್ನು ನೋಡಿ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಕೃಷ್ಣ ಇಂದು ಸಾವನ್ನಪ್ಪಿದ್ದಾರೆ. ಎಂಬಿಎ ವಿದ್ಯಾರ್ಥಿಯಾಗಿದ್ದ ವಿಜಯ್ ಕೃಷ್ಣ ಔಷಧ ಬಿಟ್ಟು ಕ್ರಿಮಿನಾಶಕ ಹೇಗೆ ಸೇವಿಸಿದ ಅನ್ನೋ ಅನುಮಾನ ಕಾಡುತ್ತಿದೆ. ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಔಷಧದ ಬದಲು ಕ್ರಿಮಿನಾಶಕ ಸೇವಿಸಿದ ಆರೋಪ; ಎಂಬಿಎ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಆಗಿದ್ದೇನು?

https://newsfirstlive.com/wp-content/uploads/2023/08/Davangere-Boy-Death.jpg

Load More