newsfirstkannada.com

ಮಂಗಳೂರಿನಲ್ಲಿ ಖೋಟಾ ನೋಟಿನ ಹಾವಳಿ.. ಯೂಟ್ಯೂಬ್ ನೋಡಿ ನೋಟು ಮುದ್ರಿಸಿದ್ದ ಖದೀಮರು ಅರೆಸ್ಟ್​

Share :

Published August 20, 2024 at 11:38am

    ನಕಲಿ ನೋಟಿನ ಜಾಲ ಭೇದಿಸಿದ ಮಂಗಳೂರು ಸಿಸಿಬಿ ಪೊಲೀಸರು

    ಕೇರಳದಿಂದ ಮಂಗಳೂರಿಗೆ ಬಂದು ಖೋಟಾ ನೋಟು ಮುದ್ರಿಸಿ ಚಲಾವಣೆ

    ಬಂಧಿತ ಆರೋಪಿಗಳಿಂದ ಪೊಲೀಸರು ಏನೆಲ್ಲಾ ವಶಪಡಿಸಿಕೊಂಡಿದ್ದಾರೆ?

ಮಂಗಳೂರು: ಕೇರಳದಿಂದ ಮಂಗಳೂರಿಗೆ ಬಂದು ಖೋಟಾ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಕಾಸರಗೋಡಿನ ಕೊಳತ್ತೂರು ನಿವಾಸಿ ವಿ. ಪ್ರಿಯೇಶ್ (38), ಮುಳಿಯಾರು ನಿವಾಸಿ ವಿನೋದ್ ಕುಮಾರ್ ಕೆ. (33), ಪೆರಿಯಾ ನಿವಾಸಿ ಅಬ್ದುಲ್ ಖಾದರ್ ಎಸ್.ಎ. (58), ಪುತ್ತೂರಿನ ಆಯೂಬ್ ಖಾನ್ (51) ಬಂಧಿತ ಆರೋಪಿಗಳು.

ಇದನ್ನೂ ಓದಿ: ಸಮೋಸಾ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಒಟ್ಟು ನಾಲ್ಕು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 500ರೂಪಾಯಿ ಮುಖಬೆಲೆಯ 2,13,500 ರೂಪಾಯಿಯ 427 ಖೋಟಾ ನೋಟುಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಬಂಧಿತರಿಂದ 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು, ಬಂಧಿತ ಆರೋಪಿಗಳು ಯೂಟ್ಯೂಬ್ ನೋಡಿ ನೋಟು ಮುದ್ರಣ ಕಲಿತುಕೊಂಡಿದ್ದರಂತೆ. ಆರೋಪಿ ಪ್ರಿಯೇಶ್ ಕಾಸರಗೋಡಿನ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್​ನಲ್ಲಿ ನಕಲಿ ನೋಟು ಮುದ್ರಣ ಮಾಡುತ್ತಿದ್ದನಂತೆ. ಸದ್ಯ ಖೋಟಾ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಿನಲ್ಲಿ ಖೋಟಾ ನೋಟಿನ ಹಾವಳಿ.. ಯೂಟ್ಯೂಬ್ ನೋಡಿ ನೋಟು ಮುದ್ರಿಸಿದ್ದ ಖದೀಮರು ಅರೆಸ್ಟ್​

https://newsfirstlive.com/wp-content/uploads/2024/08/mng.jpg

Load More