newsfirstkannada.com

‘ನೀವು ಬೇಲ್ ಮೇಲೆ ಇರುವ ಜನ’ ಎಂದು DKSಗೆ ಟಾಂಗ್ ಕೊಡುತ್ತಲೇ ಸರ್ಕಾರಕ್ಕೆ 11 ಪ್ರಶ್ನೆ ಕೇಳಿದ ಅಶೋಕ್..!

Share :

10-08-2023

  ಗುತ್ತಿಗೆದಾರರ ಆಗ್ರಹಕ್ಕೆ ಬಿಜೆಪಿ ನಾಯಕರು ಸಾಥ್

  ‘ನೀವು ಸತ್ಯ ಹರಿಶ್ಚಂದ್ರರೇ ಆಗಿದ್ದರೆ..’ ಅಶೋಕ್ ಸವಾಲ್

  ನಿಮ್ಮದು ಬಿನ್​ ಲಾಡೆನ್ ಸರ್ಕಾರನಾ -ಅಶೋಕ್ ಪ್ರಶ್ನೆ

ಕಾಮಗಾರಿಗಳ ಬಾಕಿ ಬಿಲ್ ಪಾವತಿ ವಿಳಂಬದಿಂದಾಗಿ ಕಂಗಾಲಾಗಿರುವ ಬಿಬಿಎಂಪಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದು, ರಾಜ್ಯಪಾಲರ ಬಳಿಯೂ ಕಮಿಷನ್‌ ಬಗ್ಗೆ ಆರೋಪಿಸಿ ತಮ್ಮ ಬಿಲ್‌ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ. ನಿನ್ನೆ ಗುತ್ತಿಗೆದಾರರ ಸಂಘದವರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಕಷ್ಟ ತೋಡಿಕೊಂಡಿದ್ದರು. ಈ ಬೆನ್ನಲ್ಲೇ ಇವತ್ತು ಗುತ್ತಿಗೆದಾರರ ಸಂಘವು ಬಿಜೆಪಿ ನಾಯಕ ಆರ್​.ಅಶೋಕ್ ಅವರನ್ನು ಭೇಟಿ ಮಾಡಿತು. 

ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅಶೋಕ್, 11 ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್.ಅಶೋಕ್ ಜೊತೆಗೆ ಶಾಸಕರಾದ ಬೈರತಿ ಬಸವರಾಜು, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಎಸ್.ರಘು, ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಕೂಡ ಉಪಸ್ಥಿತಿ ಇದ್ದರು.

ಅಶೋಕ್ ಕೇಳಿದ 11 ಪ್ರಶ್ನೆಗಳು

 1. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಇದರ ಮಧ್ಯೆ ಹಲವು ಸಮಸ್ಯೆಗಳಿವೆ. ಕಾಂಗ್ರೆಸ್​ನವರು ಒಂದೇ ಒಂದು ರೂಪಾಯಿ ತಿನ್ನಲ್ಲ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಈಗ ಗುತ್ತಿಗೆದಾರರ ಹಣ ತಡೆದಿರೋದು ಯಾಕೆ..?
 2. ಗುತ್ತಿಗೆದಾರರಿಗೆ ಪ್ಲಾನ್ ಅಪ್ರೂಪಲ್ ಮಾಡಲು ಹಿಂದೆ-ಮುಂದೆ ಮಾಡುತ್ತಿರುವುದು ಏಕೆ?
 3. ಯಾವುದೇ ಕಾಮಗಾರಿ ನೀಡಬೇಕು ಅಂದರೆ 26 ಕಂಡೀಷನ್ಸ್ ಹಾಕುತ್ತಿದ್ದಾರೆ. ಅದೆಲ್ಲ ಸರಿಹೋಗಬೇಕು ಅಂದರೆ ಮುಂದಿನ 26 ವರ್ಷಗಳ ಕಾಲ ಆಗಿಬಿಡುತ್ತದೆ.
 4. ಕಳೆದ ಮೂರು ವರ್ಷಗಳ ಹಿಂದಿನ ಕಳೆ ಕಿತ್ತಿರುವುದು ಎಲ್ಲಿ? ಅದನ್ನು ಎಲ್ಲಿಗೆ ಹಾಕಿದ್ದೀರಿ?
 5. ನೀವು ಕಿತ್ತಿರುವ ಕಳೆ ನೋಡಬೇಕು ಅಂದರೆ ಸ್ಯಾಟಲೈಟ್‌ಗಳ ಮೂಲಕ ಫೋಟೋ ತೆಗೆಯಬೇಕು ಅಷ್ಟೇ. -ಅಶೋಕ್
 6. ಬೆಂಗಳೂರಿನಲ್ಲಿ‌ ಯಾವುದೇ ವರ್ಗಾವಣೆ ಮಾಡುವ ಮುನ್ನ ನನ್ನ ಗಮನಕ್ಕೆ ತರದೇ ಮಾಡುವಂತಿಲ್ಲ ಎಂದು ಬೆಂಗಳೂರು ಉಸ್ತುವಾರಿ ಸಚಿವರು ಹೇಳಿದ್ದಾರೆ. ಇದರ ಉದ್ದೇಶ ಏನು? ನಿಮ್ಮ ಪ್ಲಾನ್ ಏನು ಎಂಬುವುದು ನಮಗೆ ಗೊತ್ತಿದೆ.
 7. ಗುತ್ತಿಗೆದಾರರಿಗೆ ಈಗ ದಾಖಲೆಗಳನ್ನು ಸರಿಯಾಗಿ ಒದಗಿಸಿಲ್ಲ ಅಂದರೆ, ನಿಮಗೆ ಹಣ ನೀಡುವುದಿಲ್ಲ ಎಂದು ಹೇಳಲು ವೇದಿಕೆ ರೂಪಿಸಿಕೊಳ್ಳುತ್ತಿರುವ ಹುನ್ನಾರವೇ?
 8. ಗುತ್ತಿಗೆದಾರರ ಕಾಮಗಾರಿಗಳನ್ನು ಕಳಪೆ ಅಂತಾರೆ. ನೀವು ಸತ್ಯ ಹರಿಶ್ಚಂದ್ರ ಆಗಿದ್ರೆ ಈಗಿನ ಕೆಲಸ ಮಾತ್ರ ಏಕೆ? 2013 ರಿಂದ ಆಗಿರುವ ಕೆಲಸಗಳನ್ನು ತನಿಖೆಗೆ ಕೊಡಿ.
 9. ನಾನು ಯಾರಿಗೂ ಭಯ ಬೀಳುವುದಿಲ್ಲ ಅಂತೀರಿ. ನಿಮ್ಮದೇನು, ಬಿನ್ ಲಾಡೆನ್ ಸರ್ಕಾರನಾ?
  ನೀವು ಬೇಲ್ ಮೇಲೆ ಇರುವ ಜನ, ನೀವು ಸತ್ಯ ಹರಿಶ್ಚಂದ್ರರಾ? ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ -ಡಿಕೆಎಸ್​ಗೆ ಅಶೋಕ್ ಟಾಂಗ್
 10. ಇದೇನಾ ಬ್ರ್ಯಾಂಡ್ ಬೆಂಗಳೂರು? ರಸ್ತೆ ರಸ್ತೆಯಲ್ಲಿ ಕಸ ಬಿದ್ದಿವೆ. ಪಾರ್ಕ್‌ನಲ್ಲಿ ಕಸ ತೆಗೆಯುವವರು ಇಲ್ಲ.
  ನಮ್ಮ ಮೇಲೆ 40%, ಆರೋಪ ಮಾಡಿ, ಅಧಿಕಾರಕ್ಕೆ ಬಂದಿದ್ದೀರಿ. ಈಗ ನಿಮ್ಮ ಮೇಲೆ 15% ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಏನು?
 11. ನೀವು ಕಮಿಷನ್ ಕೇಳಿಲ್ಲ ಅಂದರೆ, ಗುತ್ತಿಗೆದಾರರು ಅಜ್ಜಯ್ಯನ ದೇವಾಲಯಕ್ಕೆ ಹೋಗಿ ಆಣೆ ಮಾಡಿ ಎಂದು ಕೇಳ್ತಾರೆ.. ಒಪ್ಪುತ್ತೀರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನೀವು ಬೇಲ್ ಮೇಲೆ ಇರುವ ಜನ’ ಎಂದು DKSಗೆ ಟಾಂಗ್ ಕೊಡುತ್ತಲೇ ಸರ್ಕಾರಕ್ಕೆ 11 ಪ್ರಶ್ನೆ ಕೇಳಿದ ಅಶೋಕ್..!

https://newsfirstlive.com/wp-content/uploads/2023/08/DKSASHOK.jpg

Load More