Advertisment

ಗುತ್ತಿಗೆದಾರನ ಬಳಿ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ.. ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ PWD ಇಂಜಿನಿಯರ್​

author-image
AS Harshith
Updated On
ಗುತ್ತಿಗೆದಾರನ ಬಳಿ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ.. ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ PWD ಇಂಜಿನಿಯರ್​ 
Advertisment
  • PWD ಇಂಜಿನಿಯರ್​ ಲಂಚಾವತಾರಕ್ಕೆ ಗುತ್ತಿಗೆದಾರ ಸುಸ್ತು
  • 55 ಸಾವಿರ ಲಂಚ ನೀಡಿದ್ರು ಇನ್ನು ಬೇಕು ಎಂದ ಇಂಜಿನಿಯರ್
  • ಲೋಕಾಯುಕ್ತರ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ PWD ಇಂಜಿನಿಯರ್​

ಮಧ್ಯಪ್ರದೇಶ: ಗ್ವಾಲಿಯಾರ್​ನಲ್ಲಿ ಲಂಚ ಪಡೆಯುತ್ತಿದ್ದ PWD ಇಂಜಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಂಕಜ್ ಗುಪ್ತಾ ಎಂದು ಗುರುತಿಸಲಾಗಿದೆ.

Advertisment

ಪಿ ಕೆ ಗುಪ್ತಾ ಎಕ್ಸಿಕ್ಯೂಟೀವ್​ ಇಂಜಿನಿಯರಿಂಗ್​ ಬಿಲ್ ಪಾಸ್ ಮಾಡಲು ಬಂದ ಗುತ್ತಿಗೆದಾರ ಮಹೇಂದ್ರ ಸಿಂಗ್​ ಎಂಬವರ ಬಳಿ 75 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಕಂಗಾಲಾದ ಮಹೇಂದ್ರ ಸಿಂಗ್​ 55 ಸಾವಿರ ಲಂಚ ನೀಡಿದ್ದಾರೆ.

ಮಹೇಂದ್ರ ಸಿಂಗ್ ಅವರು ಭಿಂಡ್ ಜಿಲ್ಲೆಯ ಕಲೆಕ್ಟರ್ ಅವರ ಬಂಗಲೆಯಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಫಿಟ್ಟಿಂಗ್ ಕೆಲಸ ಮಾಡಿದರು. ಬಳಿಕ ಬಿಲ್ ಪಾಸ್ ಮಾಡಲು PWD ಕಾರ್ಯನಿರ್ವಾಹಕ ಇಂಜಿನಿಯರ್ ಪಂಕಜ್ ಕುಮಾರ್ ಗುಪ್ತಾ ಅವರ ಮನೆ ಬಾಗಿಲಿಗೆ ಹೋದರು. ಆದರೆ ಪಂಕಜ್​ ಗುಪ್ತಾ ಒಂದೆರಡಲ್ಲ ಬರೋಬ್ಬರಿ 75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟರು. ಬಳಿಕ ಗುತ್ತಿಗೆದಾರರು ಹಾಗೋ ಹೀಗೋ ₹55 ಸಾವಿರ ನೀಡಿದ್ದಾರೆ.

ಇನ್ನು ಹಣ ಕೊಟ್ಟರು PWD ಅಧಿಕಾರಿ ಗುತ್ತಿಗೆದಾರನ ಬಳಿ ಮತ್ತಷ್ಟು ಹಣ ಕೇಳಿದ್ದಾನೆ. ಇದರಿಂದ ಬೇಸತ್ತಾ ಗುತ್ತಿಗೆದಾರ ಮಹೇಂದ್ರ ಸಿಂಗ್​ ಪೋಲೀಸರ ಬಳಿ ದೂರು ನೀಡಿದ್ದಾರೆ. ಬಳಿಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಆರೋಪಿ ಪಂಕಜ್​ ಕುಮಾರ್​ ಗುಪ್ತನನ್ನ ಬಂಧಿಸಿದ್ದಾರೆ.

Advertisment

ಇನ್ನು ಬಂಧನದಿಂದ ತಪ್ಪಿಸಿಕೊಳ್ಳಲು PWD ಪಿ.ಕೆ ಗುಪ್ತಾ ಪೊಲೀಸರ ಕಾಲು ಮುಗಿಯುತ್ತಾ, ಅಣ್ಣಾ ನಾನು ಸಾಯುತ್ತೇನೆ, ನಿನ್ನ ಪಾದಮುಟ್ಟುತ್ತೇನೆ, ಹೃದಯಾಘಾತವಾಗುತ್ತಿದೆ ಎಂದು ಹೈಡ್ರಾಮಾ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment