newsfirstkannada.com

ಡಿಕೆಶಿಯಿಂದ ಸಿದ್ದು ಸರ್ಕಾರಕ್ಕೆ ಸಂಕಷ್ಟ; ಬಿಎಸ್​​ವೈ ಭೇಟಿಯಾದ ಗುತ್ತಿಗೆದಾರರು; ಏನಿದು ಹೊಸ ಟ್ವಿಸ್ಟ್​​?

Share :

10-08-2023

    ಕಾಂಗ್ರೆಸ್​ ಸರ್ಕಾರಕ್ಕೂ ಎದುರಾಯ್ತಾ ಕಮಿಷನ್​ ಕಂಟಕ?

    ಕಾಮಗಾರಿ ಬಿಲ್​ ಪಾವತಿಗಾಗಿ ಗುತ್ತಿಗೆದಾರರ ಒತ್ತಾಯ..!

    ಮಾಜಿ ಸಿಎಂ ಬಿಎಸ್​ವೈ ಭೇಟಿಯಾದ ಗುತ್ತಿಗೆದಾರ ಸಂಘ

ಬೆಂಗಳೂರು: ಕಾಮಗಾರಿಗಳ ಬಾಕಿ ಬಿಲ್ ಪಾವತಿ ವಿಳಂಬದಿಂದಾಗಿ ಕಂಗಾಲಾಗಿರುವ ಬಿಬಿಎಂಪಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದು, ರಾಜ್ಯಪಾಲರ ಬಳಿಯೂ ಕಮಿಷನ್‌ ಬಗ್ಗೆ ಆರೋಪಿಸಿ ತಮ್ಮ ಬಿಲ್‌ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ. ಆದ್ರೀಗ ಗುತ್ತಿಗೆದಾರರ ಸಂಘದವರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಕಷ್ಟ ತೋಡಿಕೊಂಡಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು 40 ಪರ್ಸೆಂಟ್​ ಕಮಿಷನ್​ ಆರೋಪ ಮಾಡಿದ್ರು. ಇದನ್ನು ಎನ್​ಕ್ಯಾಷ್​ ಮಾಡಿಕೊಂಡಿದ್ದ ಕಾಂಗ್ರೆಸ್​ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಬಿಜೆಪಿ ಸರ್ಕಾರ 40 ಪರ್ಸೆಂಟ್​ ಸರ್ಕಾರ ಎಂದು ಪ್ರಚಾರ ಮಾಡುವಲ್ಲಿ ಸಕ್ಸಸ್​ ಆಗಿದ್ದರು. ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್​ ವಿರುದ್ಧವೂ ಕಮೀಷನ್​ ಆರೋಪ ಕೇಳಿ ಬಂದಿದೆ. ಇದೀಗ ಈ ಆರೋಪ ರಾಜಕೀಯ ಕಿತ್ತಾಟಕ್ಕೆ ವೇದಿಕೆಯಾಗುವ ಲಕ್ಷಣಗಳು ಗೋಚರಿಸಿವೆ.

ಗುತ್ತಿಗೆದಾರರ ಸಂಘದಿಂದ ಮಾಜಿ ಸಿಎಂ ಬಿಎಸ್​ವೈ ಭೇಟಿ

ಹೌದು.. ಬೆಂಗಳೂರು ನಗರಾಭಿವೃದ್ಧಿ ಸಚಿವರ ಸೂಚನೆಯಂತೆ, ಸುಮಾರು 2 ಸಾವಿರ ಕೋಟಿ ಬಾಕಿ ಹಣವನ್ನು ತಡೆ ಹಿಡಿಯಲಾಗಿದೆ. ಕಾಮಗಾರಿ ಹಣ ನೀಡಲು ದುಡ್ಡು ಕೇಳ್ತಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರು ಆರೋಪ ಮಾಡಿದ್ದರು. ಹಾಗೂ ಬಾಕಿ ಹಣ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಗುತ್ತಿಗೆದಾರರು, ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು. ಇತ್ತೀಚೆಗೆ ರಾಜ್ಯಪಾಲರನ್ನು ಕೂಡ ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈಗ ಮತ್ತೆ ಗುತ್ತಿಗೆದಾರರು ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿರೋದು ತೀವ್ರ ಕುತೂಹಲ ಮೂಡಿಸಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೋರಾಟಕ್ಕೆ ಕಾಂಗ್ರೆಸ್​ ನಾಯಕರು ಕೈ ಜೋಡಿಸಿದ್ರು. ಇದೀಗ ಬಿಬಿಎಂಪಿ ಗುತ್ತಿಗೆದಾರರ ಹೋರಾಟಕ್ಕೆ ಬಿಜೆಪಿ ಬೆಂಬಲಿಸಲು ಮುಂದಾಯ್ತಾ ಎಂಬ ಪ್ರಶ್ನೆ ಉದ್ಬವವಾಗಿದೆ. ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸಕ್ಕೆ ಗುತ್ತಿಗೆದಾರರು ತೆರಳಿ, ಚರ್ಚೆ ನಡೆಸಿದ್ದಾರೆ. ಬಿಎಸ್​ವೈ ಭೇಟಿ ಬಳಿಕ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದ್ದಾರೆ. ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್​ ಸರ್ಕಾರವನ್ನು ಕುಟುಕಿದ ಬಿ.ವೈ.ವಿಜಯೇಂದ್ರ

ಗುತ್ತಿಗೆದಾರರು ಬಿಎಸ್​ವೈ ಭೇಟಿಯಾದ ಬೆನ್ನಲ್ಲೇ, ಶಾಸಕ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಟ್ವಿಟರ್​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಮಾಡ್ತಿದ್ದ ಕಾಂಗ್ರೆಸ್ಸಿಗರು, ಇದೀಗ ವಸೂಲಿ ದಂಧೆಯಲ್ಲಿ ನೂರರಷ್ಟು ಮುಗುಳಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ. ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 1೦೦% ಮುಳುಗಿ ಹೋಗಿದ್ದಾರೆ ಎಂದಿದ್ದಾರೆ ವಿಜಯೇಂದ್ರ.

ತೆಲಂಗಾಣ ಸಚಿವನಿಂದ ಡಿಕೆಶಿ, ಕಾಂಗ್ರೆಸ್​ ಬಗ್ಗೆ ವ್ಯಂಗ್ಯ

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಳಿ ಬಂದಿರುವ ಕಮಿಷನ್​ ಆರೋಪದ ಬಗ್ಗೆ ತೆಲಂಗಾಣದ ಸಚಿವ ಕೆಟಿಆರ್​ ಟ್ವಿಟರ್​ ಮೂಲಕ ಲೇವಡಿ ಮಾಡಿದ್ದಾರೆ. ಸ್ಕ್ಯಾಮ್​ಗ್ರೆಸ್​ನ ನಿಜ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ. ತೆಲಂಗಾಣದ ಸಚಿವ ಮಾಡಿರುವ ಟ್ವೀಟ್​ ಅನ್ನು ಗುತ್ತಿಗೆದಾರರ ಸಂಘ ರಾಹುಲ್​ ಗಾಂಧಿಯವರಿಗೆ ಟಾಗ್​ ಮಾಡಿದ್ದಾರೆ.

ಗುತ್ತಿಗೆದಾರರಿಂದ ಬಿಎಸ್​ವೈ ಭೇಟಿಗೆ ಡಿಕೆಶಿ ಟಾಂಗ್

ಗುತ್ತಿಗೆದಾರ ಸಂಘದಿಂದ ಬಿಎಸ್​ವೈ ಭೇಟಿ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದು, ಯಾರು ಯಾರನ್ನು ಭೇಟಿಯಾಗ್ತಿದ್ದಾರೆ. ಏನು ಸಲಹೆ ಕೊಡ್ತಿದ್ದಾರೆ ಅನ್ನೋದು ಗೊತ್ತು. ಹೋಗುವವರನ್ನು ಯಾರು ತಡೆಯಲು ಆಗಲ್ಲ. ಅವರ ಹೋರಾಟಕ್ಕೆ ಜಯ ಸಿಗಲಿ ಎಂದು ಡಿ.ಕೆ.ಶಿವಕುಮಾರ್​ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ರು. ಇನ್ನು ತೆಲಂಗಾಣ ಸಚಿವ ಟ್ವೀಟ್​ ಬಗ್ಗೆ ಮಾತನಾಡಿದ ಡಿಕೆ, ಅವರಿಗೆ ಒಳ್ಳೆಯದಾಗಲಿ ಎಂದ್ರು.

ಒಟ್ಟಾರೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಮೂರು ತಿಂಗಳು ಆಗಿಲ್ಲ.. ಅದಾಗಲೇ ಸಾಲು ಸಾಲು ಆರೋಪಗಳು ಸರ್ಕಾರದ ಕೈಗೆ ಸುತ್ತಿಕೊಳ್ಳುತ್ತಿವೆ. ಮತ್ತೊಂದೆಡೆ ಡಿಕೆಶಿ ವಿರುದ್ಧ ಕಮಿಷನ್ ಆರೋಪ ರಾಜಕೀಯ ತಿರುವು ಪಡೆದುಕೊಳ್ತಿದ್ಯಾ ಎಂಬ ಅನುಮಾನ ಕಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿಯಿಂದ ಸಿದ್ದು ಸರ್ಕಾರಕ್ಕೆ ಸಂಕಷ್ಟ; ಬಿಎಸ್​​ವೈ ಭೇಟಿಯಾದ ಗುತ್ತಿಗೆದಾರರು; ಏನಿದು ಹೊಸ ಟ್ವಿಸ್ಟ್​​?

https://newsfirstlive.com/wp-content/uploads/2023/08/Siddu_DKS2.jpg

Load More