/newsfirstlive-kannada/media/post_attachments/wp-content/uploads/2023/11/Abdul-Razak.jpg)
ಬಾಲಿವುಡ್​​ ನಟಿ ಐಶ್ವರ್ಯಾ ರೈ ಬಗ್ಗೆ ನಾಲಿಗೆ ಹರಿಬಿಟ್ಟದ್ದ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಅಬ್ದುಲ್​ ರಜಾಕ್​​​​ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಒಂದರಲ್ಲಿ ಪಾಕಿಸ್ತಾನ ತಂಡವನ್ನು ಟೀಕಿಸುವ ಬರದಲ್ಲಿ ನಟಿ ಐಶ್ವರ್ಯಾ ರೈ ಹೆಸರು ಬಳಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದರು, ಇದು ಸಾಮಾಜಿಕ ಜಾಲಾತಾಣದಲ್ಲಿ ಮತ್ತು ಕ್ರಿಕೆಟ್​​ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಅಬ್ಬುಲ್​ ರಜಾಕ್​ ಐಸಿಸಿ ವಿಶ್ವಕಪ್ 2023 ರಿಂದ ಪಾಕ್​ ತಂಡವು ಬೇಗನೆ ನಿರ್ಗಮಿಸಿದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ‘‘ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನು ಮದುವೆಯಾಗಿರುತ್ತಿದ್ದರೆ ಉತ್ತಮ ಮಕ್ಕಳು ಹುಟ್ಟುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಾರದು’’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಆದರೀಗ ರಜಾಕ್​ ಹೇಳಿಕೆಗೆ ಎಲ್ಲೆಡೆ ಆಕ್ರೊಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ಷಮೆಯಾಚಿಸಿದ್ದಾರೆ.
[caption id="attachment_14329" align="alignnone" width="800"]
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ[/caption]
‘‘ನಾವು ಕ್ರಿಕೆಟ್ ಕೋಚಿಂಗ್ ಬಗ್ಗೆ ಮಾತನಾಡುತ್ತಿದ್ದೆವು. ಈ ವೇಳೆ ತಪ್ಪಾಗಿ ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡೆ. ನಾನು ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ’’ ಎಂದು ಅಬ್ದುಲ್​ ರಜಾಕ್ ಹೇಳಿದ್ದಾರೆ.
ಅನೇಕ ಕ್ರಿಕೆಟ್​ ತಾರೆಯರು ಅಬ್ದುಲ್​ ರಜಾಕ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಾಕ್​ ಮಾಜಿ ವೇಗಿ ಶೋಯೆಬ್​ ಅಖ್ತರ್​ ಕೂಡ ‘‘ಯಾವುದೇ ಮಹಿಳೆಯರನ್ನು ಈ ರೀತಿ ಅಗೌರವ ಮಾಡಬಾರದು’’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us