newsfirstkannada.com

VIDEO: ಸೀತೆ ಸೌಂದರ್ಯಕ್ಕೆ ರಾಮ, ರಾವಣ ಹುಚ್ಚರಾಗಿದ್ದರು; ಕಾಂಗ್ರೆಸ್ ಸಚಿವರಿಂದ ವಿವಾದಾತ್ಮಕ ಹೇಳಿಕೆ

Share :

12-07-2023

  ರಾಮ, ರಾವಣ ಇಬ್ಬರೂ ತುಂಬಾ ಒಳ್ಳೆಯ ವ್ಯಕ್ತಿತ್ವದವರು

  ಆದರೆ ಸುಂದರವಾಗಿದ್ದ ಸೀತಾಮಾತೆಯ ಹಿಂದೆ ಬಿದ್ದಿದ್ದರು

  ರಸ್ತೆಗಳಿಗೆ ಹೇಮಾಮಾಲಿನಿ, ಕತ್ರಿನಾ ಕೈಫ್ ಕೆನ್ನೆಗಳ ಹೋಲಿಕೆ

ಸೀತಾಮಾತೆ ಸುಂದರವಾಗಿದ್ದರು. ರಾಮ, ರಾವಣ ಇಬ್ಬರೂ ಸೀತೆಯ ಸೌಂದರ್ಯಕ್ಕೆ ಹುಚ್ಚರಾಗಿದ್ದರು. ರಾಮ, ರಾವಣ ತುಂಬಾ ಒಳ್ಳೆಯ ವ್ಯಕ್ತಿತ್ವದವರು. ಆದರೆ ಇಬ್ಬರೂ ಸುಂದರವಾಗಿದ್ದ ಸೀತಾಮಾತೆಯ ಹಿಂದೆ ಬಿದ್ದಿದ್ದರು ಎಂದು ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗೂಢಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ, ಸೀತೆಯ ಬಗ್ಗೆ ಕಾಂಗ್ರೆಸ್ ಸಚಿವರ ಈ ಮಾತಿಗೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ ಕ್ಯಾಬಿನೆಟ್‌ನಲ್ಲಿ ರಾಜೇಂದ್ರ ಸಿಂಗ್ ಗೂಢಾ ಅವರು ಮೊದಲ ಬಾರಿ ಸಚಿವರಾಗಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗೋ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು ಈ ಬಾರಿ ಬಹಿರಂಗ ಸಮಾರಂಭದಲ್ಲಿ ಶ್ರೀರಾಮ, ಸೀತೆಯ ಬಗ್ಗೆ ಅಪಹಾಸ್ಯ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿರುವ ರಾಜೇಂದ್ರ ಸಿಂಗ್ ಗೂಢಾ, ರಾಮ, ರಾವಣ ಇಬ್ಬರೂ ಸೀತೆಯ ಸೌಂದರ್ಯಕ್ಕೆ ಮರುಳಾಗಿದ್ದರು. ಹುಚ್ಚರಾಗಿ ಆಕೆಯ ಹಿಂದೆ ಬಿದ್ದಿದ್ದರು ಎಂದು ಹೇಳುವ ಮೂಲಕ ಕಾಮಿಡಿ ಮಾಡಿದ್ದಾರೆ. ಸಚಿವರ ಈ ಮಾತಿಗೆ ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲಾ ಬಿದ್ದು, ಬಿದ್ದು ನಕ್ಕಿದ್ದಾರೆ. ಕಾಂಗ್ರೆಸ್ ಸಚಿವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ನಾಯಕರು ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಸೀತಾಮಾತೆ ಬಗ್ಗೆ ಮಾತನಾಡಿರೋ ಸಚಿವರ ಹೇಳಿಕೆಯನ್ನು ಖಂಡಿಸಿರೋ ಬಿಜೆಪಿ, ಕಾಂಗ್ರೆಸ್ ನಾಯಕರು ಶ್ರೀರಾಮನ ಇತಿಹಾಸವನ್ನೇ ಪ್ರಶ್ನಿಸಿದ್ದು, ಅವಮಾನಗೊಳಿಸಿದ್ದಾರೆ. ಕಾಂಗ್ರೆಸ್ ನಾಯಕರು ಅಯೋಧ್ಯೆ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಾರೆ. ಸೀತೆ ಬಗ್ಗೆ ಮಾತನಾಡಿರೋ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಅಶೋಕ್ ಗೆಹ್ಲೋಟ್ ಅವರು ಕೂಡಲೇ ತಮ್ಮ ಸಹೋದ್ಯೋಗಿಯ ತಲೆದಂಡ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆ ಕೊಟ್ಟಿರೋದು ಇದೇ ಮೊದಲಲ್ಲ. ಈ ಹಿಂದೆ ರಾಜಸ್ಥಾನದ ರಸ್ತೆಗಳನ್ನು ನಟಿ ಹೇಮಾಮಾಲಿನಿ, ಕತ್ರಿನಾ ಕೈಫ್ ಕೆನ್ನೆಗಳಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. 2023ರ ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರಾಮ, ಸೀತೆ ಬಗ್ಗೆ ನೀಡಿರೋ ವಿವಾದಾತ್ಮಕ ಹೇಳಿಕೆ ರಾಜಕೀಯದ ಬ್ರಹ್ಮಾಸ್ತ್ರವಾಗಿ ಬದಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಸೀತೆ ಸೌಂದರ್ಯಕ್ಕೆ ರಾಮ, ರಾವಣ ಹುಚ್ಚರಾಗಿದ್ದರು; ಕಾಂಗ್ರೆಸ್ ಸಚಿವರಿಂದ ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2023/07/Rama-Sita-Ravana.jpg

Load More