newsfirstkannada.com

ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ವಿವಾದ; ಶಾಲಾ ಶಿಕ್ಷಕಿ ಯಾಕಿಂಗೆ ಮಾಡಿದ್ರು ಗೊತ್ತಾ?; ಇದರ ಹಿಂದಿನ ಉದ್ದೇಶವೇನು?

Share :

26-08-2023

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ..

    ಉತ್ತರ ಪ್ರದೇಶ ಖಾಸಗಿ ಶಾಲೆಯ ಶಿಕ್ಷಕಿ ವರ್ತನೆಗೆ ಖಂಡನೆ

    ಶಿಕ್ಷಕಿಯೇ ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆಸಿದ್ದು ಏಕೆ?

ಲಕ್ನೋ: ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗೋ ಗುರುವನ್ನು ಗೌರವಿಸಿ, ಪೂಜಿಸೋ ದೇಶ ನಮ್ಮದು. ಇತ್ತೀಚೆಗೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಒಂದು ಘಟನೆ ನಡೆದಿದೆ. ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಲು ಹೇಳಿದ ಆರೋಪಕ್ಕೆ ಗುರಿಯಾಗಿದ್ದಾರೆ. ಶಾಲೆಯಲ್ಲಿ ಸಹಪಾಠಿಗಳು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬರು ಮತ್ತೊಬ್ಬ ವಿದ್ಯಾರ್ಥಿಗೆ ಥಳಿಸುತ್ತಿದ್ದಾರೆ. ಮೊಹಮ್ಮದನ್ ಅನ್ನೋ ವಿದ್ಯಾರ್ಥಿಗೆ ಶಿಕ್ಷಕಿಯು ನಿಮ್ಮ ಶಕ್ತಿ ಬಳಸಿ ಕಪಾಳಕ್ಕೆ ಏಕೆ ಹೊಡೆಯಬಾರದು ಎಂದು ಕೇಳಿದ್ದಾರೆ. ಕುರ್ಚಿ ಮೇಲೆ ಕೂತು ನೋಡುತ್ತಿರುವ ಶಿಕ್ಷಕಿಯ ಸೂಚನೆಯಂತೆ ವಿದ್ಯಾರ್ಥಿಗೆ ಥಳಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಮುಜಾಫರ್ ನಗರದ ಖಾಸಗಿ ಶಾಲೆಯಲ್ಲಿ ನಡೆದಿರೋ ಈ ಘಟನೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಮುಜಾಫರ್ ನಗರದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೇಲೆ ಶಿಕ್ಷಕಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಐಪಿಸಿ ಸೆಕ್ಷನ್ 505, ಐಪಿಸಿ ಸೆಕ್ಷನ್ 506ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಯೂಟ್ಯೂಬ್​ ನೋಡಿ ಪತ್ನಿಗೆ ಡೆಲಿವರಿ ಮಾಡಿದ ಪತಿ; ಮಾದೇಶನ ಎಡವಟ್ಟಿಗೆ ಹೆಂಡತಿ ಸಾವು

ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಈ ಪ್ರಕರಣಕ್ಕೆ ಶಿಕ್ಷಕಿ ತ್ರಿಪ್ತಾ ತ್ಯಾಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ನನಗೆ ಯಾವುದೇ ದುರುದ್ದೇಶವಿಲ್ಲ. ಹಿಂದೂ, ಮುಸ್ಲಿ ಬಾಂಧವರಿಗೆ ಒಟ್ಟಿಗೆ ಇರಬೇಕು ಅನ್ನೋದು ನನ್ನ ಆಸೆಯಾಗಿದೆ. ನಾನು ಕಳೆದ ಎರಡು ತಿಂಗಳಿಂದ ಅಂಗವಿಕಲತೆಯ ಸಮಸ್ಯೆ ಎದುರಿಸುತ್ತಿದ್ದೇನೆ. ಕುರ್ಚಿ ಮೇಲಿಂದ ಎದ್ದು ನಿಲ್ಲಲು ನನಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಬೇರೆ ವಿದ್ಯಾರ್ಥಿಗಳಿಂದ ಕಪಾಳಕ್ಕೆ ಹೊಡೆಯಲು ಹೇಳಿದ್ದೇನೆ. ನಮ್ಮ ಶಾಲೆಯಲ್ಲಿ ಬಹಳಷ್ಟು ಮುಸ್ಲಿಂ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರ ಪೋಷಕರಿಗೆ ನಮ್ಮ ಮಕ್ಕಳಿಗೆ ದಂಡಿಸಿ ಬುದ್ಧಿವಾದ ಹೇಳಲು ಒತ್ತಾಯ ಮಾಡುತ್ತಾರೆ. ನಾನು ಯಾವುದೇ ದುರುದ್ದೇಶದಿಂದ ಹೀಗೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ವಿವಾದ; ಶಾಲಾ ಶಿಕ್ಷಕಿ ಯಾಕಿಂಗೆ ಮಾಡಿದ್ರು ಗೊತ್ತಾ?; ಇದರ ಹಿಂದಿನ ಉದ್ದೇಶವೇನು?

https://newsfirstlive.com/wp-content/uploads/2023/08/Uttar-Pradesh-Teacher.jpg

Load More