/newsfirstlive-kannada/media/post_attachments/wp-content/uploads/2023/11/bigg-boss-2023-11-15T185534.907.jpg)
ನಾಮಿನೇಶನ್​ ಬಿಸಿ ಬಿ​ಗ್​ಬಾಸ್​ ಮನೆ ತುಂಬಾ ಹೊಗೆ ಎಬ್ಬಿಸಿದೆ. ಮೈಕಲ್​ ಹೇಳಿದ ಮಾತುಗಳು ಅವರಿಗೆ ಮುಳ್ಳಾದಂತಿದೆ. ಬೇರೆಯರಿಗೆ ಮೈಕಲ್​ ಅವರೇ ಗಾಸಿಪ್​ ಪಾಯಿಂಟ್​ ಆಗಿ ಕಾಣುತ್ತಿದ್ದಾರೆ. ಈ ವಾರ ಕ್ಯಾಪ್ಟನ್​ ಆಗಿರುವ ಮೈಕಲ್​ಗೆ ಬಿಗ್​ ಬಾಸ್​ ಒಬ್ಬರನ್ನ ನೇರವಾಗಿ ನಾಮಿನೇಟ್​ ಮಾಡಲು ಆದೇಶ ನೀಡುತ್ತಾರೆ. ಆಗ ಮೈಕಲ್​ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ.
/newsfirstlive-kannada/media/post_attachments/wp-content/uploads/2023/11/bigg-boss-2023-11-15T182628.025.jpg)
ಬಿಗ್​ಬಾಸ್​ ಆದೇಶದಂತೆ ಕ್ಯಾಪ್ಟನ್​ ಮೈಕಲ್​ ಭಾಗ್ಯಶ್ರೀ ಅವರನ್ನು ನೇರವಾಗಿ ನಾಮಿನೇಟ್​ ಮಾಡ್ತಾರೆ. ಅದಕ್ಕೆ ಅವರು ನೀಡಿದ ಕಾರಣ, ಭಾಗ್ಯಶ್ರೀ ಮೇಡಂ ಮಾತಾಡುವ ಮಾತುಗಳು, ಹರಡುವ ಗಾಸಿಪ್​, ಗೇಮ್​ನಲ್ಲಿನ ಪರ್ಫಾಮನ್ಸ್​ ಎಲ್ಲವೂ ಮನೆಯ ವಾತಾವರಣವನ್ನು ಡೌನ್​ ಮಾಡುತ್ತಿದೆ. ಹೀಗಾಗಿ ಅವರನ್ನು ನೇರವಾಗಿ ನಾಮಿನೇಟ್​ ಮಾಡುತ್ತಿದ್ದೇನೆ ಎನ್ನುತ್ತಾರೆ.
View this post on Instagram
ಈ ಬಗ್ಗೆ ಪ್ರಶ್ನಿಸಿರುವ ಭಾಗ್ಯಶ್ರೀ ಅವರು, ಅಷ್ಟು ಈಸಿಯಾಗಿ ಎಲ್ಲರ ಮುಂದೆ ನಿಂತ್ಕೊಂಡು ಇವ್ರು ಮಾಡೋ ಗಾಸಿಪ್​ ಮನೆನ ಡೌನ್​ ಮಾಡ್ತಿದೆ. ಅಂದ್ರೆ ಏನ್​ ಅರ್ಥ. ನಾನು ಯಾವಾಗ ಆ ರೀತಿ ನಡೆದು ಕೊಂಡಿದ್ದೀನಿ ಎಂದು ಸ್ಪಷ್ಟನೆ ಕೇಳಿದ್ದಾರೆ ಭಾಗ್ಯಶ್ರೀ. ಇನ್ನೂ ದಸಾರ ಹಬ್ಬದ ಪ್ರಯುಕ್ತ ವೀಕ್ಷಕರ ನಿರ್ಧಾರದಂತೆ ಭಾಗ್ಯಶ್ರೀ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಉಳಿಯುವ ಅಕಾಶ ಸಿಕ್ಕಿತ್ತು. ಸದ್ಯ ದೀಪಾವಳಿಗೆ ಭಾಗ್ಯಶ್ರೀ ಅವರ ಆಟಕ್ಕೆ ಬ್ರೇಕ್​ ಹಾಕಿದ್ದಾರೆ ಮೈಕಲ್​. ಭಾಗ್ಯಶ್ರೀ ಅವರ ಗಾಡಿ ಲೈನ್​ ಬದಲಿಸುತ್ತಾ? ಇಲ್ಲ ಔಟ್​ ಆಗುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us