ಕರೆಂಟ್ ಶಾಕ್ ಕೊಟ್ಟ ಮೇಲೆ ‘ಅಬ್ ಕೈಸಾ ಲಗ್ ರಹಾ ಹೈ’ ಅಂದ
ಶಾಲಾ ಶಿಕ್ಷಕಿಯನ್ನು ಬೆಚ್ಚಿ ಬೀಳಿಸಿದ ಅಡುಗೆ ಭಟ್ಟನ ಈ ಆಪತ್ತು
ಮಹಿಳೆಯ ತಲೆಯನ್ನು ಗೋಡೆಗೆ ಗುದ್ದಿ ಹಿಂಸಿಸಿದ ಅಡುಗೆ ಭಟ್ಟ
ಅಡುಗೆ ಭಟ್ಟನಾಗಿದ್ದ ವ್ಯಕ್ತಿಯೊಬ್ಬ ಮನೆ ಯಜಮಾನಿ ಪ್ರಾಣಕ್ಕೆ ಕುತ್ತು ತಂದಿದ್ದ ವಿಲಕ್ಷಣ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಅಬ್ಬಾ.. ಮನೆಯ ಅಡುಗೆ ಭಟ್ಟ ಮಾಡಿದ ಕೆಲಸಕ್ಕೆ ಗೃಹಿಣಿ ಬೆಚ್ಚಿ ಬಿದ್ದಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಡುಗೆ ಭಟ್ಟನ ಈ ಆಪತ್ತಿನ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮುಂಬೈ ಶಾಲಾ ಶಿಕ್ಷಕಿಯ ಮನೆಯಲ್ಲಿ 25 ವರ್ಷದ ರಾಜ್‌ಕುಮಾರ್ ಸಿಂಗ್ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಮನೆ ಯಜಮಾನಿ ಬೆಳಗ್ಗೆ ಎದ್ದು ಹಾಸಿಗೆ ಮೇಲೆ ಕಣ್ಣು ಬಿಟ್ಟಾಗ ಅಡುಗೆ ಭಟ್ಟ ಎದುರಾಗಿದ್ದಾನೆ. ಮನೆಯ ರೂಮ್‌ನಲ್ಲಿ ಮಲಗಿದ್ದ ಮಹಿಳೆಗೆ ಪ್ಲಗ್‌ನಿಂದ ವೈರ್ ಸಂಪರ್ಕಿಸಿಕೊಂಡು ಕೈಗೆ ಕರೆಂಟ್ ಶಾಕ್ ನೀಡಿದ್ದಾನೆ.
ಮನೆ ಕೆಲಸದ ವಿಚಾರಕ್ಕೆ ಶಿಕ್ಷಕಿಯು ರಾಜ್‌ಕುಮಾರ್‌ಗೆ ಬೈದಿದ್ದರು. ಇಷ್ಟಕ್ಕೆ ಸಿಟ್ಟಿಗೆದ್ದ ಅಡುಗೆ ಭಟ್ಟ ಮಹಿಳೆಯ ಕೈಗೆ ವೈರ್‌ನಿಂದ ಕರೆಂಟ್ ಶಾಕ್ ಕೊಟ್ಟಿದ್ದಾನೆ. ಕರೆಂಟ್ ಶಾಕ್ ಕೊಟ್ಟ ಮೇಲೆ ಅಬ್ ಕೈಸಾ ಲಗ್ ರಹಾ ಹೈ ಅಂದ್ರೆ ಈಗ ನಿಮಗೆ ಹೇಗನಿಸುತ್ತಿದೆ ಎಂದು ಕೇಳಿದ್ದಾನೆ.
ಇದನ್ನೂ ಓದಿ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ತೇಜಸ್ವಿನಿ ಪ್ರಕಾಶ್..!
ಮಹಿಳೆಯ ತಲೆಯನ್ನು ಗೋಡೆಗೆ ಗುದ್ದಿದ್ದ ಅಡುಗೆ ಭಟ್ಟ
ಕರೆಂಟ್ ಶಾಕ್ ಹೊಡೆಸಿಕೊಂಡ ಮಹಿಳೆ ತಕ್ಷಣವೇ ಕಿರುಚಾಡಿದ್ದಾರೆ. ಆಗ ಪಕ್ಕದ ರೂಮ್‌ನಲ್ಲಿದ್ದ 11 ವರ್ಷದ ಮಗ ಓಡಿ ಬಂದಿದ್ದಾನೆ. ಆಗ ಮಗನಿಗೂ ಅಡುಗೆ ಭಟ್ಟ ಏನಾದರೂ ಮಾಡಬಹುದು ಎಂಬ ಆತಂಕದಿಂದ ಮಗನನ್ನು ಅವಿತುಕೊಳ್ಳಲು ಮಹಿಳೆ ಹೇಳಿದ್ದಾರೆ. ಕರೆಂಟ್ ಶಾಕ್‌ಗೂ ಸುಮ್ಮನಾಗದ ಅಡುಗೆ ಭಟ್ಟ, ಮಹಿಳೆಯ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಕರೆಂಟ್ ಶಾಕ್ ಕೊಟ್ಟ ಕೋಪದಿಂದ ರಾಕ್ಷಸನಂತೆ ವರ್ತಿಸಿದ ಅಡುಗೆ ಭಟ್ಟನಿಗೆ ಜ್ಞಾನೋದಯವಾಗಿದೆ. ಕೊನೆಗೆ ನಾನು ಹೀಗೆ ವರ್ತಿಸಬಾರದಿತ್ತು ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡಿದ್ದಾನೆ. ಇಷ್ಟೆಲ್ಲಾ ಆದ ಮೇಲೆ ಅಡುಗೆ ಭಟ್ಟ ರಾಜಕುಮಾರ್ ಮನೆಯಿಂದ ಓಡಿ ಹೋಗಿದ್ದಾನೆ. ಹಲ್ಲೆಗೊಳಗಾದ ಶಾಲಾ ಶಿಕ್ಷಕಿ ತಮ್ಮ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣದ ಬಗ್ಗೆ ಮುಂಬೈನ ಅಂಧೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅಡುಗೆ ಭಟ್ಟ ರಾಜಕುಮಾರ್ ಸಿಂಗ್ ಎಸ್ಕೇಪ್ ಆಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ