newsfirstkannada.com

ಸಿ.ಟಿ ರವಿಯನ್ನು ಹುಚ್ಚರಿಗೆ, ಕುಮಾರಸ್ವಾಮಿಯನ್ನು ಹಾವಾಡಿಗನಿಗೆ ಹೋಲಿಸಿದ​ ಸಚಿವ ಕೆ.ಎನ್.ರಾಜಣ್ಣ..!

Share :

16-08-2023

    ಹುಚ್ಚರ ಸ್ಟೇಟ್​​ಮೆಂಟ್​​ಗೆಲ್ಲ ಉತ್ತರ ಹೇಳೋಕಾಗಲ್ಲ-ರಾಜಣ್ಣ

    ಇದೊಂತರ ಬ್ಲಾಕ್ ಮೇಲ್, ತಾಕತ್ತಿದ್ರೆ ರಿಲೀಸ್ ಮಾಡಲಿ

    ಇಷ್ಟೊತ್ತು ವಿದ್ಯುತ್ ಶಕ್ತಿ ಇರೋದಿಲ್ಲ ಅಂತಾ ಮಾಹಿತಿ ನೀಡಬೇಕು.

ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಬೀಳುತ್ತೆ ಅನ್ನೋ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಅವೆಲ್ಲಾ ಹುಚ್ಚರ ಸ್ಟೇಟ್​​ಮೆಂಟ್, ಹುಚ್ಚರ ಸ್ಟೇಟ್​​ಮೆಂಟ್​​ಗೆಲ್ಲ ಉತ್ತರ ಹೇಳೋಕಾಗಲ್ಲ. ಆರು ತಿಂಗಳಿಗೆ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ ಅದು ಅವರ ಅಭಿಪ್ರಾಯ ಇರಬಹುದು ಅಷ್ಟೇ. ಆ ಹೇಳಿಕೆಗೆ ಕಿಮ್ಮತ್ತು ಕೊಡೋ ಅವಶ್ಯಕತೆ ಇಲ್ಲ ಎಂದಿದ್ದಾರೆ.

ತಾಕತ್ತಿದ್ರೆ ರಿಲೀಸ್ ಮಾಡಲಿ

ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿರುವ ನನ್ನತ್ರ ಇರೋದು ಖಾಲಿ ಪೆನ್ ಡ್ರೈವ್ ಅಲ್ಲ ಹೇಳಿಕೆ ವಿಚಾರವಾಗಿಯೂ ಕೂಡ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಹಾವಾಡಿಗರನ್ನು ನೋಡಿದ್ದೀವಿ ನಾವು. ಒಂದು ಬುಟ್ಟಿಯನ್ನ ತಂದಿಟ್ಟು, ಇದರಲ್ಲಿ ಆ ಹಾವಿದೆ. ಈ ಹಾವಿದೆ, ಇದನ್ನ ಬಿಡ್ತೀನಿ, ಅದನ್ನ ಬಿಡ್ತೀನಿ ಅಂತಾ ತೋರಿಸಿದ್ದನ್ನ. ಹಾವಾಡಿಗರ ಆಟವನ್ನ ನೋಡಿದ್ದೀವಿ. ಅದಕ್ಕೂ ಇದಕ್ಕೂ ಸಾಮ್ಯತೆಯಿದೆ ಅಂತಾ ಯಾಕೆ ಭಾವಿಸಬಾರದು. ಏನಿದ್ರೆ ಬಿಡ್ಲಿ, ಬಿಡೋ ತಾಕತ್ತಿದ್ರೆ ಬಿಡ್ಲಿ ಅಂತಾ ಎಷ್ಟು ಜನ ಸಚಿವರು ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅಂತ ಅದ್ರಲ್ಲಿ ಇದೆ ಅವರಿಗೆ ಸಾರ್ವಜನಿಕವಾಗಿ ಶಿಕ್ಷೆ ಆಗಲಿ. ಸುಮ್ನೆ ಪೆನ್ ಡ್ರೈವ್ ಇಟ್ಕೊಂಡು, ಇದೊಂತರ ಬ್ಲಾಕ್ ಮೇಲ್. ಬ್ಲಾಕ್ ಮೇಲ್ ಅಲ್ಲದೇ ಬೇರೇನಲ್ಲ ಇದು. ತೆಗೆಯೋದು, ಇಟ್ಕೋಳೋದು, ತಾಕತ್ತಿದ್ರೆ ರಿಲೀಸ್ ಮಾಡಲಿ ಎಂದು ಹೇಳಿದ್ದಾರೆ.

ನಾನೇ ಕಣ್ಣಾರೆ ನೋಡಿದ್ದೀನಿ

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಜಾತಿ ನಿಂದನೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ, ನಿನ್ನೆ ದಿನ ಮಲ್ಲಿಕಾರ್ಜುನ್ ಬಗ್ಗೆ ಆ ಥರದ ಒಂದು ಮಾಹಿತಿಯಿದೆ. ಯಾವಾಗಲೂ ಅವರ ಮನೆಯಲ್ಲಿ ನೋಡ್ತೀನಿ ನಾನು, ಅವರ ಮನೆ ಒಳಗಡೆ, ಹೊರಗಡೆ ಎಲ್ಲಾ ಪರಿಶಿಷ್ಟ ಜಾತಿ, ಪಂಗಡದವ್ರೆ ಇರ್ತಾರೆ. ಅಡುಗೆ ಮನೆಯಿಂದ ಹಿಡಿದು ಎಲ್ಲಾ ಕಡೆ ಅವ್ರೇ ಇದ್ದಾರೆ. ಊಟ, ತಿಂಡಿ ಎಲ್ಲಾ ಸಾಮೂಹಿಕವಾಗಿಯೇ ಮಾಡ್ತಾರೆ. ಆ ರೀತಿ ಮನಸ್ಥಿತಿ ಇರೋವ್ರು ಹೇಗೆ ಅವರನ್ನ ನಿಂದನೆ ಮಾಡ್ತಾರೆ ಅನ್ನೋಕಾಗುತ್ತೆ. ಏನಾದ್ರೂ ಅವರನ್ನ ಮನೆಯಿಂದ ಹೊರಗೆ ಇರಿಸಿ, ಅವರ ಜೊತೆ ಹೆಚ್ಚು ಒಡನಾಟ ಇಟ್ಕೊಂಡಿಲ್ಲ ಅಂದ್ರೆ ಆಗ ಇರ್ಬಹುದೇನಪ್ಪ ಅನ್ಕೋಬಹುದಿತ್ತು. ನಾನೇ ಕಣ್ಣಾರೆ ನೋಡಿದ್ದೀನಿ, ಅವರ ಮನೆಯಲ್ಲಿ ಯಾವುದೇ ತಾರತಮ್ಯ ಇಲ್ಲ. ಹೀಗಾಗಿ ಆ ರೀತಿಯ ಭಾವನೆ ಅವರಲ್ಲಿ ಇರಲಿಕ್ಕಿಲ್ಲ ಅನ್ನೋದು ನನ್ನ ಭಾವನೆ ಎಂದಿದ್ದಾರೆ.

ಗಾದೆ ಮಾತು ಹೇಳ್ತಾರಪ್ಪ

ಬಳಿಕ ಸಚಿವ ಕೆ.ಎನ್.ರಾಜಣ್ಣ ಅವರು ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ಅವರು ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇವತ್ತು ವಿದ್ಯಾವಂತರು ಯಾರೂ ಕೂಡ ಜಾತಿ ನಿಂದನೆ ಮಾಡ್ತಾರೆ ಅಂತ ನಾನು ನಿರೀಕ್ಷೆ ಮಾಡಲ್ಲ. ಮಾತಾಡ್ತಾ, ಮಾತಾಡ್ತಾ, ಯಾರೋ ಒಬ್ರು ಅವರು ಇವ್ರು ಅಂತೇಳಿ ಜಾತಿ ಪದ ಬಳಸಿದ್ರೂ ಬಳಸಿರಬಹುದು. ಬಳಸಿದಾಕ್ಷಣ ಅವರಿಗೆ ಜಾತಿ ನಿಂದನೆ ಮಾಡುವ ಮನಸ್ಥಿತಿ ಇದೆ ಅಂತಲ್ಲ. ಗಾದೆ ಮಾತು ಹೇಳ್ತಾರಪ್ಪ, ಊರಿದ್ರೆ ಹೊಲಗೇರಿ ಇದ್ದೇ ಇರತೇತ್ರಿ ಅಂದೇ ಬಿಡ್ತಾರೆ. ಹಳ್ಳಿಯಲ್ಲಿ ಇಂತಹ ಭಾಷೆಯನ್ನ ಬಳಸ್ತಾರೆ. ಹಾಗಂದ ಮಾತ್ರಕ್ಕೆ ನಮ್ಮ ಜಾತಿ ನಿಂದನೆ ಮಾಡಿದ್ರೂ ಅಂತಾ ಬರೋಕಾಗುತ್ತಾ?. ಮಾತೆತ್ತಿದ್ರೆ ಎಲ್ಲರೂ ಮಾತಾಡ್ತಾರೆ ಅದನ್ನ. ಹೀಗಾಗಿ ಆ ಪದಬಳಕೆಯ ಹಿನ್ನೆಲೆ ಏನಿದೆ ಅನ್ನೋದು ಮುಖ್ಯ ಎಂದಿದ್ದಾರೆ.

ವಿದ್ಯುತ್ ಶಕ್ತಿ ಕೊರತೆ ಇಲ್ಲ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗ್ತಿದ್ಯಾ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ, ಲೋಡ್ ಶೆಡ್ಡಿಂಗ್ ಮಾಡುವಷ್ಟು ವಿದ್ಯುತ್ ಶಕ್ತಿ ಕೊರತೆ ಇಲ್ಲ. ಕೆಲವೊಮ್ಮೆ ಮಳೆಗಾಳಿ ಬೀಸೋದ್ರಿಂದ ವೈರ್​​ಗಳು ಸರಿಯಾಗಿ ಮೆಂಟೇನ್ ಆಗದೇ ಇದ್ದಾಗ, ಅಲ್ಲಲ್ಲಿ ಅದು ಟಚ್ ಆಗಿ ಶಾರ್ಟ್ ಸರ್ಕ್ಯುಟ್ ಆಗುತ್ತೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೇಷನ್ ಮೆಂಟೈನನ್ಸ್, ಲೈನ್ ಸ್ಟ್ರೆಂತನ್ ಮಾಡುವ ಸಲುವಾಗಿ ಅಲ್ಲಲ್ಲಿ ಕರೆಂಟ್ ತೆಗೆಯಲಾಗ್ತಿದೆ. ಲೋಡ್ ಶೆಡ್ಡಿಂಗ್ ಎಲ್ಲಿಯೂ ಇಲ್ಲ. ಇಂತಹ ಸಮಯದಲ್ಲಿ ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇಂಥ ಕಡೆ ಇಷ್ಟೊತ್ತಿಂದ ಇಷ್ಟೊತ್ತು ವಿದ್ಯುತ್ ಶಕ್ತಿ ಇರೋದಿಲ್ಲ ಅಂತಾ ಮಾಹಿತಿ ನೀಡಬೇಕು. ಅದು ಸರಿಯಾಗಿ ಆಗ್ತಿಲ್ಲ, ಅದರಿಂದ ಈ ಥರ ಆಗ್ತಿದೆ. ನಿನ್ನೆ ಗೃಹ ಸಚಿವರು ಮಾತನಾಡುವಾಗ ಕರೆಂಟ್ ವ್ಯತ್ಯಯ ಆಯ್ತು. ಒಬ್ಬ ಗೃಹ ಮಂತ್ರಿ ಮಾತನಾಡುವಾಗ ಇಲಾಖೆಯವರು ಸರಿಯಾಗಿ ನೋಡ್ಕೋಬೇಕಿತ್ತು. ಅದು ಇಲ್ಲಿಂದ ಆಗಿರೋ ತೊಂದರೆಯಲ್ಲ ಎಂದು ತುಮಕೂರಿನಲ್ಲಿ ಸಹಕಾರಿ ಸಚಿವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿ.ಟಿ ರವಿಯನ್ನು ಹುಚ್ಚರಿಗೆ, ಕುಮಾರಸ್ವಾಮಿಯನ್ನು ಹಾವಾಡಿಗನಿಗೆ ಹೋಲಿಸಿದ​ ಸಚಿವ ಕೆ.ಎನ್.ರಾಜಣ್ಣ..!

https://newsfirstlive.com/wp-content/uploads/2023/08/K-N-rajanna.jpg

Load More