newsfirstkannada.com

ಬೆಂಗಳೂರಲ್ಲಿ ನಡೆದ ಪಂದ್ಯದ ವೇಳೆ ‘ಜಿಂದಾಬಾದ್’ ಕೂಗದಂತೆ ತಡೆದ ಪೊಲೀಸ್; ವಾಗ್ವಾದಕ್ಕಿಳಿದು ಪಾಕ್ ಅಭಿಮಾನಿ ಕಿರಿಕ್..!

Share :

21-10-2023

    ಅಧಿಕಾರಿ ಜೊತೆ ವಾಗ್ವಾದಕ್ಕಿಳಿದ ವಿಡಿಯೋ ಇಲ್ಲಿದೆ

    ಇಬ್ಬರ ಮಧ್ಯೆ ನಡೆದ ವಾಗ್ವಾದ ಏನು? ವಿಡಿಯೋದಲ್ಲಿ ಏನಿದೆ?

    ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ನಿನ್ನೆ ಬೆಂಗಳೂರಲ್ಲಿ ವಿಶ್ವಕಪ್​​ನ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನವನ್ನು ಎದುರಿಸಿತು. ಮಧ್ಯಾಹ್ನ 2 ಗಂಟೆಯಿಂದ ಆರಂಭವಾದ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳ ಜನಸಾಗರವೇ ಹರಿದುಬಂದಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.

ಪಾಕ್ ತಂಡದ ಅಭಿಮಾನಿಯೊಬ್ಬನಿಗೆ ಪಂದ್ಯದ ವೇಳೆ ‘ಪಾಕಿಸ್ತಾನ್ ಜಿಂದಾಬಾದ್​’ ಎಂದು ಘೋಷಣೆ ಕೂಗದಂತೆ ಕೇಳಲಾಯಿತು. ಈ ವೇಳೆ ಆ ವ್ಯಕ್ತಿ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿರುವ ವಿಡಿಯೋ ಅದಾಗಿದೆ. 43 ಸೆಕೆಂಡ್ಸ್ ಇರುವ ಆ ವಿಡಿಯೋದಲ್ಲಿ, ಅಭಿಮಾನಿ ಪಾಕಿಸ್ತಾನ್ ತಂಡದ ಜರ್ಸಿಯನ್ನು ಹಾಕಿಕೊಂಡು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾನೆ. ನಾನು ಪಾಕಿಸ್ತಾನದಿಂದ ಬಂದಿದ್ದೇನೆ. ನಾನು ಪಾಕಿಸ್ತಾನ್ ಜಿಂದಾಬಾದ್​ ಎಂದು ಕೂಗಬಾರದೇ..? ಹಾಗಿದ್ದರೆ ನಾನು ಏನೆಂದು ಕೂಗಬೇಕು? ಎಂದು ಪ್ರಶ್ನೆ ಮಾಡಿದ್ದಾನೆ.

ಜನರು ಭಾರತ್ ಮಾತಾ ಕಿ ಜೈ ಎಂದು ಕೂಗುತ್ತಿರುವಾಗ ನಾನ್ಯಾಕೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಬಾರದು ಅಂತಾ ಮತ್ತೆ ಕೇಳುತ್ತಾನೆ. ಆಗ, ಪೊಲೀಸ್ ಅಧಿಕಾರಿ ‘ಜಿಂದಾಬಾದ್​’ಗೆ ಅವಕಾಶ ಇಲ್ಲ ಎನ್ನುತ್ತಾರೆ. ಅಲ್ಲದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗದಂತೆ ಮನವಿ ಮಾಡಿಕೊಳ್ಳುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ಪೊಲೀಸ್ ಅಧಿಕಾರಿಯ ಕರ್ತವ್ಯವನ್ನು ಹೊಗಳುತ್ತಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದ ಅಭಿಮಾನಿ ಪರ ಬ್ಯಾಟ್ ಬೀಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರಲ್ಲಿ ನಡೆದ ಪಂದ್ಯದ ವೇಳೆ ‘ಜಿಂದಾಬಾದ್’ ಕೂಗದಂತೆ ತಡೆದ ಪೊಲೀಸ್; ವಾಗ್ವಾದಕ್ಕಿಳಿದು ಪಾಕ್ ಅಭಿಮಾನಿ ಕಿರಿಕ್..!

https://newsfirstlive.com/wp-content/uploads/2023/10/PAK-FAN.jpg

Load More