ಠಾಣೆಯ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ಪೇದೆ
ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆಗಿಳಿದ ಪೊಲೀಸ್
ಸಾಮಾಜಿಕ ಜಾಲತಾಣದಲ್ಲಿ ಪೇದೆಯ ದೃಶ್ಯ ವೈರಲ್
ಪೇದೆಯೊಬ್ಬರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದು ನಡುರಸ್ತೆಯಲ್ಲೇ ಪ್ರತಿಭಟನೆಗಿಳಿದ ಘಟನೆ ಪಂಜಾಬಿನಲ್ಲಿ ನಡೆದಿದೆ.
ಪಂಜಾಬಿನ ಜಲಂಧರ್ನ ಮುಖ್ಯ ರಸ್ತೆಯಲ್ಲಿ ಪೇದೆ ವಾಹನಗಳಿಗೆ ಅಡ್ಡಲಾಗಿ ಮಲಗಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಅಂದಹಾಗೆಯೇ ಪೇದೆ ತಾನು ಕಳ್ಳನನ್ನು ಹಿಡಿದರೆ ಅತ್ತ ಠಾಣೆಯ ಇತರೆ ಸಿಬ್ಬಂದಿ ಹಣ ಪಡೆದು ಖದೀಮರನ್ನು ಬಿಟ್ಟು ಕಳಹಿಸಿದ್ದಾರೆ ಎಂಬ ಕಾರಣಕ್ಕೆ ನೊಂದಿದ್ದಾರೆ. ಈ ಕಾರಣಕ್ಕೆ ರಸ್ತೆಯಲ್ಲಿ ಅಡ್ಡಲಾಗಿ ಮಲಗಿದ್ದಾರೆ.
ಪೇದೆಯ ಈ ಹೈಡ್ರಾಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಪೇದೆ ‘ನಾನು ಕಳ್ಳರನ್ನು ಹಿಡಿದಿದ್ದೆ. ಆದರೆ ನಮ್ಮ ಪೊಲೀಸ್ ಠಾಣೆಯ ಇತರೆ ಸಿಬ್ಬಂದಿ ಅವರಿಂದ ಹಣ ಪಡೆದು ಖದೀಮರನ್ನು ಬಿಟ್ಟು ಕಳುಹಿಸಿದ್ದಾರೆ’ ಎಂದು ಹೇಳುವುದನ್ನು ಕಾಣಬಹುದಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ದೃಶ್ಯದಲ್ಲಿ ಸಹದ್ಯೋಗಿಯೊಬ್ಬರು ಪೇದೆ ಬಳಿ ಬಂದು ರಸ್ತೆ ಬಿಟ್ಟು ತೆರಳುವಂತೆ ಒತ್ತಾಯಿಸಿ ಬಳಿಕ ಒದೆಯುತ್ತಿರುವುದು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ