ಹದಿಹರೆಯದವರಿಗೆ ಹೃದಯಾಘಾತ ಸಂಭವಿಸೋದು ಯಾಕೆ ಗೊತ್ತಾ?
ಯಾವ್ಯಾವ ವಯಸ್ಸಿನವರಿಗೆ ಹಾರ್ಟ್ ಅಟ್ಯಾಕ್ ಹೆಚ್ಚು ಸಂಭವಿಸುತ್ತೆ
ಹೃದಯಾಘಾತದಿಂದ ಪಾರಾಗಲು ಸುಲಭವಾದ 5 ಪರಿಹಾರ ಇಲ್ಲಿದೆ
ಹೃದಯಾಘಾತ ಇತ್ತೀಚೆಗೆ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೃದಯಾಘಾತ ಎಂದರೇನು? ಇದು ಹೇಗೆ ಸಂಭವಿಸುತ್ತದೆ ಎಂದು ನೋಡುವುದಾದರೆ, ಹೃದಯಕ್ಕೆ ರಕ್ತ ಸಂಚಲನೆ ಹಠಾತ್ ಆಗಿ ಬ್ಲಾಕ್ ಆಗುತ್ತದೆ. ಇದರ ಪ್ರತಿಫಲವಾಗಿ ಹೃದಯ ಸ್ತಂಭನ ಉಂಟಾಗುತ್ತದೆ. ನಂತರ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಇದರಿಂದ ಹೃದಯಾಘಾತವಾಗಿ ಮನುಷ್ಯ ಸಾವನ್ನಪ್ಪುತ್ತಾನೆ.
ಹೃದಯದಲ್ಲಿ ಅಸಮರ್ಪಕ ರಕ್ತ ಸಂಚಲನದಿಂದ ಹೃದಯ ಸ್ನಾಯು ಕ್ಷೀಣಿಸಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯವಾಗಿ ಹೃದಯಕ್ಕೆ ರಕ್ತ ಸಾಗಿಸುವ ಅಪಧಮನಿಗಳಲ್ಲಿನ ಅಡಚಣೆಯಿಂದ ಉಂಟಾಗುತ್ತದೆ. ಹೃದಯಾಘಾತವು ದೀರ್ಘಕಾಲದ ಹೃದಯ ಹಾನಿಗೆ ಕಾರಣವಾಗಬಹುದು. ಹೀಗಾಗಿ ವೈದ್ಯರು ರೋಗಿಯ ರಕ್ತದ ಹರಿವನ್ನು ತ್ವರಿತವಾಗಿ ಪುನಃ ಸ್ಥಾಪಿಸದಿದ್ದರೆ ಸಾವಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಶರೀರದಲ್ಲಿ ಹೃದಯಾಘಾತ ಹೆಚ್ಚಿಸುವ ಕೆಲವು ಅಂಶಗಳು ಇಲ್ಲಿವೆ.
ಮಧುಮೇಹ
ಮಧುಮೇಹ ಹೃದಯಕ್ಕೆ ಹಾನಿ ಮಾಡುತ್ತದೆ. 65 ವರ್ಷಕ್ಕಿಂತ ಮೇಲ್ಪಟ್ಟವರು ಹೃದಯ ನಿಯಂತ್ರಣದಲ್ಲಿ ಇಲ್ಲದಿದ್ದರೇ ಶೇಕಡಾ 68 ರಷ್ಟು ಜೀವ ಕಳೆದುಕೊಳ್ಳುವ ಸಂಭವ ಇರುತ್ತದೆ ಎನ್ನಲಾಗಿದೆ.
ಇದನ್ನು ನಿಯಂತ್ರಣ ಮಾಡಬೇಕು ಎಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಧುಮೇಹಿಗಳು ವೈದ್ಯರು ನೀಡುವಂತ ಚಿಕಿತ್ಸೆ ಹಾಗೂ ಸಲಹೆ, ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಅಗತ್ಯತೆಗೆ ತಕ್ಕಂತೆ ತಮ್ಮ ಜೀವನಶೈಲಿಯನ್ನು ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಬೇಕು.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡ ಹೃದಯಕ್ಕೆ ಹೆಚ್ಚು ಅಪಾಯಕಾರಿಯಾಗಿರುವುದು. ರಕ್ತದೊತ್ತಡ ಹೆಚ್ಚಾದಂತೆ ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಹೃದಯ ಸ್ನಾಯು ಗಟ್ಟಿ ಆಗುವಿಕೆಯಿಂದ ಹೃದಯಾಘಾತ ಉಂಟಾಗುವ ಸಂಭವವಿರುತ್ತದೆ.
ಅಧಿಕ ರಕ್ತದೊತ್ತಡ ಇರುವವರು ವೈದ್ಯರನ್ನು ಸಂಪರ್ಕಿಸಿ ರಕ್ತ ನಾರ್ಮಲ್ ಆಗಿರಲು ಏನು ಮಾಡಬೇಕು ಎಂದು ಸಲಹೆಗಳನ್ನು ಪಡೆಯಬೇಕು. ರಕ್ತದೊತ್ತಡ ಕಡಿಮೆ ಮಾಡಲು ವಾಕಿಂಗ್, ವ್ಯಾಯಾಮ, ಕಡಿಮೆ ಕೊಬ್ಬಿನ ಆಹಾರ, ಸ್ವಲ್ಪ ಉಪ್ಪು ಇರುವಂತ ಆಹಾರ ಸೇವಿಸಬೇಕು. ಆರೋಗ್ಯಕರ ತೂಕ ಮತ್ತು ಒತ್ತಡ ನಿರ್ವಹಣೆಯೊಂದಿಗೆ ರಕ್ತದೊತ್ತಡ ನಿಯಂತ್ರಣ ಮಾಡಬಹುದು.
ಕೊಲೆಸ್ಟ್ರಾಲ್
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಆಹಾರದಲ್ಲಿ ನಾರಿನ ಪದಾರ್ಥಗಳನ್ನು ಸೇವಿಸಬೇಕು. ಇದು ಆಹಾರವನ್ನು ಬೇಗ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದರಿಂದ ರಕ್ತ ಸರಾಗವಾಗಿ ಸಂಚರಿಸಲು ಕೂಡ ಅನಕೂಲವಾಗುತ್ತದೆ. ಪೌಷ್ಟಿಕಾಂಶದ ಜೊತೆಗೆ ಕಡಿಮೆ ಕೊಬ್ಬಿನ ಆಹಾರಗಳನ್ನು ಸೇವನೆ ಮಾಡಬೇಕು. ನಿತ್ಯ ವ್ಯಾಯಾಮದಿಂದ ಕೊಲೆಸ್ಟ್ರಾಲ್ಗೆ ಬ್ರೇಕ್ ಹಾಕಬಹುದು.
ವೃದ್ಧಾಪ್ಯ
ವಯಸ್ಸಾದಂತೆ ನಿಮ್ಮ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಹೃದಯಾಘಾತವು ಯಾವುದೇ ವಯಸ್ಸಿನಲ್ಲಿ ಬರಬಹುದಾದ್ರೂ 45 ವರ್ಷಗಳ ನಂತರ ಪುರುಷರಿಗೆ ಮತ್ತು ಋತುಬಂಧದ ನಂತರ ಅಥವಾ 50 ವರ್ಷ ವಯಸ್ಸಿನ ಮಹಿಳೆಯರಿಗೆ ಅಪಾಯವು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಒತ್ತಡ
ಹೆಚ್ಚು ಒತ್ತಡಕ್ಕೆ ಒಳಗಾಗದೇ, ಯಾವುದೇ ಆತಂಕಕ್ಕೆ ಗುರಿಯಾಗದೇ ಸದಾ ಉಲ್ಲಾಸಮಯವಾಗಿ ಇರಬೇಕು. ಕೆಲಸ, ಕುಟುಂಬ ಹೀಗೆ ಕೆಲ ಒತ್ತಡಗಳಿಂದ ಹೃದಯಾಘಾತ ಆಗಬಹುದು. ಹೀಗಾಗಿ ವಯಸ್ಸು ಹೆಚ್ಚಾಗುವುದರಿಂದ ಚಟುವಟಿಕೆಯಿಂದ ಇರಬೇಕು. ಯೋಗದಲ್ಲಿ ಭಾಗವಹಿಸುವುದು, ಶ್ವಾಸಕೋಶಕ್ಕೆ ಸರಾಗವಾಗಿ ಗಾಳಿಯಾಡುವಂತೆ ಉಸಿರಾಟದ ವ್ಯಾಯಾಮ ಮಾಡುವುದು ಉತ್ತಮ. ಎಲ್ಲರಲ್ಲಿಯೂ ಬೆರೆತುಕೊಂಡು ಇರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ