newsfirstkannada.com

ಹಣ್ಣು ಕೊಟ್ಟು ಲೈಂಗಿಕ ದೌರ್ಜನ್ಯ.. H.D ರೇವಣ್ಣ, ಪ್ರಜ್ವಲ್‌ಗೆ SIT ಚಾರ್ಜ್‌ಶೀಟ್‌ನಲ್ಲಿ ಬಿಗ್ ಶಾಕ್‌; ಏನೇನಿದೆ?

Share :

Published August 23, 2024 at 6:41pm

    ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪ್ಪ-ಮಗನಿಗೆ ಶುರು ಹೊಸ ಸಂಕಷ್ಟ..!

    ಹೆಚ್​.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಕೇಸ್

    ತನಿಖಾಧಿಕಾರಿ ಸುಮರಾಣಿಯಿಂದ ಕೋರ್ಟ್​ಗೆ ಚಾರ್ಜ್‌ಶೀಟ್ ಸಲ್ಲಿಕೆ

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್​.ಡಿ.ರೇವಣ್ಣಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿಗಳ ಕೋರ್ಟ್​ಗೆ ಎಸ್​ಐಟಿಯಿಂದ ಚಾರ್ಜ್​​ಶೀಟ್ ಸಲ್ಲಿಕೆಯಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎಸ್​ಐಟಿಯ ತನಿಖಾಧಿಕಾರಿ ಸುಮರಾಣಿಯವರಿಂದ 42ನೇ ಎಸಿಎಂಎಂ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್‌ನಲ್ಲಿದೆ ರೋಚಕ ಟ್ವಿಸ್ಟ್‌.. ಪಟ್ಟಣಗೆರೆ ಶೆಡ್‌ ಚಕ್ರವ್ಯೂಹದಲ್ಲೇ ನಟ ದರ್ಶನ್‌ & ಗ್ಯಾಂಗ್‌ ಲಾಕ್‌? 

ಅಪ್ಪ ಮಗನ ವಿರುದ್ಧ ಸಲ್ಲಿಕೆಯಾದ ಚಾರ್ಜ್‌ಶೀಟ್‌ನಲ್ಲಿ ಏನಿದೆ..?
ಹೆಚ್​​.ಡಿ.ರೇವಣ್ಣ ವಿರುದ್ಧ ಸಲ್ಲಿಕೆಯಾದ ಚಾರ್ಜ್​ಶೀಟ್​ನಲ್ಲಿ ರೇವಣ್ಣ ಸಂತ್ರಸ್ತೆಗೆ ಹಣ್ಣು ಕೊಟ್ಟು ದೌರ್ಜನ್ಯ ಮಾಡುತ್ತಿದ್ದರು ಎಂದು ಉಲ್ಲೇಖವಾಗಿದೆ. ಹಣ್ಣು ಕೊಡುವ ನೆಪದಲ್ಲಿ ಹೆಚ್​.ಡಿ ರೇವಣ್ಣ ನಿರಂತರ ದೌರ್ಜನ್ಯ ಎಸಗಿರುವುದು ಉಲ್ಲೇಖವಾಗಿದೆ. ಹೊಳೆನರಸಿಪುರದ ಚೆನ್ನಾಂಬಿಕ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ತನಿಖೆ ವೇಳೆ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಸಲ್ಲಿಕೆಯಾದ ದೋಷಾರೋಪಪಟ್ಟಿಯಲ್ಲಿ, ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಂತ್ರಸ್ತೆ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಹಾಸನ ಮತ್ತು ಬೆಂಗಳೂರಿನ ನಿವಾಸದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಸಂತ್ರಸ್ತೆಯನ್ನು ರೂಮ್​ನೊಳಗೆ ಕರೆದುಕೊಂಡು ಹೋಗಿ ಡೋರ್ ಲಾಕ್ ಮಾಡಿ ಪ್ರಜ್ವಲ್ ಅತ್ಯಾಚಾರ ನಡೆಸುತ್ತಿದ್ದರು ಎಂದು ಉಲ್ಲೇಖವಾಗಿದೆ. ಅದು ಮಾತ್ರವಲ್ಲ ಈಗ ಒಂಟಿಯಾಗಿ ಸಿಕ್ಕಿದ್ದೀಯಾ, ಇವತ್ತು ನಾನು ಹೇಳಿದ ಹಾಗೇ ಕೇಳದೇ ಇದ್ರೆ ನಿನ್ನ ಕಥೆ ಮುಗಿಸುತ್ತೇನೆ ಎಂದು ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದರು. ಸಂತ್ರಸ್ತೆ ಎಷ್ಟೇ ಬೇಡಿಕೊಂಡರು ಬಿಡದೆ ಬಟ್ಟೆ ಬಿಚ್ಚಿಸಿದ್ರು ಎಂಬ ಬಗ್ಗೆಯೂ ಚಾರ್ಜ್​ಶೀಟ್​ನಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಹೊಸ ಪ್ರೀತಿ, ಹೊಸ ಮದುವೆ.. ಬಿಗ್‌ ಸರ್‌ಪ್ರೈಸ್ ಕೊಟ್ಟ ಸ್ಟಾರ್ ನಿರೂಪಕಿ; ಏನಿದು? VIDEO 

ಜೊತೆಗೆ ಸಂತ್ರಸ್ತೆಯ ವಿರೋಧದ ನಡುವೆಯೂ ಬಟ್ಟೆ ಹರಿದು ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿದ್ದಾರೆ. ಜೊತೆಗೆ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಜ್ವಲ್ ಈ ವಿಚಾರವನ್ನು ಯಾರಿಗಾದರೂ ತಿಳಿಸಿದ್ರೆ, ನಿನ್ನ ಗಂಡನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಸಂತ್ರಸ್ತೆ ಮಹಿಳೆಯ ಮಗಳಿಗೂ ವಿಡಿಯೋ ಕಾಲ್ ಮಾಡಿ ಹಿಂಸೆ ನೀಡಿದ್ದರು.ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗಾಗಳನ್ನು ತೋರಿಸುವಂತೆ ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದರು, ಅಶ್ಲೀಲ ಫೋಟೋ ವಿಡಿಯೋಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ ಪ್ರಜ್ವಲ್​, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಕ್ಕೂ ಅವರೇ ಮೂಲ ಕಾರಣವೆಂದು ಎಸ್​ಐಟಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ್ಣು ಕೊಟ್ಟು ಲೈಂಗಿಕ ದೌರ್ಜನ್ಯ.. H.D ರೇವಣ್ಣ, ಪ್ರಜ್ವಲ್‌ಗೆ SIT ಚಾರ್ಜ್‌ಶೀಟ್‌ನಲ್ಲಿ ಬಿಗ್ ಶಾಕ್‌; ಏನೇನಿದೆ?

https://newsfirstlive.com/wp-content/uploads/2024/08/HD-Revanna-Prajwal-Revanna.jpg

Load More