newsfirstkannada.com

×

BIGG BOSS 11 ಶುರುವಾಗಲು ದಿನಗಣನೆ.. ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ!

Share :

Published September 25, 2024 at 3:25pm

Update September 25, 2024 at 5:58pm

    ಪ್ರೋಮೋ ರಿಲೀಸ್ ಮಾಡಿ​ ಕುತೂಹಲ ಮೂಡಿಸಿದ ಬಿಗ್​ಬಾಸ್​

    ಜಸ್ಟ್ 4 ದಿನಗಳಲ್ಲಿ​ ಬರಲಿದೆ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​

    ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಬರಬಹುದು?

ಜಸ್ಟ್​ 4 ದಿನಗಳಲ್ಲಿ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಶುರುವಾಗುತ್ತಿದೆ. ಈಗಿನಿಂದಲೇ ವೀಕ್ಷಕರಲ್ಲಿ ಕೂತುಹಲ ಮನೆ ಮಾಡಿದೆ. ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಕಾಯುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada11: ಮೊದಲ 5 ಕಂಟೆಸ್ಟೆಂಟ್‌ಗಳು ಯಾರು? ಬಿಗ್‌ ಬಾಸ್‌ ಮನೆಯಿಂದಲೇ ಬಿಗ್ ಅನೌನ್ಸ್‌!

ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಮೊನ್ನೆಯಷ್ಟೇ ಬಿಗ್​ಬಾಸ್​ ತಂಡ ಸುದ್ದಿಗೋಷ್ಠಿ ನಡೆಸಿ ದೊಡ್ಮನೆಗೆ ಬರೋ ಸ್ಪರ್ಧಿಗಳ ಬಗ್ಗೆ ಕೆಲವೊಂದು ವಿಚಾರದ ಕುರಿತು ಮಾಹಿತಿ ನೀಡಿದ್ದಾರೆ.

ಅದರಲ್ಲೂ ಈ ಸೀಸನ್​ ಹೊಸ ಅಧ್ಯಾಯ ಆಗಿರುವುದರಿಂದ ಹತ್ತಾರು ಬದಲಾವಣೆಗೆ ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ಮುಖ್ಯವಾಗಿ ಶನಿವಾರ ನಡೆಯುತ್ತಿರೋ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್​ಬಾಸ್​ಗೆ ಬರೋ ಐದು ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಿದ್ದಾರೆ. ಜೊತೆಗೆ ವೀಕ್ಷಕರು ವೋಟ್​ ಮಾಡುವ ಆಧಾರದ ಮೇಲೆ ಸ್ಪರ್ಧಿಗಳು ನರಕಕ್ಕೆ ಹೋಗ್ತಾರಾ ಅಥವಾ ಸ್ವರ್ಗಕ್ಕೆ ಹೋಗ್ತಾರಾ ಅಂತ ತಿಳಿದು ಬರಲಿದೆ. ಇನ್ನೂ ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಸ್ಪರ್ಧಿಗಳ ಪರವಾಗಿ ವೋಟ್​ ಹಾಕಬಹುದಾಗಿದೆ.

ಈಗಾಗಲೇ ಬಿಗ್​ಬಾಸ್​ ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ. ​ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್​ ನಟ, ನಟಿಯರು, ಸೋಷಿಯಲ್​ ಮೀಡಿಯಾ ಸ್ಟಾರ್​ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ 3 ದಿನಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS 11 ಶುರುವಾಗಲು ದಿನಗಣನೆ.. ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ!

https://newsfirstlive.com/wp-content/uploads/2024/09/bbk-11-1.jpg

Load More