newsfirstkannada.com

‘ಲೋಕ’ ಸಮರಕ್ಕೆ ಸೆಮಿಫೈನಲ್‌.. ಮಿಜೋರಾಂ, ಛತ್ತೀಸ್‌ಗಢ ಮತದಾನಕ್ಕೆ ಕ್ಷಣಗಣನೆ; ಬಲಾಬಲ ಏನು?

Share :

07-11-2023

  ಕೆಲವೇ ಕ್ಷಣದಲ್ಲಿ ಮಿಜೋರಾಂ ಹಾಗೂ ಛತ್ತೀಸ್‌ಗಢದಲ್ಲಿ ಮತದಾನ

  ಮಿಜೋ ನ್ಯಾಷನಲ್‌ ಫ್ರಂಟ್‌ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ

  ಛತ್ತೀಸ್‌ಗಢದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರಾನೇರ ಪೈಪೋಟಿ ಇದೆ

ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ನಡೆಯೋ ಪಂಚರಾಜ್ಯಗಳ ಮೆಗಾ ಎಲೆಕ್ಷನ್‌ ಬಹಳಷ್ಟು ಕುತೂಹಲ ಕೆರಳಿಸಿದೆ. ಸೆಮಿಫೈನಲ್‌ ಎಂದೇ ಬಿಂಬಿತವಾಗಿರೋ 5 ರಾಜ್ಯಗಳ ರಿಸಲ್ಟ್‌ ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯಾಗಿದೆ. ಜಿದ್ದಾಜಿದ್ದಿನ ಈ ಚುನಾವಣಾ ಕದನದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಕೆಲವೇ ಕ್ಷಣದಲ್ಲಿ ಮಿಜೋರಾಂ ಹಾಗೂ ಛತ್ತೀಸ್‌ಗಢದಲ್ಲಿ ಮತದಾನ ಆರಂಭವಾಗುತ್ತಿದೆ.

ಈ ಬಾರಿ ಮಿಜೋರಾಂ ವಿಧಾನಸಭಾ ಅಖಾಡದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಧಿಕಾರದಲ್ಲಿರುವ ಮಿಜೋ ನ್ಯಾಷನಲ್‌ ಫ್ರಂಟ್‌ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. MNFಗೆ ಜೋರಾಮ್ ಪೀಪಲ್ಸ್ ಪಾರ್ಟಿ, ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿ ಅಖಾಡದಲ್ಲಿದೆ. MNF ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಮಧ್ಯೆ ಬಿಜೆಪಿ ಕೂಡ ತನ್ನ ಅದೃಷ್ಟ ಪರೀಕ್ಷೆ ಮಾಡುತ್ತಿದೆ.

ಮಿಜೋರಾಂ ಒಟ್ಟು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಮಿಜೋ ನ್ಯಾಷನಲ್‌ ಫ್ರಂಟ್‌, ಜೋರಾಮ್ ಪೀಪಲ್ಸ್ ಪಾರ್ಟಿ ಮತ್ತು ಕಾಂಗ್ರೆಸ್ 40 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಬಿಜೆಪಿ ಈ ಬಾರಿ ಕೇವಲ 23 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

ಮಿಜೋರಾಂ ಮತದಾನದ ಜೊತೆಗೆ ಛತ್ತೀಸ್‌ಗಢದಲ್ಲೂ ಇವತ್ತೇ ಮೊದಲ ಹಂತದ ಮತದಾನ ನಡೆಯುತ್ತಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರಾನೇರ ಪೈಪೋಟಿ ಇದೆ. 2018ರ ಚುನಾವಣೆಯಲ್ಲಿ ಸಿಎಂ ಭೂಪೇಶ್ ಸಿಂಗ್ ಬಘೇಲ ಅವರು ದಾಖಲೆಯ ಗೆಲುವಿನೊಂದಿಗೆ ಅಧಿಕಾರದ ಗದ್ದುಗೆ ಏರಿದ್ದರು. ಈ ಬಾರಿ ಮಹದೇವ್ ಬೆಟ್ಟಿಂಗ್‌ ಆ್ಯಪ್‌ನ ಬಹುಕೋಟಿ ಆರೋಪ ಎದುರಿಸುತ್ತಿದ್ದಾರೆ. ಬಿಜೆಪಿಯ ರಮಣ್‌ ಸಿಂಗ್ ವರ್ಸಸ್‌ ಭೂಪೇಶ್ ಸಿಂಗ್ ಬಘೇಲ ಫೈಟ್ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಛತ್ತೀಸ್‌ಗಢ ಚುನಾವಣೆಯ ಫಲಿತಾಂಶ ನಿರ್ಣಾಯಕವಾಗಿದೆ.

ಛತ್ತೀಸ್‌ಗಢದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿದ್ದು, ಇಂದು 20 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 17ರಂದು 2ನೇ ಹಂತದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮಿಜೋರಾಂ, ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಸಮರಕ್ಕೆ ಸೆಮಿಫೈನಲ್‌.. ಮಿಜೋರಾಂ, ಛತ್ತೀಸ್‌ಗಢ ಮತದಾನಕ್ಕೆ ಕ್ಷಣಗಣನೆ; ಬಲಾಬಲ ಏನು?

https://newsfirstlive.com/wp-content/uploads/2023/11/Rahul-Gandhi-Modi.jpg

Load More