newsfirstkannada.com

ವಿಶ್ವವಿಖ್ಯಾತ ದಸರಾಗೆ ಕ್ಷಣಗಣನೆ.. ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ

Share :

24-10-2023

    ಕರ್ನಾಟಕದ ಪರಂಪರೆಯ ಪ್ರತೀಕ ದಸರಾಗೆ ಕ್ಷಣಗಣನೆ!

    ಜಂಬೂಸವಾರಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಚಾಲನೆ

    ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದು ಪೂಜೆ

ವಿಶ್ವವಿಖ್ಯಾತ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. 4ನೇ ಬಾರಿ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ತಯಾರಾಗಿದ್ದು, 14 ಸ್ನೇಹಿತರ ಜೊತೆ ರಾಜಬೀದಿಯಲ್ಲಿ ಗಜಗಾಂಭಿರ್ಯದ ಹೆಜ್ಜೆ ಹಾಕಲಿದ್ದಾನೆ. ಇನ್ನು, ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ತಾಯಿ ಚಾಮುಂಡಿ, ಭಕ್ತಕೋಟಿಗೆ ದರ್ಶನ ನೀಡ್ಲಿದ್ದಾಳೆ.

ನಾಡಹಬ್ಬ ದಸರಾ ಸಂಭ್ರಮ ಅಂತಿಮ ಘಟ್ಟ ತಲುಪಿದೆ. ದಸರಾದ ಪ್ರಮುಖ ಆಕರ್ಷಣೀಯ ಕೇಂದ್ರಬಿಂದು ಚಿತ್ತಾಕರ್ಷಕ ಜಂಬೂಸವಾರಿ ಇವತ್ತು ನಡೆಯಲಿದೆ. ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿ ಮುಗಿದಿದ್ದು, 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿಗೆ ನಮಿಸಲು ಭಕ್ತಕೋಟಿ ಕಾತರದಿಂದ ಕಾಯ್ದಿದೆ.

ವಿಶ್ವವಿಖ್ಯಾತ ದಸರಾಗೆ ಮಲ್ಲಿಗೆ ನಗರಿ ಮೈಸೂರು ಸಜ್ಜು!

ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಸರ್ವ ರೀತಿಯಲ್ಲೂ ಸಜ್ಜಾಗಿದೆ‌. ನಾಡ ಅಧಿದೇವತೆಗೆ ಪುಷ್ಪಾರ್ಚನೆ ಸಲ್ಲಿಸಲು ಅರಮನೆ ಅಂಗಳದಲ್ಲಿ ಅಂತಿಮ ಹಂತದ ಸಿದ್ಧತೆ ಮುಗಿದಿದೆ. ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ 14 ಗಜಗಳು, ಗಾಂಭಿರ್ಯದ ಹೆಜ್ಜೆ ಹಾಕಲಿವೆ.

ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಪೂಜೆ

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1:46 ರಿಂದ 02:08 ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಮಕರ ಲಗ್ನದಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ನೆರವೇರಿಸಲಿದ್ದಾರೆ. ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಜೆ 4:40ರಿಂದ 5ಗಂಟೆಯ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ. ಈ ವೇಳೆ, ಡಿಸಿಎಂ ಡಿ.ಕೆ ಶಿವಕುಮಾರ್‌, ರಾಜವಂಶಸ್ಥ ಯದುವೀರ್​ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ. ಮಹದೇವಪ್ಪ ಉಪಸ್ಥಿತರಿರಲಿದ್ದಾರೆ.

4ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು!

ಚಿನ್ನದ ಅಂಬಾರಿ ಹೊತ್ತು ನಾಡದೇವಿ ಮೆರೆಸಲು ಅಭಿಮನ್ಯು ರೆಡಿಯಾಗಿದ್ದಾನೆ.. ಸತತ 4ನೇ ಬಾರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅಭಿಮನ್ಯು, ವಿರಾಜಮಾನವಾಗಿ ರಾಜಬೀದಿಗಳಲ್ಲಿ ಸಾಗಲಿದ್ದಾನೆ.. ಅರ್ಜುನ ಆನೆ, ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆ ಮುನ್ನಡೆಸಲಿವೆ.. ಇನ್ನು, ಜಂಬೂ ಸವಾರಿಯಲ್ಲಿ 40 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ.

ಅಭಿಮನ್ಯು
ಅಭಿಮನ್ಯು

ಪಂಜಿನ ಕವಾಯತಿನಲ್ಲಿ ಗಮನ ಸೆಳೆದ ಸಾಹಸ ಪ್ರದರ್ಶನ!

ಮೈಸೂರು ದಸರಾದ ಅತ್ಯಾಕರ್ಷಕಗಳಲ್ಲಿ ಒಂದಾದ ಪಂಜಿನ ಕವಾಯತು ಸಂಜೆ ನಡೆಯಲಿದೆ. ನಿನ್ನೆ ರಿಹರ್ಸಲ್​​​ ನಡೀತು. 18 ತಂಡಗಳ ಪಥ ಸಂಚಲನ ಗಮನ ಸೆಳೆಯಿತು. ಪಂಜಿನ ಕಾವಾಯತು ನಡುವೆ ಕನ್ನಡ ಹಾಡುಗಳಿಗೆ 300 ಮಕ್ಕಳ ನೃತ್ಯ ಕಣ್ಮನ ಸೆಳೆಯಿತು. ಈ ನೃತ್ಯದ ಜೊತೆಗೆ ಯುವಕತು ಮಲ್ಲಗಂಬವಾಡಿದ್ರು.. ಶ್ವೇತಾಶ್ವ ಪಡೆಯ ಬೈಕ್‌‌ಗಳ ಕಸರತ್ತು ಮೈನವಿರೇಳಿಸ್ತು.

ಇನ್ನು, ಅಶ್ವಾರೋಹಿ ಪಡೆಯಿಂದ ಟೆಂಟ್ ಪೆಗ್ಗಿಂಗ್ ಪ್ರದರ್ಶನ ಮೈರೋಮಾಂಚನಗೊಳಿಸ್ತು.. ಕುದುರೆ ಮೇಲೆ ಕುಳಿತು ಟೆಂಗ್ ಪೆಗ್ಗಿಂಗ್ ತೆಗೆಯುವ ಚಾಕಚಕ್ಯತೆ ಕಂಡು ಜನ ನಿಬ್ಬೆರಗಾದ್ರು..

ದಸರಾ ಸಂಭ್ರಮ ನೋಡಲು ಅಂಬಾರಿ ಏರಿದ ಸಿಎಂ

ದಸರಾ ಸಂಭ್ರಮವನ್ನ ಕಣ್ತುಂಬಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅಂಬಾರಿ ಬಸ್​ ಏರಿದ್ರು.. ನಗರದ ಬಸವೇಶ್ವರ ಸರ್ಕಲ್​ನಿಂದ ಅಂಬಾರಿ ಬಸ್​ನಲ್ಲಿ ಸಿಎಂ ಮೈಸೂರು ಸಿಟಿ ರೌಂಡ್ಸ್ ಹೊಡೆದ್ರು.. ಈ ವೇಳೆ, ಸಿಎಂಗೆ ಹಲವು ಸಚಿವರು ಸಾಥ್​​​ ನೀಡಿದ್ರು.. ಸಿಟಿ ರೌಂಡ್ಸ್ ಅಂತ್ಯದ ಬಳಿಕ ಸಂವಿಧಾನದ ಪೀಠಿಕೆಯ ಮುಂದೆ ಸಚಿವರು, ಶಾಸಕರ ಜೊತೆ ಸಿಎಂ ಪೋಟೋಗೆ ಪೋಸ್​​​ ನೀಡಿದ್ರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಒಟ್ಟಾರೆ, ದಸರಾ ಸಂಭ್ರಮ ವೈಭಯುತವಾಗಿ ಜರುಗಲಿದ್ದು, ಅಹಿತಕರ ಘಟನೆ ನಡೆಯದಂತೆ ಎಲ್ಲೆಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 4 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವವಿಖ್ಯಾತ ದಸರಾಗೆ ಕ್ಷಣಗಣನೆ.. ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ

https://newsfirstlive.com/wp-content/uploads/2023/10/dasara-2.jpg

Load More