ಅಮೆರಿಕಾದಲ್ಲಿ ಭಾರತದ ದಂಪತಿ ಮತ್ತು ಮಗು ಸಾವು ಕೇಸ್
ಭಾರತಕ್ಕೆ ಮೃತದೇಹ ತರಿಸಿಕೊಡಿ ಎಂದು ಸರ್ಕಾರದ ಮೊರೆ..!
ದಂಪತಿ ಮತ್ತು ಮಗು ಸಾವಿನ ಸುತ್ತ ಹಲವು ಅನುಮಾನದ ಹುತ್ತ
ದಾವಣಗೆರೆ: ಅನುಮಾನಾಸ್ಪದ ರೀತಿಯಲ್ಲಿ ದಾವಣಗೆರೆ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರೋ ಘಟನೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಜಿಲ್ಲೆಯಲ್ಲಿ ನಡೆದಿದೆ. ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35), ಯಶ್ ಹೊನ್ನಾಳ್ (6) ಮೃತ ದುರ್ದೈವಿಗಳು.
ಮೃತ ದುರ್ದೈವಿಗಳು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಗಳು. ಕಳೆದ 9 ವರ್ಷಗಳ ಹಿಂದೆ ಪ್ರತಿಭಾ ಹಾಗೂ ಯೊಗೇಶ್ ಮಾಡಿಕೊಂಡಿದ್ದರು. ನಂತರ ದಂಪತಿ ಅಮೆರಿಕಾದಲ್ಲಿ ವಾಸವಾಗಿದ್ದರು. ಮೃತ ಇಬ್ಬರೂ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಇವರಿಗೆ 6 ವರ್ಷದ ಮಗ ಕೂಡ ಇದ್ದ. ಆದರೆ ಈ ಮೂವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.
ಹೀಗಾಗಿ ನಿಖರ ಕಾರಣ ತಿಳಿಸುವಂತೆ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಮೃತದೇಹಗಳನ್ನ ಭಾರತಕ್ಕೆ ತರಿಸಿಕೊಡಿ ಯೋಗೇಶ್ ತಾಯಿ ಶೋಭಾ ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಈ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಮೃತ ಯೋಗೇಶ್ ಹೊನ್ನಾಳ ತಾಯಿ, ನಮಗೂ ಕೂಡ ತಡರಾತ್ರಿ ಈ ವಿಚಾರದ ಬಗ್ಗೆ ತಿಳಿಯಿತು. ಒಂದು ವಾರದೇ ಹಿಂದೆಯೇ ನಮಗೆ ಕರೆ ಮಾಡಿ ಡಿಸೆಂಬರ್ಗೆ ಬರುತ್ತೇವೆ ಎಂದು ಹೇಳಿದ್ದರು. ನನ್ನ ಮಗ 9 ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ. ಅವರ ಮಧ್ಯೆ ಯಾವುದೇ ಗಲಾಟೆ ಇರಲಿಲ್ಲ. ಆದರೆ ಇವರ ಸಾವಿಗೆ ಏನು ಕಾರಣ ಎಂದು ತಿಳಿಯುತ್ತಿಲ್ಲ. ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಮಗ, ಸೊಸೆ ಮತ್ತು ಮೊಮ್ಮಗನ ಮೃತ ದೇಹವನ್ನು ಭಾರತಕ್ಕೆ ಕಳುಹಿಸಿ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ