newsfirstkannada.com

×

ಮನೆ ಬಾಡಿಗೆ ಕೊಡೋ ಮುನ್ನ ಹುಷಾರ್.. ಪ್ರೇಮಿಗಳ ವೇಷದಲ್ಲಿ ಬಂದು ನಿಮ್ಮನ್ನು ಹೀಗೂ ಯಾಮಾರಿಸ್ತಾರೆ ಜೋಕೆ..!

Share :

Published June 30, 2023 at 10:43am

Update June 30, 2023 at 11:21am

    ಮಾಲೀಕರೇ.. ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್​

    ಲಿವಿಂಗ್ ಟುಗೆದರ್​ನಲ್ಲಿದ್ದುಕೊಂಡೇ ಮನೆ ದೋಚಿದ ಜೋಡಿ

    ಬರೋಬ್ಬರಿ 4 ಲಕ್ಷದ ಚಿನ್ನ ಕದ್ದು ಸೆಟಲ್​ ಆಗಿದ್ದ ಜೋಡಿ

ಬೆಂಗಳೂರು: ಬಾಡಿಗೆ ಮನೆಯ ಮೂಲಕ ಲಿವಿಂಗ್ ಟುಗೆದರ್​ನಲ್ಲಿದ್ದ ಜೋಡಿ ಮಾಲೀಕರ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದ ಘಟನೆ ಎಜಿಎಸ್ ಲೇಔಟ್​ನಲ್ಲಿ ಬೆಳಕಿಗೆ ಬಂದಿದೆ. ಸುಬ್ರಮಣ್ಯಪುರ ಪೊಲೀಸರು ಈ ಜೋಡಿಯನ್ನು ಹಿಡಿದು ಬಂಧಿಸಿದ್ದಾರೆ.

4 ಲಕ್ಷ ಮೌಲ್ಯದ ಚಿನ್ನಾಭರಣ

ಲಿಖಿತ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಇವರಿಬ್ಬರು ಬಾಡಿಗೆ ಮನೆ ಪಡೆದುಕೊಂಡು ಲಿವಿಂಗ್​ ಟುಗೆದರ್​ನಲ್ಲಿ ಜೀವಿಸುತ್ತಿದ್ದರು. ಹೀಗಿರುವಾಗ ಮಾಲೀಕನ ಮನೆಗೆ ಕನ್ನ ಹಾಕಿದ್ದರು. ಬರೊಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದರು.

ಸಿಸಿಟಿವಿಯಲ್ಲಿ ಸರೆಯಾಯ್ತು ಜೋಡಿಯ ಕೈಚಳಕ

ಜೋಡಿಗಳು ಪ್ರೇಮಲತ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮನೆ ಕಳ್ಳತನ ಮಾಡಲು ಯೋಚಿಸಿ ಬರೋಬ್ಬರಿ ನಾಲ್ಕು ತಿಂಗಳು ಲಿಖಿತ ಹಾಗೂ ಸುಮಂತ್ ಬಾಡಿಗೆಗಿದ್ದರು.
ನಾಲ್ಕೂವರೆ ತಿಂಗಳಿಂದ ಮಾಲೀಕನ ಚಲನ ವಲನ ವೀಕ್ಷಿಸಿದ್ದ ಜೋಡಿ ನಂತರ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕನ ಮನೆಯಲ್ಲಿ ಕಳ್ಳತನ ಮಾಡಿದ್ದರು. ಮಾತ್ರವಲ್ಲದೆ, ಆರೋಪಿಗಳ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಶಿವಮೊಗ್ಗದಲ್ಲಿ ಸೆಟಲ್ ಆಗಿದ್ದ ಜೋಡಿ

ಮನೆ ಮಾಲೀಕ ಪ್ರೇಮಲತ ಬಾಡಿಗೆ ಜಾಸ್ತಿ ಬರುತ್ತೆ ಅಂತ ಲಿವಿಂಗ್ ಟುಗೆದರ್ ಜೋಡಿಗೆ ಮನೆ ಬಾಡಿಗೆ ಕೊಟ್ಟಿದ್ದರು. ಆದರೆ ಖತರ್ನಾಕ್​ ಜೋಡಿಗಳು ಮಾಲೀಕನ ಚಲನ ವಲನ ಗಮನಿಸಿ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಚಿನ್ನದ ಒಡವೆಗಳನ್ನ ಮಾರಿ ಶಿವಮೊಗ್ಗದಲ್ಲಿ ಸೆಟಲ್ ಆಗಿದ್ದರು.

ಕದ್ದ ಹಣ ಖಾಲಿಯಾದ ಹಿನ್ನಲೆ ಲಿಖಿತ ಹಾಗೂ ಸುಮಂತ್ ಮತ್ತೊಂದು ಕೃತ್ಯವೆಸಗಲು ಸಿದ್ದರಾಗಿದ್ದರು. ಸದ್ಯ ತಲೆಮರೆಸಿಕೊಂಡಿದ್ದ ಜೋಡಿ ಸುಬ್ರಮಣ್ಯಪುರ ಪೊಲೀಸರು ಬಲೆಗೆ ಬಿದ್ದಿದ್ದಾರೆ. ವಿಚಾರಣೆ ವೇಳೆ ಮತ್ತೊಂದು ಕೃತ್ಯವೆಸಗಲು ಜೋಡಿ ರೆಡಿಯಾಗಿರೋದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಬಾಡಿಗೆ ಕೊಡೋ ಮುನ್ನ ಹುಷಾರ್.. ಪ್ರೇಮಿಗಳ ವೇಷದಲ್ಲಿ ಬಂದು ನಿಮ್ಮನ್ನು ಹೀಗೂ ಯಾಮಾರಿಸ್ತಾರೆ ಜೋಕೆ..!

https://newsfirstlive.com/wp-content/uploads/2023/06/sumanth.jpg

Load More