newsfirstkannada.com

×

iPhone ಖರೀದಿಸಲೆಂದು 8 ತಿಂಗಳ ಮಗುವನ್ನೇ ಮಾರಿದ ಪಾಪಿ ದಂಪತಿ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Share :

Published July 28, 2023 at 6:15am

Update July 28, 2023 at 11:43am

    ರೀಲ್ಸ್​ ಮಾಡುವ ಹುಚ್ಚಿಗೆ ಬಿದ್ದಿದ್ದ ದಂಪತಿ

    ಐಫೋನ್​ ಖರೀದಿಸಲು ಸ್ವಂತ ಮಗುವನ್ನೇ ಮಾರಿದ್ರು

    ಮಗು ಮಾರಿ ಐಫೋನ್ ಕೊಂಡುಕೊಂಡ್ರು.. ಇದೆಂಥಾ ಅವಸ್ಥೆ

ಐಫೋನ್ ಖರೀದಿಸಲೆಂದು ತನ್ನ 8 ತಿಂಗಳ ಮಗುವನ್ನ ಮಾರಾಟ ಮಾಡಿದ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ರೀಲ್ಸ್​ ಮಾಡುವ ಆಸೆಗೆ ಮುಗಿಬಿದ್ದ ದಂಪತಿ ಐಫೋನ್​ ಕೊಂಡುಕೊಳ್ಳಬೇಕೆಂದು ಸ್ವಂತ ಮಗುವನ್ನೇ ಮಾರಾಟ ಮಾಡಿದ್ದಾರೆ​.

ಜಯ್​ದೇವ್​ ಮತ್ತು ಸತಿ ಎಂಬ ದಂಪತಿ ಮಗು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರು 8 ತಿಂಗಳ ಗಂಡು ಮತ್ತು 7 ತಿಂಗಳ ಹೆಣ್ಣು ಮಗುವನ್ನ ಹೊಂದಿದ್ದರು. ಶನಿವಾರದಂದು ಇದ್ದಕ್ಕಿಂದ್ದಂತೆಯೇ ಇವರ ಗಂಡು ಮಗು ನಾಪತ್ತೆಯಾಗಿತ್ತು. ಇವರ ಕೈಯಲ್ಲಿ ಐಫೋನ್​ ಕಾಣಿಸಿತ್ತು. ಇನ್ನು ಐಫೋನ್​ ಬಂದಂತೆ  ದಂಪತಿಗಳು ರೀಲ್ಸ್​ ಮಾಡಲು ಮುಂದಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ರೀಲ್ಸ್​ ಮಾಡಿದ್ದಾರೆ.

ದಂಪತಿ ಸಿಕ್ಕಿಬಿದ್ದಿರೋದು ಹೇಗೆ?

ಐಫೊನ್​ ಬಂದ ತಕ್ಷಣ ದಂಪತಿಗಳ ನಡವಳಿಕೆಯಲ್ಲಿ ವ್ಯತ್ಯಾಸ ಕಾಣಿಸಿತು. ನೆರೆಹೊರೆಯವರಿಗೆ ಅನುಮಾನ ಬಂತು. ಕೊನೆಗೆ ದಂಪತಿಯನ್ನು ಪ್ರಶ್ನಿಸಿದಾಗ ನಿಜ ಸಂಗತಿಯನ್ನು ಬಾಯಿ ಬಿಟ್ಟರು. ಬಳಿಕ ಊರವರು ಪೊಲೀಸರಿಗೆ ವಿಷಯ ತಿಳಿಸಿದರು.

ಮಗುವಿನ ರಕ್ಷಣೆ

ದಂಪತಿಗಳು ಖಾರ್ದಾ ಪ್ರದೇಶ ಮಹಿಳೆಗೆ ಮಗುವನ್ನು ಮಾರಾಟ ಮಾಡಿದ್ದು, ಪೊಲೀಸರಿಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಮಗುವನ್ನು ರಕ್ಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

iPhone ಖರೀದಿಸಲೆಂದು 8 ತಿಂಗಳ ಮಗುವನ್ನೇ ಮಾರಿದ ಪಾಪಿ ದಂಪತಿ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

https://newsfirstlive.com/wp-content/uploads/2023/07/West-Bengal-Iphone.jpg

Load More