newsfirstkannada.com

×

ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ತಂದೆನ ಕೆಣಕಿದ ಜೋಡಿ.. ಆ ಮೇಲೆ ಆಗಿದ್ದೇನು?

Share :

Published September 19, 2024 at 9:55pm

    ವಾಕಿಂಗ್​ ಹೋಗಿದ್ದ ಸಲ್ಮಾನ್ ಖಾನ್ ತಂದೆಗೆ ಬೆದರಿಕೆ ಹಾಕಿದ ಜೋಡಿ

    ಸ್ಕೂಟರ್ ಮೇಲೆ ಹೊರಟಿದ್ದವರು ಸಲ್ಲು ತಂದೆಯನ್ನು ಕೆಣಕಿದ್ದಾದ್ರೂ ಏಕೆ?

    ಫ್ರ್ಯಾಂಕ್ ಎಂಬ ಹುಚ್ಚಾಟ ಮಾಡಲು ಹೋಗಿ ಜೋಡಿ ಏನು ಮಾಡಿದ್ರು?

ಮುಂಬೈ: ಬಾಲಿವುಡ್​ನ ಖ್ಯಾತ ನಟ ಸಲ್ಮಾನ್​ ಖಾನ್​ ತಂದೆಗೆ ಸ್ಕೂಟರ್​ ಮೇಲೆ ಬಂದ ಬುರ್ಖಾಧಾರಿ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಅಪರಿಚಿತ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ.

88 ವರ್ಷದ ಸಲೀಮ್ ಖಾನ್ ನಿತ್ಯದಂತೆ ವಾಕಿಂಗ್ ಹೋಗಿದ್ದಾರೆ. ಬಂದ್ರಾದಲ್ಲಿರುವ ಅವರ ನಿವಾಸದ ಸಮೀಪ ಒಂದು ಬೆಂಚ್ ಮೇಲೆ ಕೂತ ವೇಳೆ ಸ್ಕೂಟರ್​ ಮೇಲೆ ಬಂದ ಆಗಂತುಕ ಬುರ್ಖಾಧಾರಿ ಮಹಿಳೆ ಹಾಗೂ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ಯುವಕ ‘ಲಾವೆರೆನ್ಸ್​ ಬಿಷ್ಣೋಯಿಕೋ ಬೇಜು ಕ್ಯಾ‘ (ಲಾವೆರೆನ್ಸ್ ಬಿಷ್ಣೋಯಿಯನ್ನ ಕಳಸ್ಲಾ) ಅಂತ ಕೇಳಿದ್ದಾರೆ. ಇಷ್ಟು ಕೇಳಿದವರೇ ವೇಗವಾಗಿ ಅಲ್ಲಿಂದ ಹೊರಟುಹೋಗಿದ್ದಾರೆ.ಈ ಘಟನೆ ನೋಡಿದ ಸಲೀಮ್ ಖಾನ್​ ಅಂಗರಕ್ಷಕರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದ ಐಶ್ವರ್ಯಾ ರೈ ಮಗಳು.. ಅಮ್ಮನಂತೆ ಎಂಥಾ ಸಂಸ್ಕಾರ ಎಂದ ಅಭಿಮಾನಿಗಳು

ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದಂಪತಿಯ ದೃಶ್ಯಗಳನ್ನು ಆಧರಿಸಿ ಅವರನ್ನು ಕೊನೆಗೆ ಬಂಧಿಸಿದ್ದಾರೆ. ಈ ವೇಳೆ ನಾವು ಫ್ರ್ಯಾಂಕ್ ಮಾಡಲು ಅಂತ ಹಾಗೆ ಮಾಡಿದೇವು ಎಂದು ಆ ದಂಪತಿ ಹೇಳಿಕೊಂಡಿದೆ.

ಇದನ್ನೂ ಓದಿ: ರಣವೀರ್​ ಕೆನ್ನೆಗೆ 15 ಬಾರಿ ಬಾರಿಸಿದ ಕರೀನಾ ಕಪೂರ್​! ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು ಅಂದರೆ..
ಕೆಲವು ತಿಂಗಳುಗಳ ಹಿಂದಷ್ಟೇ ಅಂದ್ರೆ ಏಪ್ರಿಲ್​ 14 ರಂದು ಬೈಕ್ ಮೇಲೆ ಬಂದಿದ್ದ ಇಬ್ಬರು ಸಲ್ಮಾನ್ ಖಾನ್ ಮನೆಯ ಮೇಲೆ ಫೈರಿಂಗ್​ ನಡೆಸಿದ್ದರು. ಆ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಆ ಪ್ರಕರಣ ನಡೆದ ಕೆಲವೇ ತಿಂಗಳಲ್ಲಿ ಈಗ ಮತ್ತೊಂದು ರೀತಿಯ ಬೆದರಿಕೆ ಬಂದಿದ್ದು ಸಲ್ಲು ಕುಟುಂಬವನ್ನು ಆತಂಕಕ್ಕೆ ತಳ್ಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ತಂದೆನ ಕೆಣಕಿದ ಜೋಡಿ.. ಆ ಮೇಲೆ ಆಗಿದ್ದೇನು?

https://newsfirstlive.com/wp-content/uploads/2024/09/SALMAN_KHAN.jpg

Load More