newsfirstkannada.com

×

100 ದಿನಗಳ ಬಳಿಕ ನಟ ದರ್ಶನ್‌ಗೆ ಜಾಮೀನು ಸಿಗುತ್ತಾ? ಬೇಲ್ ಅರ್ಜಿಗೆ ಕೋರ್ಟ್‌ ಹೇಳಿದ್ದೇನು?

Share :

Published September 21, 2024 at 3:54pm

Update September 21, 2024 at 3:55pm

    ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ

    ಪವಿತ್ರಾ ಗೌಡ ಬಳಿಕ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ

    ಪ್ರಕರಣದಲ್ಲಿ ನಟ ದರ್ಶನ್ ಅವರು ಎ2 ಆರೋಪಿಯಾಗಿದ್ದಾರೆ

ರೇಣುಕಾಸ್ವಾಮಿ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರು ಕೊನೆಗೂ 57ನೇ ಸಿಸಿಹೆಚ್ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಂಧನವಾಗಿ 100 ದಿನದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್​​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್​ ಈ ಅರ್ಜಿಯನ್ನು ವಜಾ ಮಾಡಿತ್ತು. ಇದರಿಂದಾಗಿ ಈಗಲೂ ಪವಿತ್ರಾ ಗೌಡ ಜೈಲಿನಲ್ಲೇ ಇದ್ದಾರೆ. ಇದೀಗ ದರ್ಶನ್ ಕೂಡ ಬೇಲ್​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್​ ಸೋಮವಾರ ಅಂದರೆ ಸೆಪ್ಟೆಂಬರ್ 23ಕ್ಕೆ ಮುಂದೂಡಿಕೆ ಮಾಡಿದೆ. ಸದ್ಯ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು.. ವಕೀಲರಿಂದ ಮಹತ್ವದ ನಿರ್ಧಾರ

ಆರೋಪಿ ಪರ ವಕೀಲ ರಂಗನಾಥ ರೆಡ್ಡಿ ಅವರು ವಾದ ಮಂಡಿಸಿದರು. ಒಂದು ವೇಳೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆ.436 ಅಡಿ ಅರ್ಜಿ ಪರಿಗಣಿಸದಿದ್ದರೆ ಸೆಷನ್ಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಸಿಆರ್​​ಪಿಸಿ 439ರ ಅಡಿ ಸೆಷನ್ಸ್ ಕೋರ್ಟ್ ಪರಿಗಣಿಸಬೇಕು. ಆರೋಪಿಗಳ ವಿರುದ್ಧ ನಾನ್ ಬೇಲೆಬಲ್ ಸೆಕ್ಷನ್ ಅಡಿ ಆರೋಪ ಇದೆ. ನಿರೀಕ್ಷಣಾ ಜಾಮೀನು ವಿಚಾರದಲ್ಲಿ ಮಾತ್ರ ಸೆ.436 ಅಡಿ ಅಪ್ಲೇ ಆಗತ್ತದೆ. ಆಗ ಮಾತ್ರ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಬಹುದು. ಆದ್ರೆ ಸೆ.439ರ ಅಡಿ ರೆಗ್ಯೂಲರ್ ಬೇಲ್​ ಅನ್ನ ಸೆಷನ್ಸ್ ನೀಡಬಹುದು. ಹೀಗಾಗಿ ಜಾಮೀನು ಅರ್ಜಿಯನ್ನ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿ ಆದೇಶಿಸಬೇಕು ಎಂದು ವಕೀಲ ರಂಗನಾಥ ರೆಡ್ಡಿ ಕೋರ್ಟ್​​ಗೆ ಮನವಿ ಮಾಡಿದರು.

ಬೇಲ್​​ಬಲ್ ಆರೋಪ ಇರುವ ಮೂವರು ಆರೋಪಿಗಳಿಗೆ ಮಾತ್ರ ಈ ಅವಕಾಶ ಇದೆ. ಉಳಿದ ಆರೋಪಿಗಳ ಅರ್ಜಿ ವಿಚಾರಣೆ ವೇಳೆ ಇನ್ನುಳಿದಿದ್ದನ್ನು ವಾದಿಸಲಾಗುವುದು. ಚಾರ್ಜ್​ಶೀಟ್​​ನಲ್ಲಿರುವ ಸಂಪೂರ್ಣ ಮಾಹಿತಿ ಆಧರಿಸಿ ವಾದಿಸುತ್ತೇನೆ ಎಂದು ಕೋರ್ಟ್​ಗೆ ವಕೀಲರು ಹೇಳಿದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ಕೋರ್ಟ್​ ಸೋಮವಾರಕ್ಕೆ ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100 ದಿನಗಳ ಬಳಿಕ ನಟ ದರ್ಶನ್‌ಗೆ ಜಾಮೀನು ಸಿಗುತ್ತಾ? ಬೇಲ್ ಅರ್ಜಿಗೆ ಕೋರ್ಟ್‌ ಹೇಳಿದ್ದೇನು?

https://newsfirstlive.com/wp-content/uploads/2024/07/darshan_renuka.jpg

Load More