ಶಾಸಕ ಮುನಿರತ್ನ ವಿರುದ್ಧದ ಅ*ತ್ಯಾಚಾರ ಆರೋಪ ಪ್ರಕರಣ
ವಾರಂಟ್ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಹೊರಟ SIT ತಂಡ
ಸಿಐಡಿ ಕಚೇರಿಯಲ್ಲಿ ಶಾಸಕ ಮುನಿರತ್ನ ಅವರ ನಿರಂತರ ವಿಚಾರಣೆ
ಬೆಂಗಳೂರು: ಜಾತಿ ನಿಂದನೆ, ಬೆದರಿಕೆ ಹಾಕಿದ ಪ್ರಕರಣದ ಬಳಿಕ RR ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅ*ತ್ಯಾಚಾರ ಆರೋಪದಲ್ಲಿ ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮುನಿರತ್ನ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಶಾಸಕ ಮುನಿರತ್ನ ವಿರುದ್ಧದ ಅ*ತ್ಯಾಚಾರ ಆರೋಪ ಪ್ರಕರಣದಲ್ಲಿ 42ನೇ ಎಸಿಎಂಎಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಕೆ.ಎನ್. ಶಿವಕುಮಾರ್ ಅವರಿದ್ದ ಪೀಠ ಶಾಸಕ ಮುನಿರತ್ನ ಅವರನ್ನು ಅಕ್ಟೋಬರ್ 5 ರವರೆಗೂ SIT ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಬಹಳಷ್ಟು ಒತ್ತಡಗಳಿತ್ತು. ಜಾತಿ ನಿಂದನೆ, ಅ*ತ್ಯಾಚಾರ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಈ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು.
ಇದನ್ನೂ ಓದಿ: ನಾಳೆಯೇ FIR ಭವಿಷ್ಯ.. ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಕಾರಣವೇನು?
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ವಿಶೇಷ ತನಿಖಾ ತಂಡವು ಶಾಸಕ ಮುನಿರತ್ನ ಅವರನ್ನು ಕಸ್ಟಡಿಗೆ ನೀಡುವಂತೆ ಕೇಳಿತ್ತು. ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಮನವಿ ಮಾಡಿತ್ತು. ಇಂದು ಮುನಿರತ್ನ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಶಾಸಕ ಮುನಿರತ್ನ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಆದೇಶದ ಪ್ರತಿ ಪಡೆದಿರುವ ಎಸ್‌ಐಟಿ ಪರಪ್ಪನ ಅಗ್ರಹಾರ ಜೈಲಿನತ್ತ ತೆರಳಿದೆ. ಬಾಡಿ ವಾರಂಟ್ ಮೇಲೆ ಮುನಿರತ್ನ ಅವರನ್ನು ವಶಕ್ಕೆ ಪಡೆಯುವ ಎಸ್‌ಐಟಿ ತಂಡ ಸಿಐಡಿ ಕಚೇರಿಗೆ ಕರೆತಂದು ಜಾತಿ ನಿಂದನೆ, ಅ*ತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ