newsfirstkannada.com

ಚಿರತೆ ಜೊತೆ ಸೆಣಸಾಡಿ ಮಾಲೀಕನ ರಕ್ಷಿಸಿದ ಗೌರಿ ಹಸು.. ಒಡೆಯನ ಬದುಕಿಸಿದ ಮನ ಮಿಡಿಯುವ ಸ್ಟೋರಿ..!

Share :

09-06-2023

    ಇದೊಂದು ಮನ ಮಿಡಿಯುವ ಕಥೆ

    ವಿಷಯ ತಿಳಿದು ದಂಗಾದ ಮನೆ ಮಂದಿ

    ಗೌರಿಯ ಪುಣ್ಯದ ಕೆಲಸಕ್ಕೆ ಮನೆಯವ್ರು ಭಾವುಕ

ದಾವಣಗೆರೆ: ಜಾನಪದ ಕಥೆಗಳಲ್ಲಿ ಬರುವ ‘ಪುಣ್ಯಕೋಟಿ’, ‘ಗೌರಿ ಹಸು’ಗಳ ಮನಮಿಡಿಯುವ ಕಥೆಗಳನ್ನು ಕೇಳಿದಾಗ ಈಗಲೂ ಕಣ್ಣಾಲೆಗಳು ತೇವಗೊಳ್ಳುತ್ತವೆ. ಮನಸು ಮಿಡಿಯುತ್ತದೆ, ಹೃದಯ ಉಕ್ಕಿ ಬರುತ್ತದೆ. ಭಾವನೆಗೆ ಒಳಗಾಗಿ ದುಃಖಿತಗೊಳ್ಳುತ್ತೇವೆ. ಅದು ತುಂಬಾ ಸಮಯದವರೆಗೆ ನಮ್ಮನ್ನು ಕಾಡುತ್ತಲೇ ಇರುತ್ತದೆ!

ಮಾಲೀಕನಿಗೆ ಮರುಜೀವ ಕೊಟ್ಟ ಗೌರಿ ಹಸು..!
ಇದೇ ರೀತಿಯ ಅದೆಷ್ಟೋ ಕಥೆಗಳು ನಮ್ಮ ಸುತ್ತಮುತ್ತಲಿನ ನಿಜ ಜೀವನದಲ್ಲಿ ಗತಿಸಿ ಹೋಗಿರೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಅದೇ ರೀತಿ ನಮ್ಮನ್ನು ಸದಾ ಕಾಡುವ ಕತೆ ಇದಾಗಿದ್ದು, ಕೊಂಚ ಭಿನ್ನವಾಗಿದೆ. ಒಡೆಯನನ್ನು ನಂಬಿದ ಪ್ರಾಣಿಗಳು ಎಂತಹದೇ ಸಂಕಷ್ಟದ ಪರಿಸ್ಥಿತಿಯಲ್ಲೂ ತನ್ನ ಮಾಲೀಕನನ್ನು ಬಿಟ್ಟು ಕೊಡುವುದಿಲ್ಲ ಅನ್ನೋದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅದು ಬೇರೆ ಯಾವುದೋ ರಾಜ್ಯ, ದೇಶಗಳಲ್ಲಿ ನಡೆದಿರೋದಲ್ಲ. ನಮ್ಮದೇ ರಾಜ್ಯದ, ದಾವಣಗೆರೆ ಜಿಲ್ಲೆಯಲ್ಲಿ!

ಹೌದು.. ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರ ಕೊಡಕಿನಕೆರೆ ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಏನೆಂದರೆ, ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಎಂಬ ರೈತ, ಹಸುಗಳನ್ನು ಸಾಕಿದ್ದ. ಅದರಲ್ಲಿ ಒಂದು ಹಸುವಿಗೆ ‘ಗೌರಿ’ ಎಂದು ಹೆಸರಿಟ್ಟಿದ್ದ. ಮೊನ್ನೆ ಈ ಗೌರಿ ಹಸುವನ್ನು ಮೇಯಿಸಲು ಕೊಟ್ಟಿಗೆಯಿಂದ ಜಮೀನಿಗೆ ಕರೆದುಕೊಂಡು ಬಂದಿದ್ದ. ಜಮೀನಿಗೆ ಬಂದ ಬೆನ್ನಲ್ಲೇ ಕರಿಹಾಲಪ್ಪ ಹಸು ನೋಡಿಕೊಂಡು, ತೋಟದ ಸಣ್ಣಪುಟ್ಟ ಕೆಲಸದಲ್ಲಿ ಬ್ಯುಸಿಯಾಗಿದ್ದರು.

ಏಕಾಏಕಿ ಮೇಲೆರಗಿದ ಚಿರತೆ..!
ಈ ವೇಳೆ ಕಾಡಿನಲ್ಲಿದ್ದ ಚಿರತೆಯೊಂದು ಹಸಿವಿನಿಂದ ಆಹಾರ ಹುಡುಕುತ್ತ ಕರಿಹಾಲಪ್ಪ ಅವರ ತೋಟದ ಕಡೆಗೆ ಬಂದಿತ್ತು. ಇಲ್ಲಿ ಜಮೀನಿನ ಮಾಲೀಕ ಹಾಗೂ ಗೌರಿ ಹಸುವನ್ನು ಚಿರತೆ ಕಂಡಿದೆ. ಹೇಗಾದರೂ ಮಾಡಿ ತನ್ನ ಬಲೆಗೆ ಬೀಳಿಸಿಕೊಳ್ಳಬೇಕು ಅಂದ್ಕೊಂಡ ಚಿರತೆ, ಏಕಾಏಕಿ ಕರಿಹಾಲಪ್ಪ ಅವರ ಮೇಲೆರಗಲು ಪ್ರಯತ್ನಿಸಿದೆ. ಚಿರತೆ, ದಾಳಿಗೆ ಹೊಂಚು ಹಾಕಿದ್ದು ಗೊತ್ತಾಗುತ್ತಿದ್ದಂತೆಯೇ, ಕರಿಹಾಲಪ್ಪ, ತಪ್ಪಿಸಿಕೊಳ್ಳಲು ದೊಣ್ಣೆಯಿಂದ ಓಡಿಸಲು ಪ್ರಯತ್ನಿಸಿದ್ದಾರೆ.

ನಿಟ್ಟುಸಿರು ಬಿಟ್ಟ ಮನೆಮಂದಿ..!
ಇತ್ತ ಕರಿಹಾಲಪ್ಪ ಆಪತ್ತಿಗೆ ಸಿಲುಕಿರೋದು ಗೌರಿ ಹಸುವಿನ ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ದೌಡಾಯಿಸಿದ ಗೌರಿ, ತನ್ನ ಕೊಂಬಿನಿಂದ ಚಿರತೆಗೆ ಗುಮ್ಮಿದೆ. ಗೌರಿ ಕೊಟ್ಟ ಏಟಿಗೆ ಕಂಗಾಲಾದ ಚಿರತೆ ಕಾಡಿನೊಳಗೆ ಪ್ರಾಣ ಉಳಿಸಿಕೊಳ್ಳಲು ಓಡಿದೆ. ಚಿರತೆ ಕಾಡಿಗೆ ಓಡುತ್ತಿದ್ದಂತೆಯೇ ಗೌರಿ ಹಸು, ತನ್ನ ಮಾಲೀಕನ ಬಳಿ ಬಂದು ಆತನ ನಾಲಿಗೆಯಿಂದ ನೆಕ್ಕುತ್ತ ಸಮಾಧಾನ ಮಾಡಿದೆ. ಚಿರತೆ ಬಾಯಿಗೆ ಸೇರುತ್ತಿದ್ದ ತಾನು, ಗೌರಿ ಹಸುವಿನಿಂದ ಜೀವ ಉಳಿಸಿಕೊಂಡು ಬಂದ ಭಯಾನಕ ಕಥೆಯನ್ನು ಮನೆಯವರಿಗೆ ಎಳೆಎಳೆಯಾಗಿ ಕರಿಹಾಲಪ್ಪ ಬಿಚ್ಚಿಟ್ಟಿದ್ದಾರೆ. ಆಘಾತಕಾರಿ ಘಟನೆಯ ಸುದ್ದಿ ತಿಳಿದು ಮನೆಯ ಸದಸ್ಯರು ನಿಟ್ಟುಸಿರುಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿರತೆ ಜೊತೆ ಸೆಣಸಾಡಿ ಮಾಲೀಕನ ರಕ್ಷಿಸಿದ ಗೌರಿ ಹಸು.. ಒಡೆಯನ ಬದುಕಿಸಿದ ಮನ ಮಿಡಿಯುವ ಸ್ಟೋರಿ..!

https://newsfirstlive.com/wp-content/uploads/2023/06/CHEATAH.jpg

Load More