newsfirstkannada.com

ಅಪ್ಪನ ವಿರುದ್ಧ ಸಿಡಿದೆದ್ರಾ ಸಿ.ಪಿ.ಯೋಗೇಶ್ವರ್​ ಪುತ್ರಿ..? ದಿಢೀರ್ ಡಿ.ಕೆ.ಶಿವಕುಮಾರ್ ಭೇಟಿಯಾದ ನಿಶಾ ಯೋಗೇಶ್ವರ್..!

Share :

26-07-2023

  ರಾಜಕೀಯವಾಗಿ ಡಿ.ಕೆ.ಶಿವಕುಮಾರ್, CPY ಮಧ್ಯೆ ವೈರತ್ವ

  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಪ್ಪನ ಪರ ಪ್ರಚಾರ

  ಹಲವು ಚರ್ಚೆಗಳಿಗೆ ಕಾರಣವಾದ ನಿಶಾ ಯೋಗೇಶ್ವರ್​ ಭೇಟಿ

ರಾಮನಗರ: ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ ಬೆಂಗಳೂರಲ್ಲಿ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದು, ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ಗೆದ್ದವರು, ಸೋತವರು ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಜೊತೆ ನಿಶಾ ಯೋಗೇಶ್ವರ್ ಕಾಣಿಸಿಕೊಂಡಿದ್ದಾರೆ.

2023ರ ವಿಧಾನ‌ಸಭಾ ಚುನಾವಣೆಯಲ್ಲಿ‌ ನಿಶಾ ಯೋಗೇಶ್ವರ್ ಅಪ್ಪನ ಪರ ಪ್ರಚಾರ ಮಾಡಿದ್ದರು. ಈಗ ಅಪ್ಪನ‌ ವಿರುದ್ಧವೇ ತೊಡೆತಟ್ಟಲು‌ ಮುಂದಾದ್ರಾ? ಈ ದಿಢೀರ್ ನಿರ್ಧಾರಕ್ಕೆ ಕಾರಣ ಏನು? ತಂದೆ ಮಗಳ ಸಂಬಂಧದಲ್ಲಿ ಬಿರುಕು ಮೂಡಿದ್ಯಾ? ಎಂಬೆಲ್ಲ ಚರ್ಚೆಗಳು ನಡೆಯುತ್ತಿವೆ. ಇನ್ನು ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿಪಿವೈ ನಡುವೆ ವೈರತ್ವ ಇದೆ. ಹಾಗಾಗಿ ಡಿ.ಕೆ.ಶಿವಕುಮಾರ್ ಜೊತೆ ನಿಶಾ ಏನು ಮಾತುಕತೆ ನಡೆಸಿದ್ರು ಅನ್ನೋ ವಿಚಾರ ಗುಟ್ಟಾಗಿಯೇ ಉಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನ ವಿರುದ್ಧ ಸಿಡಿದೆದ್ರಾ ಸಿ.ಪಿ.ಯೋಗೇಶ್ವರ್​ ಪುತ್ರಿ..? ದಿಢೀರ್ ಡಿ.ಕೆ.ಶಿವಕುಮಾರ್ ಭೇಟಿಯಾದ ನಿಶಾ ಯೋಗೇಶ್ವರ್..!

https://newsfirstlive.com/wp-content/uploads/2023/07/DKSHIVAKUMAR-1.jpg

Load More