newsfirstkannada.com

ಬೆಂಗಳೂರಿನ ಎಸ್‌ಪಿ ರಸ್ತೆಯಲ್ಲಿ ಆರದ ಬೆಂಕಿ.. ಬಿರುಕು ಬಿಟ್ಟ ಕಟ್ಟಡ; ಅಗ್ನಿಶಾಮಕ ಸಿಬ್ಬಂದಿ ಮೇಲೆ ಸ್ಥಳೀಯರ ಆಕ್ರೋಶ

Share :

19-11-2023

    ಎಸ್‌ಪಿ ರೋಡ್‌ನ ಪ್ಲಾಸ್ಟಿಕ್‌ ಗೋದಾಮಿಗೆ ಬೆಂಕಿ ಬಿದ್ದ ದುರಂತ

    5 ಅಗ್ನಿಶಾಮಕ ವಾಹನದಲ್ಲಿ ತಂದಿದ್ದು ನೀರು ಖಾಲಿ ಆಗಿದ್ಯಂತೆ!

    3ನೇ ಮಹಡಿಯಲ್ಲಿ ಹೊತ್ತಿ ಉರಿದ ಬೆಂಕಿ 5ನೇ ಮಹಡಿಗೆ ವ್ಯಾಪಿಸಿದೆ

ಬೆಂಗಳೂರು: ಸಿಲಿಕಾನ್‌ ಸಿಟಿ ಹೃದಯ ಭಾಗದಲ್ಲಿರುವ ಎಸ್‌ಪಿ ರೋಡ್‌ನ ಪ್ಲಾಸ್ಟಿಕ್‌ ಗೋದಾಮಿಗೆ ಬೆಂಕಿ ಬಿದ್ದಿದೆ. 3ನೇ ಮಹಡಿಯಲ್ಲಿ ಕಾಣಿಸಿಕೊಂಡ ಅಗ್ನಿ ಅನಾಹುತ ಇದೀಗ 4-5ನೇ ಮಹಡಿಗೂ ವ್ಯಾಪಿಸಿದೆ. ಹೊತ್ತಿ ಉರಿಯುತ್ತಿರುವ ಬೆಂಕಿಯ ತೀವ್ರತೆಗೆ ಇಡೀ ಬಿಲ್ಡಿಂಗ್ ಬಿರುಕು ಬಿಟ್ಟಿದೆ.

ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತು ತುಂಬಿದ್ದ ಪ್ಲಾಸ್ಟಿಕ್ ಗೋದಾಮಿನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದೆ. 5 ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ಆರಿಸಲು ಪರದಾಟ ನಡೆಸುತ್ತಿದ್ದಾರೆ.

ಅಗ್ನಿ ಶಾಮಕ ದಳದ ನಿರ್ಲಕ್ಷ್ಯಕ್ಕೆ ಇಷ್ಟು ದೊಡ್ಡ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ನೀಡಿ ಒಂದು ಗಂಟೆಯಾದ್ರೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರಲೇ ಇಲ್ಲ. ತಡವಾಗಿ ಬಂದೂ ಇದೀಗ ನೀರು ಖಾಲಿಯಾಗಿದೆ ಎನ್ನುತ್ತಿದ್ದಾರೆ. ಇದರಿಂದಲೇ ನಾಲ್ಕನೇ ಮಹಡಿಗೂ ಬೆಂಕಿ ತಗುಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದನೇ ಮಹಡಿಗೆ ಆವರಿಸಿದ ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಪರದಾಟ ನಡೆಸುತ್ತಿದೆ. ಸ್ಥಳಕ್ಕೆ ಬಂದಿರುವ ಅಗ್ನಿ ಶಾಮಕ ದಳ ವಾಹನದಲ್ಲಿ ನೀರು ಖಾಲಿಯಾಗಿದ್ದು, ಬಿಲ್ಡಿಂಗ್ ಬಳಿ ಜನರು ಬರದಂತೆ ಪೊಲೀಸರು ನಿಗಾವಹಿಸಿದ್ದಾರೆ. ಬಿಲ್ಡಿಂಗ್ ಸುತ್ತಾಮುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಎಸ್‌ಪಿ ರಸ್ತೆಯಲ್ಲಿ ಆರದ ಬೆಂಕಿ.. ಬಿರುಕು ಬಿಟ್ಟ ಕಟ್ಟಡ; ಅಗ್ನಿಶಾಮಕ ಸಿಬ್ಬಂದಿ ಮೇಲೆ ಸ್ಥಳೀಯರ ಆಕ್ರೋಶ

https://newsfirstlive.com/wp-content/uploads/2023/11/Bangalore-Fire-2.jpg

Load More