ಬೆಳಕಿನ ಹಬ್ಬದಲ್ಲಿ ಮೂಡದಿರಲಿ ಅಂಧಕಾರ!
ಪಟಾಕಿ ಸಿಡಿಸುವ ಮಕ್ಕಳ ಬಗ್ಗೆ ಇರಲಿ ಎಚ್ಚರ!
ರಾಜಧಾನಿ ಬೆಂಗಳೂರಲ್ಲಿ ಪಟಾಕಿ ಅವಘಡ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ.. ಈ ಹಬ್ಬದಲ್ಲಿ ಪ್ರತಿವರ್ಷವೂ ಅಲ್ಲಲ್ಲಿ ಅನಾಹುತಗಳು ವರದಿಯಾಗ್ತಾನೆ ಇರುತ್ವೆ.. ಅದೇ ರೀತಿ ಈ ಬಾರಿಯೂ ಹಲವೆಡೆ ಅವಾಂತರಗಳಾಗಿವೆ.. ಪಟಾಕಿ ಅವಘಡಗಳಿಂದಾಗಿ ಅನೇಕರು ಗಾಯಗೊಂಡಿದ್ದಾರೆ..
ದೀಪಾವಳಿ.. ದೀಪಗಳ ಹಬ್ಬ.. ಬೆಳಕಿನ ಹಬ್ಬ.. ಕತ್ತಲನ್ನ ಕಳೆದು ಬೆಳಕಿನ ರಂಗು ಮೂಡಿಸುವ ಹಬ್ಬ.. ಅಜ್ಞಾನವನ್ನ ಕಳೆದು ಜ್ಞಾನದ ಕಿರಣ ಮೂಡಿಸುವ ಸುದಿನ.. ಆದ್ರೆ, ಇಂತಹ ಬೆಳಕಿನ ಹಬ್ಬ ಕೆಲವರ ಬಾಳಲ್ಲಿ ಕತ್ತಲೆ ಆವರಿಸುವಂತೆ ಮಾಡುತ್ತೆ.. ಅದೇ ರೀತಿ ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಹೋಗಿ ಹಲವರು ಗಾಯಗೊಂಡಿದ್ದಾರೆ..
ಬೆಳಕಿನ ಹಬ್ಬದಲ್ಲಿ ಮೂಡದಿರಲಿ ಅಂಧಕಾರ!
ಪ್ರತಿ ವರ್ಷದಂತೆ ಈ ಬಾರಿ ಪಟಾಕಿಯಿಂದ ಅವಘಡಗಳು ಉಂಟಾಗಿದೆ.. ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಬರೊಬ್ಬರಿ 20 ಕೇಸ್ ದಾಖಲಾಗಿವೆ.. ಇದ್ರಲ್ಲಿ ಪುಟ್ಟ ಪುಟ್ಟ ಬಾಲಕರೇ ಹೆಚ್ಚು ಅನ್ನೋದು ಆಘಾತಕಾರಿ ವಿಷಯ.. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ರೆ, ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ..
ನಾರಾಯಣ ನೇತ್ರಾಲಯದಲ್ಲಿ 16 ಪ್ರಕರಣ!
ಇನ್ನು, ನಗರದ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಬರೋಬ್ಬರಿ ಕಳೆದ 24 ಗಂಟೆಯಲ್ಲಿ 16 ಕೇಸ್ಗಳು ದಾಖಲಾಗಿವೆ.. ಆತಂಕ ಅಂದ್ರೆ, ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆಯೇ ಹೆಚ್ಚು.. ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ..
ಮಿಂಟೋ ಆಸ್ಪತ್ರೆಯಲ್ಲಿ 4 ಕೇಸ್ ದಾಖಲು!
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 4 ಪ್ರಕರಣಗಳು ದಾಖಲಾಗಿವೆ.. ಈ ಪೈಕಿ ಮೂರುವರೇ ವರ್ಷದ ಮಗುವಿಗೆ ಮೈನರ್ ಇಂಜುರಿಯಾಗಿದೆ.. ಹಾಗೇ, ನಡೆದುಕೊಂಡು ಹೋಗುವಾಗ ಪಟಾಕಿ ಸಿಡಿದು 18ವರ್ಷದ ಐಬಾಲ್ ಎಂಬಾತನಿಗೆ ಗಂಭೀರ ಗಾಯವಾಗಿದೆ.. 37ವರ್ಷದ ವ್ಯಕ್ತಿಗೆ ಬೇರೆಯವರು ಸಿಡಿಸಿದ ಪಟಾಕಿಯಿಂದ ಮೈನರ್ ಇಂಜುರಿಯಾಗಿದೆ.. ಇನ್ನು, 10ವರ್ಷದ ಮಗುವಿಗೆ ಎರಡೂ ಕಣ್ಣುಗಳಿಗೂ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ..
ಇನ್ನು, ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾವು ದೆಹಲಿ ಸ್ಥಿತಿ ತಲುಪಬಾರದು.. ಆದಷ್ಟು ಹಸಿರು ಪಟಾಕಿಯನ್ನ ಹಚ್ಚಬೇಕು.. ಪಟಾಕಿ ಹಚ್ಚುವ ಸಂದರ್ಭದಲ್ಲಿ ಎಚ್ಚರವಹಿಸಬೇಕು ಅಂತಾ ತಿಳಿಸಿದ್ರು..
ಅದೇನೆ ಇರ್ಲಿ, ನಾವು ಹಚ್ಚೋ ಪಟಾಕಿ ಬೆಳಕು ಮೂಡಿಸಬೇಕು ಹೊರತು.. ಬೇರೆಯವರ ಬಾಳಲ್ಲಿ ಕತ್ತಲೆ ಆವರಿಸುವಂತೆ ಮಾಡ್ಬಾರ್ದು.. ಅದ್ಯಾರೋ ಹಚ್ಚಿದ ಪಟಾಕಿ ದಾರಿಯಲ್ಲಿ ನಡೆದು ಹೋಗುವ ಮತ್ತಿನ್ಯಾರಿಗೋ ಸಂಚಕಾರ ತರಬಹುದು. ಹೀಗಾಗಿ ತಮ್ಮ ಹಾಗೂ ಬೇರೆಯವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಬ್ಬ ಆಚರಿಸೋದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ