newsfirstkannada.com

ಒಂಭತ್ತು..ಒಂಭತ್ತು.. ಒಂಭತ್ತು ತೋಳ ಹಳ್ಳಕ್ಕೆ ಬಿತ್ತು.. 9 ಸಂಖ್ಯೆ ಒತ್ತಿದ ವ್ಯಕ್ತಿಗೆ ವಂಚಕರಿಂದ ಮಹಾಮೋಸ

Share :

03-07-2023

    ಕ್ರೆಡಿಟ್​​ ಕಾರ್ಡ್​ನಿಂದಾಗಿ ವಂಚನೆಗೊಳಗಾದ ವ್ಯಕ್ತಿ

    ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಗೆ ಮಹಾಮೋಸ

    9 ಒತ್ತಿ ಎಂದಿದ್ದೇ ತಡ..79999 ರೂಪಾಯಿ ಕಳೆದುಕೊಂಡ

ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಮೋಸ ಹೋಗುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆಯೇ ವ್ಯಕ್ತಿಯೊರ್ವ ಕ್ರೆಡಿಟ್ ಕಾರ್ಡ್​ ವಂಚನೆಯಿಂದ ಬರೋಬ್ಬರಿ 79999 ರೂಪಾಯಿ ಕಳೆದುಕೊಂಡ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ. ವಂಚಕರು ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಗೆ ಮೋಸ ಮಾಡಿದ್ದಾರೆ.

ಕ್ರೆಡಿಟ್ ಕಾರ್ಡ್ ವಂಚನೆ

ಪರಮೇಶ್ವರಯ್ಯ ವಂಚಕರಿಂದ ಮೋಸ ಹೋದ ವ್ಯಕ್ತಿ. ವಂಚಕರು ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ ಆತನಿಗೆ ವಂಚಿಸಿದ್ದಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಅವ್ಯವಹಾರ ಆಗಿದೆ ಎಂದು ಹೇಳಿ ಎಚ್ಚರಿಸುವ ಮೂಲಕ ವ್ಯಕ್ತಿಯನ್ನು ಮೋಸದ ಕೂಪಕ್ಕೆ ತಳ್ಳಿದ್ದಾರೆ.

ಒಂಭತ್ತು..ಒಂಭತ್ತು..ಒಂಭತ್ತು ತೋಳ ಹಳ್ಳಕ್ಕೆ ಬಿತ್ತು

ವಂಚಕರ ಕರೆಗೆ ಕಿವಿಗೊಟ್ಟ ಪರಮೇಶ್ವರಯ್ಯ. ಅವರು ಹೇಳಿದಂತೆ  ಕ್ರೆಡಿಟ್​ಕಾರ್ಡ್​ ನಿಷ್ಕ್ರಿಯಗೊಳಿಸಲು 9 ಅಂಕೆಯನ್ನು ಒತ್ತಿ ಎಂದಿದ್ದರು. ವಂಚಕರ ಮಾತನ್ನು ನಂಬಿದ್ದ ಪರಮೇಶ್ವರಯ್ಯ ಕ್ರೆಡಿಟ್ ಕಾರ್ಡನ್ನು ನಿಷ್ಕ್ರಿಯಗೊಳಿಸಲು ಒಂಭತ್ತನ್ನು ಒತ್ತಿದ್ದಾರೆ. ಆ ಕೂಡಲೇ 9999 ರೂಪಾಯಿ ಹಣ ಕಡಿತವಾಗಿದೆ.

79999 ರೂಪಾಯಿ ವಂಚನೆ

ನಂತರ ವಂಚಕರ ಕೈ ಚಳಕದಿಂದ ಬರೋಬ್ಬರಿ 79 ಸಾವಿರದ 999 ರೂಪಾಯಿ ಹಣ ಕಡಿತವಾಗಿದೆ. ಬಳಿಕ ಪರಮೇಶ್ವರಯ್ಯ ವಂಚಕರ ವಂಚನೆಯನ್ನು ತಿಳಿದು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿ ಎಂದು ದೂರು ನೀಡಿದ್ದಾರೆ. ಆ ಬಳಿಕ ಕ್ರೆಡಿಟ್​ ಕಾರ್ಡ್​​ ಬ್ಲಾಕ್​ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಭತ್ತು..ಒಂಭತ್ತು.. ಒಂಭತ್ತು ತೋಳ ಹಳ್ಳಕ್ಕೆ ಬಿತ್ತು.. 9 ಸಂಖ್ಯೆ ಒತ್ತಿದ ವ್ಯಕ್ತಿಗೆ ವಂಚಕರಿಂದ ಮಹಾಮೋಸ

https://newsfirstlive.com/wp-content/uploads/2023/07/Credit-card.jpg

Load More