newsfirstkannada.com

ಕ್ರಿಕೆಟ್ ಪ್ರಿಯರ ಹೃದಯಗೆದ್ದ ನಟರಾಜನ್.. ಕೊನೆಗೂ ಬಹುದಿನಗಳ ಕನಸು ನನಸು ಮಾಡಿಕೊಂಡ ಟೀಂ ಇಂಡಿಯಾ ಆಟಗಾರ..!

Share :

25-06-2023

    ಎಲ್ಲ ಹಮ್ಮು-ಬಿಮ್ಮು ಬಿಟ್ಟು ಸ್ವಂತ ಊರಿನಲ್ಲಿ ಗ್ರೌಂಡ್​ ಪ್ರಾರಂಭ

    ಕ್ರಿಕೆಟ್​ ಗ್ರೌಂಡ್​ ಉದ್ಘಾಟನೆ ಮಾಡಿದ ದಿನೇಶ್ ಕಾರ್ತಿಕ್​

    ತಮಿಳುನಾಡಿನ ಯುವ ಪ್ರತಿಭೆಗೆ ಜನರಿಂದ ಭಾರೀ ಮೆಚ್ಚುಗೆ

ಕ್ರಿಕೆಟ್​ ಅಂದರೆ ಈಗ ಕ್ರೇಜ್​, ಮನರಂಜನೆ, ಜೂಜು, ಹಣ, ಜೀವನ, ಬ್ಯುಜಿನೆಸ್​​ ಆಗಿ ಬದಲಾವಣೆಯಾಗಿದೆ. ನಾನು ಸ್ಟಾರ್​ ಕ್ರಿಕೆಟ್​ ಪ್ಲೇಯರ್​ ಆದರೆ ಒಳ್ಳೆಯ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುವುದು ಯಂಗಸ್ಟರ್ಸ್​ ಯೋಚನೆಯಾಗಿದೆ. ಯಾರಿಗೂ ಗೊತ್ತಿರದ ಆಟಗಾರರು ಬಂದು ಕ್ರಿಕೆಟ್​ನಲ್ಲಿ ದಾಖಲೆಗಳನ್ನೇ ಮಾಡಿದ್ದಾರೆ. ಇಲ್ಲಿಯವರೆಗೂ ಯಾರೂ ಕೂಡ ಯುವ ಆಟಗಾರರಿಗಾಗಿ ಕ್ರಿಕೆಟ್​ ಮೈದಾನ ನಿರ್ಮಿಸಿಲ್ಲ. ಆದ್ರೆ ಇದೀಗ ಆಟಗಾರನೊಬ್ಬ ಭವಿಷ್ಯದ ಪ್ಲೇಯರ್ಸ್​ಗಾಗಿ ಕ್ರಿಕೆಟ್​ ಮೈದಾನ ನಿರ್ಮಿಸಿ ಫುಲ್​ ಫೇಮಸ್​ ಆಗಿದ್ದಾರೆ.

ಟಿ.ನಟರಾಜನ್ ಅಂದರೆ ತಂಗರಸೂರು ನಟರಾಜನ್ ಎಂಬುವುದು ಪೂರ್ಣ ಹೆಸರು. ಟೀಮ್​ ಇಂಡಿಯಾದಲ್ಲಿ ಕೆಲವೇ ಕೆಲವು ಪಂದ್ಯಗಳನ್ನು ಆಡಿ ತಮ್ಮ ಊರಿನಲ್ಲಿ ಸಖತ್ ಖ್ಯಾತಿ ಪಡೆದವರು. ಭವಿಷ್ಯದ ಕ್ರಿಕೆಟರ್ಟ್​​ಗೆ ಉಪಯೋಗವಾಗಲಿ ಎಂದು ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ತಮ್ಮ ಅಕಾಡೆಮಿಗಾಗಿ ಕ್ರಿಕೆಟ್​ ಮೈದಾನ ನಿರ್ಮಾಣ ಮಾಡಿದ್ದಾರೆ. ಕ್ರಿಕೆಟ್​ ಮೈದಾನವು ಗ್ರ್ಯಾಂಡ್ ಆಗಿ ಇದ್ದು 4 ಪಿಚ್​ಗಳನ್ನು ಒಳಗೊಂಡಿದ್ದು ಜೊತೆಗೆ ಜಿಮ್​, ಕ್ಯಾಂಟೀನ್​ ಹಾಗೂ ಕುಳಿತುಕೊಂಡು ಕ್ರಿಕೆಟ್​ ನೋಡಲು 100 ಸೀಟ್​ಗಳಿರುವ ಗ್ಯಾಲರಿಯನ್ನು ಟಿ.ನಟರಾಜನ್ ನಿರ್ಮಾಣ ಮಾಡಿದ್ದಾರೆ.

ಜೂನ್​ 23 ರಂದು ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ನಟರಾಜನ್​ ಕ್ರಿಕೆಟ್​ ಗ್ರೌಂಡ್​ ಅನ್ನು ಟೀಮ್​ ಇಂಡಿಯಾ ಆಟಗಾರ ಹಾಗೂ ಆರ್​ಸಿಬಿ ಪ್ಲೇಯರ್​ ದಿನೇಶ್​ ಕಾರ್ತಿಕ್​ ಉದ್ಘಾಟನೆ ಮಾಡಿದರು. ಗ್ರೌಂಡ್​ ಉದ್ಘಾಟನೆಗಾಗಿ ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್ ಅಧ್ಯಕ್ಷ P. ಅಶೋಕ್​ ಸಿಗಮಣಿ, ಕಾಮಿಡಿ ನಟ ಯೋಗಿ ಬಾಬು, ಸೇಲಂ ಸೂಪರಿಂಟೆಂಡೆಂಟ್ R.ಶಿವಕುಮಾರ್​, ಕ್ರಿಕೆಟರ್ಸ್​ಗಳಾದ ವರುಣ್​ ಚಕ್ರವರ್ತಿ, ವಾಷಿಂಗ್ಟನ್​ ಸುಂದರ್​ ಆಗಮಿಸಿದ್ದರು. ನಟರಾಜನ್​ನ ಈ ಸಾಧನೆಗಾಗಿ ಬೆನ್ನು ತಟ್ಟಿ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ. ದಿನೇಶ್​ ಕಾರ್ತಿಕ್​ ಅವರು ನಟರಾಜನ್​ ಅವರನ್ನು ಹಾಡಿ ಹೊಗಳಿದ್ದಾರೆ.

ನಟರಾಜನ್ ಬಗ್ಗೆ ಕಾರ್ತಿಕ್ ಏನು ಹೇಳಿದರು?

ನಟರಾಜನ್​ ತಮಿಳುನಾಡು ಪರವಾಗಿ ಕ್ರಿಕೆಟ್​ ಆಡಿ IPLನಲ್ಲಿ ಆಡಿ ಬಳಿಕ ಒಂದು ಪ್ರಾಬ್ಲಂ​ ಆದ ನಂತರ ಮತ್ತೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದು ತನ್ನ ಸಾಮರ್ಥ್ಯ ಏನೆಂಬುದು ತೋರಿಸಿದ್ದಾರೆ. ಬೇರೆ ಊರುಗಳಿಂದ ಬಂದು ಕ್ರಿಕೆಟ್​ ಆಡಿ ಫೇಮಸ್​ ಆಗಿದ್ದಾರೆ. ಯಾರಿಗೂ ಇಂತಹ ಯೋಚನೆ ಬಂದಿಲ್ಲ. ಆದ್ರೆ ನಟರಾಜನ್​ ತನ್ನ ಊರಿನಿಂದ ಭವಿಷ್ಯದ ಆಟಗಾರರು ಭಾರತ ತಂಡಕ್ಕೆ ಬರಲೆಂದು ಗ್ರೌಂಡ್​ ನಿರ್ಮಿಸಿದ್ದಾರೆ. ನಾನು ಕ್ರಿಕೆಟ್​ ಆಡಿದ್ದೇನೆ. ಆದ್ರೆ ಇಂತಹ ಆಲೋಚನೆ ನನಗೆ ಬಂದಿಲ್ಲವೆಂದು ದಿನೇಶ್​ ಕಾರ್ತಿಕ್​ ಹೇಳಿದರು.

ಕ್ರಿಕೆಟ್​ ಮೈದಾನದ ಪ್ರಮುಖ ಅಂಶಗಳು ಏನೆಂದರೆ..

  • ತನ್ನ ಸ್ವಂತ ಊರಿನಲ್ಲೇ ಕ್ರಿಕೆಟ್​ ಮೈದಾನ ಪ್ರಾರಂಭಿಸಿದ ಧೀರ
  • ಒಟ್ಟು 4 ಎಕೆರೆ ವಿಸ್ತಾರದಲ್ಲಿ ‘ನಟರಾಜನ್​ ಕ್ರಿಕೆಟ್​ ಗ್ರೌಂಡ್’
  • ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದಲ್ಲಿ ಗ್ರೌಂಡ್​ ಓಪನ್
  • ಮೈದಾನದಲ್ಲಿ ಒಟ್ಟು 4 ಪಿಚ್​ಗಳನ್ನು ನಿರ್ಮಾಣ ಮಾಡಲಾಗಿದೆ
  • ಕ್ರಿಕೆಟ್​ ನೋಡುವ ಪ್ರೇಕ್ಷಕರಿಗಾಗಿ ಗ್ಯಾಲರಿಯಲ್ಲಿ 100 ಸೀಟ್​
  • ಪ್ಲೇಯರ್ಸ್​ ಫಿಟ್ನೆಸ್​ಗಾಗಿ ಮೈದಾನದಲ್ಲಿ ಜಿಮ್ ಕೂಡ​ ಓಪನ್​
  • ಮೈದಾನದಲ್ಲಿ ಊಟದ ವ್ಯವಸ್ಥೆಗಾಗಿ ಕ್ಯಾಂಟೀನ್​ ಪ್ರಾರಂಭ
  • ಕ್ರಿಕೆಟ್​ ಗ್ರೌಂಡ್​ಗೆ ತನ್ನ ಹೆಸರನ್ನೇ ಇಟ್ಟಿರುವ ಟಿ.ನಟರಾಜನ್​

ಎಡಗೈ ಬೌಲರ್​ ಆಗಿರುವ ಟಿ.ನಟರಾಜನ್ ಲೆಫ್ಟ್​ ಹ್ಯಾಂಡ್​ ಬ್ಯಾಟಿಂಗ್ ಮಾಡುತ್ತಾರೆ. 2023ರ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿ ಗಮನ ಸೆಳೆದಿದ್ದರು. 2020ರ ಐಪಿಎಲ್​ನಲ್ಲಿ ಯಾರ್ಕರ್​ ದಾಳಿಯಿಂದ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದ ನಟರಾಜನ್​ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಆಡಿ ಅದ್ಭುತ ಪ್ರದರ್ಶನ ತೋರಿದ್ದರು. ಬಳಿಕ ಅವರಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ನಂತರ ದಿನಗಳಲ್ಲಿ ಭಾರತದ ಕ್ರಿಕೆಟ್​ ಆಯ್ಕೆ ಮಂಡಳಿಯು ನಟರಾಜನ್​ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ.

ವಿಶೇಷ ವರದಿ: ಭೀಮಪ್ಪ. ನ್ಯೂಸ್​ಫಸ್ಟ್​ ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್ ಪ್ರಿಯರ ಹೃದಯಗೆದ್ದ ನಟರಾಜನ್.. ಕೊನೆಗೂ ಬಹುದಿನಗಳ ಕನಸು ನನಸು ಮಾಡಿಕೊಂಡ ಟೀಂ ಇಂಡಿಯಾ ಆಟಗಾರ..!

https://newsfirstlive.com/wp-content/uploads/2023/06/T_NATARAJAN_CRICKET_GROUND_4.jpg

Load More