newsfirstkannada.com

Watch: ಪಾಕ್-ಆಫ್ಘಾನ್ ಫ್ಯಾನ್ಸ್​ ಮಧ್ಯೆ ಡಿಶುಂ ಡಿಶುಂ.. 100 ಮೀ. ಲಾಂಗ್ 4 ಸಿಕ್ಸ್ ಸಿಡಿಸಿದ ಪೊಲಾರ್ಡ್..!

Share :

29-08-2023

  ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಕಾಣಿಸಿಕೊಂಡ ಪಂತ್

  ನರೈನ್​ಗೆ ‘ರೆಡ್​​​ ಕಾರ್ಡ್’ ಶಿಕ್ಷೆ, ಪಾಕ್ ಆಟಗಾರರಿಗೆ ಜಾಕ್​ಪಾಟ್​

  ಕ್ರಿಕೆಟ್ ಲೋಕದ ಸೂಪರ್ ಸಿಕ್ಸ್ ಇಲ್ಲಿವೆ

ಟೀಮ್ ಇಂಡಿಯಾ ಆಲೂರಿನ ಕೆಎಸ್​​​ಸಿಯ ಅಂಗಳದಲ್ಲಿ ಏಷ್ಯಾಕಪ್​ ಟೂರ್ನಿಗೆ ಭರದ ಸಿದ್ಧತೆ ನಡೆಸಿದೆ. 4 ದಿನ ಕ್ಯಾಂಪ್​ ಮುಕ್ತಾಯಗೊಂಡಿದ್ದು, ರಿಷಬ್ ಪಂತ್​​ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪಂತ್ ಗಾಯದಿಂದ ಚೇತರಿಸಿಕೊಳ್ತಿದ್ದು ಕ್ಯಾಂಪ್​ನಲ್ಲಿ ಆಟಗಾರರ ಜೊತೆ ಭಾಗಿಯಾಗಿ ಸಮಯ ಕಳೆದಿದ್ದಾರೆ. ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಹಾಗೂ ಪ್ರಸಿದ್ಧ್​ ಕೃಷ್ಣ ಕ್ಯಾಂಪ್ ಸೇರಿಕೊಂಡು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ನಾಳೆ ಕ್ಯಾಂಪ್​​ನ ಅಂತಿಮ ದಿನವಾಗಿದ್ದು ಆಗಸ್ಟ್​​ 30 ರಂದು ಭಾರತ ತಂಡ ಏಷ್ಯಾಕಪ್ ಆಡಲು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ.

ಆಪ್ಘನ್​​​-ಪಾಕ್​ ಫ್ಯಾನ್ಸ್ ನಡುವೆ ಡಿಶುಂ ಡಿಶುಂ..!

ಆಟದಲ್ಲಿ ಅಭಿಮಾನಿಗಳ ಗಲಾಟೆ ಆಗಾಗ ನಡೆಯುತ್ತಲೇ ಇರುತ್ತೆ. ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಪಾಕಿಸ್ತಾನ-ಆಪ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಫ್ಯಾನ್ಸ್ ನಡುವೆ ಮಾರಾಮಾರಿ ಏರ್ಪಟ್ಟಿದೆ. ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಪಾಕ್​ ತಂಡ 59 ರನ್​ಗಳ ಗೆಲುವು ದಾಖಲಿಸಿತ್ತು. ಇದರಿಂದ ಹತಾಶರಾದ ಅಪ್ಘಾನಿಸ್ತಾನ ತಂಡದ ಅಭಿಮಾನಿಗಳು, ಪಾಕ್​​​ ಫ್ಯಾನ್ಸ್ ಜೊತೆ ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸಿದ್ದಾರೆ.

ರೆಡ್​​​ ಕಾರ್ಡ್​ ಪಡೆದ ಸುನೀಲ್ ನರೈನ್​​​

ಇದೇ ಮೊದಲ ಬಾರಿ ಕ್ರಿಕೆಟ್​ನಲ್ಲಿ ಫುಟ್ಬಾಲ್​​ ಆಟದಂತೆ ರೆಡ್​ ಕಾರ್ಡ್​ ನಿಯಮವನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಜಾರಿಗೆ ತರಲಾಗಿತ್ತು. ಟ್ರಿನ್ಬಾಗೊ ನೈಟ್ ರೈಡರ್ಸ್​ ತಂಡದ ಸುನೀಲ್ ನರೈನ್ ಈ ಶಿಕ್ಷೆಗೆ ಮೊದಲ ಗುರಿಯಾಗಿದ್ದಾರೆ. ನೆವಿಸ್​​ ಪ್ಯಾಟ್ರಿಯೋಟ್ಸ್ ತಂಡದ ವಿರುದ್ಧ ನಿಧಾನಗತಿ ಬೌಲಿಂಗ್ ಕಾರಣಕ್ಕಾಗಿ ಅಂಪೈರ್​​​ ಸುನೀಲ್ ನರೈನ್​​​​ಗೆ ರೆಡ್​ ಕಾರ್ಡ್​ ನೀಡಿದ್ದಾರೆ. ಬಳಿಕ ನರೈನ್​​ ಅಂಗಳ ತೊರೆದಿದ್ದಾರೆ. ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದ ಪರ 10 ಆಟಗಾರರಷ್ಟೇ ಫೀಲ್ಡಿಂಗ್ ಮಾಡಿದ್ರು. ಈ ಪೈಕಿ ಇಬ್ಬರಿಗೆ ಮಾತ್ರ 30 ಯಾರ್ಡ್​ ಸರ್ಕಲ್ ಆಚೆ ಫೀಲ್ಡಿಂಗ್ ಮಾಡಲು ಅವಕಾಶ ನೀಡಲಾಯ್ತು.

ಸೌತ್​ ಆಫ್ರಿಕಾ ಸರಣಿಯಿಂದ ಮ್ಯಾಕ್ಸ್​ವೆಲ್​ ಔಟ್​​
ಏಕದಿನ ವಿಶ್ವಕಪ್​​ ಸಮೀಪಿಸಿದ ಬೆನ್ನಲ್ಲೇ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್​ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್​ ಮುಂಬರೋ ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಪ್ರಾಕ್ಟಿಸ್ ಸೆಷನ್ ವೇಳೆ ಮ್ಯಾಕ್ಸಿ ಆ್ಯಂಕಲ್​​ ಇಂಜುರಿಗೆ ತುತ್ತಾಗಿದ್ದಾರೆ. ಗಾಯ ಗಂಭೀರವಾಗಿಲ್ಲ. ಆದರೂ ವಿಶ್ವಕಪ್​​​​​ ದೃಷ್ಟಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾ ಮ್ಯಾಕ್ಸ್​ವೆಲ್​​ಗೆ ರೆಸ್ಟ್​​​ ತೆಗೆದುಕೊಳ್ಳುವಂತೆ ಸೂಚಿಸಿದೆ. ಇವರ ಬದಲಿ ಮ್ಯಾಥ್ಯೂ ವೇಡ್​ಗೆ ಅವಕಾಶ ನೀಡಲಾಗಿದೆ. ಆಸಿಸ್​​​ ತಂಡ ಆಫ್ರಿಕಾ ವಿರುದ್ಧ 3 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನ ಆಡಲಿದೆ.

ಪಾಕ್ ಆಟಗಾರರಿಗೆ 10 ಲಕ್ಷ ರೂಪಾಯಿ ಬಹುಮಾನ

ಪಾಕಿಸ್ತಾನ ಪುರುಷರ ಕ್ರಿಕೆಟ್​ ತಂಡಕ್ಕೆ ಬಂಪರ್​ ಜಾಕ್​​ಪಾಟ್ ಹೊಡೆದಿದೆ. ಐಸಿಸಿ ಏಕದಿನ ಱಂಕಿಂಗ್​​ನಲ್ಲಿ ನಂಬರ್​​​-1 ಸ್ಥಾನಕ್ಕೇರಿದ ಪಾಕ್​ ತಂಡಕ್ಕೆ ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಎಲ್ಲಾ ಆಟಗಾರರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಪಾಕಿಸ್ತಾನ ತಂಡ ಅಪ್ಘಾನಿಸ್ತಾನ ಎದುರಿನ 3 ಪಂದ್ಯಗಳ ಏಕದಿನ ಸರಣಿಯನ್ನ 3-0 ಅಂತರದಿಂದ ಕ್ಲೀನ್​ಸ್ವಿಪ್ ಸಾಧಿಸಿತ್ತು. ಆ ಮೂಲಕ ಅಗ್ರಪಟ್ಟಕ್ಕೇರಿತ್ತು. ಪಾಕ್​​​ ತಂಡ 118 ರೇಟಿಂಗ್ಸ್​ನೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ ಅಷ್ಟೇ ರೇಟಿಂಗ್ಸ್​ನೊಂದಿಗೆ ಎರಡು ಹಾಗೂ ಟೀಮ್ ಇಂಡಿಯಾ 113 ರೇಟಿಂಗ್ಸ್ ಸಂಪಾದಿಸಿ 3ನೇ ಸ್ಥಾನದಲ್ಲಿದೆ.

100 ಮೀಟರ್​ ಲಾಂಗ್ 4 ಸಿಕ್ಸರ್ ಸಿಡಿಸಿದ ಪೊಲಾರ್ಡ್​

ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಿರನ್ ಪೊಲಾರ್ಡ್​ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ನೆವಿಸ್​​ ಪ್ಯಾಟ್ರಿಯೋಟ್ಸ್​​ ತಂಡದೆದರು ಪೊಲಾರ್ಡ್​ ಒಂದೇ ಓವರ್​ನಲ್ಲಿ ಸತತ ನಾಲ್ಕು ಸಿಕ್ಸರ್​ ಸಿಡಿಸಿದ್ದಾರೆ. ದೈತ್ಯ ಬ್ಯಾಟ್ಸ್​ಮನ್ ಬಾರಿಸಿದ ಎಲ್ಲಾ ಸಿಕ್ಸರ್​ಗಳು 100 ಮೀಟರ್​ಗಿಂತ ಅಧಿಕವಾಗಿದೆ. ಪಂದ್ಯದ 15ನೇ ಓವರ್​​ನಲ್ಲಿ ಈ ಸಾಧನೆ ಮೂಡಿ ಬಂತು. ಈ ಪಂದ್ಯದಲ್ಲಿ ಡೇಂಜರಸ್ ಬ್ಯಾಟ್ಸ್​ಮನ್ ಪೊಲಾರ್ಡ್​ ಜಸ್ಟ್​ 16 ಎಸೆತಗಳಲ್ಲಿ ಸ್ಫೋಟಕ 37 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ಪಾಕ್-ಆಫ್ಘಾನ್ ಫ್ಯಾನ್ಸ್​ ಮಧ್ಯೆ ಡಿಶುಂ ಡಿಶುಂ.. 100 ಮೀ. ಲಾಂಗ್ 4 ಸಿಕ್ಸ್ ಸಿಡಿಸಿದ ಪೊಲಾರ್ಡ್..!

https://newsfirstlive.com/wp-content/uploads/2023/08/SIX-1.jpg

Load More