newsfirstkannada.com

ಪಾಕ್​​ನಿಂದ ಅಚ್ಚರಿಯ ನಡೆ.. ಜಯ್ ಶಾಗೆ ಆಹ್ವಾನ ಕೊಟ್ಟ ಪಿಸಿಬಿ.. ‘ಕ್ರಿಕೆಟ್ ಲೋಕ’ದ ಸೂಪರ್ ಸಿಕ್ಸ್ ಇಲ್ಲಿದೆ

Share :

Published August 20, 2023 at 2:39pm

    ಜಿಮ್​​ನಲ್ಲಿ ವೇಗಿ ಭುವಿ ಭರ್ಜರಿ ವರ್ಕೌಟ್

    ಗುಲ್ಶನ್ ಜತೆ ಸೇರಿ ‘ಬ್ಯಾಡ್​​ಮ್ಯಾನ್’ ಆದ ಶಿಖರ್

    ಭಾರತ-ಪಾಕ್​ ಏಷ್ಯಾಕಪ್​​ ಪ್ರೊಮೋ ರಿಲೀಸ್​​

ಭಾರತ-ಪಾಕ್​ ಏಷ್ಯಾಕಪ್​​ ಪ್ರೊಮೋ ರಿಲೀಸ್​​

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಕೌಂಟ್​ಡೌನ್​ ಶುರುವಾಗಿದೆ. ಆಗಸ್ಟ್​ 30 ರಿಂದ ಟೂರ್ನಿ ಆರಂಭಗೊಳ್ಳಲಿದ್ದು ಭಾರತ-ಪಾಕ್​​ ಪಂದ್ಯ ಟೂರ್ನಿ ಸೆಂಟರ್ ಆಫ್​ ಅಟ್ರ್ಯಾಕ್ಷನ್ ಆಗಿದೆ. ಈ ಹೈವೋಲ್ಟೇಜ್​​​ ಮ್ಯಾಚ್​​ನ ಕುತೂಹಲ ಹೆಚ್ಚಿದ ನಡುವೆಯೇ ಭಾರತ-ಪಾಕ್​​​​ ಪಂದ್ಯದ ಪ್ರೊಮೋ ರಿಲೀಸ್ ಆಗಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ 30 ಸೆಕೆಂಡುಗಳ ವಿಡಿಯೋ ಬಿಡುಗಡೆಗೊಳಿಸಿದ್ದು, ಬಾಲಿವುಡ್​​ ನಟ ಸನ್ನಿ ಡಿಯೋಲ್​, ಟೀಮ್ ಇಂಡಿಯಾವನ್ನು ಹುರಿದುಂಬಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಗುಲ್ಶನ್ ಜತೆ ಸೇರಿ ‘ಬ್ಯಾಡ್​​ಮ್ಯಾನ್’​ ಆದ ಶಿಖರ್

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಶಿಖರ್ ಧವನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅಭಿಮಾನಿಗಳನ್ನು ರಂಜಿಸೋದನ್ನು ಎಂದೂ ಮರೆಯಲ್ಲ. ಈ ಬಾರಿ ಬಾಲಿವುಡ್​​ನ ಖ್ಯಾತ ಖಳನಾಯಕ ಗುಲ್ಶನ್ ಗ್ರೋವರ್ ಜೊತೆ ಕೈ ಜೋಡಿಸಿದ್ದಾರೆ. ಇಬ್ಬರು ಕೂಡಿಕೊಂಡು ಫನ್ನಿಯಾದ ರೀಲ್ಸ್ ಮಾಡಿದ್ದು ನೋಡುಗರಿಗೆ ಸಖತ್​ ಮಜಾ ಕೊಡ್ತಿದೆ. ಧವನ್ ಇತ್ತೀಚೆಗಷ್ಟೇ ಷಹರಿ ರೀಲ್ಸ್​ ಮಾಡಿದ್ರು. ಇಂಟರ್​​​ನೆಟ್​​​​​ನಲ್ಲಿ ಸಖತ್ ಸದ್ದು ಮಾಡಿತ್ತು.

View this post on Instagram

A post shared by Shikhar Dhawan (@shikhardofficial)

ಜಿಮ್​​ನಲ್ಲಿ ಭುವಿ ಭರ್ಜರಿ ವರ್ಕೌಟ್

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಡ್ತಿರೋ ಭುವನೇಶ್ವರ್​​​​​​​​ ಕುಮಾರ್​ ಮತ್ತೆ ಫಿಟ್ನೆಸ್​​ನತ್ತ ಮುಖ ಮಾಡಿದ್ದಾರೆ. ಜಿಮ್​​ನಲ್ಲಿ ಲೈಟ್​​​​ ವೇಯ್ಟ್​​​​ ಎತ್ತಿ ಬೆವರು ಹರಿಸಿದ್ದಾರೆ. ಭುವಿಗೆ ಟೀಮ್ ಇಂಡಿಯಾ ಡೋರ್​ ಬಹುತೇಕ ಕ್ಲೋಸ್ ಆಗಿದೆ. ಡೊಮೆಸ್ಟಿಕ್​​​ನತ್ತ ಹೆಚ್ಚು ಗಮನ ಹರಿಸಿದ್ದು ಇದಕ್ಕಾಗಿ ಜಿಮ್​​ ಟ್ರೈನಿಂಗ್​ ಶುರುಮಾಡಿದ್ದಾರೆ. ಭುವಿ ಭಾರತ ಪರ ಕಳೆದ ವರ್ಷ ನವೆಂಬರ್​​ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದಾರೆ.

ಅಬ್ದುಲ್ ಸಮಾದ್​​​ ಕಂಠಕ್ಕೆ ಫ್ಯಾನ್ಸ್ ಫಿದಾ

ಅಂಗಳದಲ್ಲಿ ಸಿಕ್ಸರ್​-ಬೌಂಡ್ರಿ ಸಿಡಿಸಿ ಅಭಿಮಾನಿಗಳನ್ನ ರಂಜಿಸುವ ಕ್ರಿಕೆಟರ್ಸ್​ ಆಫ್​ ದಿ ಫೀಲ್ಡ್​ನಲ್ಲಿ ಬಹು ಪ್ರತಿಭೆ ಹೊಂದಿರುತ್ತಾರೆ. ಜಮ್ಮು ಕಾಶ್ಮೀರದ ಯುವಬ್ಯಾಟ್ಸ್​ಮನ್ ಅಬ್ದುಲ್ ಸಮಾದ್ ಕೂಡ ಹೊರತಾಗಿಲ್ಲ. ಅಬ್ದುಲ್​ ಸಾಮದ್​​​ ಸಾಂಗ್ ಹಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೇಳಲು ಮಧುರವಾಗಿರುವ ಸಮಾದ್ ಕಂಠಕ್ಕೆ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏಷ್ಯಾಕಪ್ ವೀಕ್ಷಿಸಲು ಜೈ ಶಾಗೆ ಪಾಕ್​ ಆಹ್ವಾನ

ಅಗಸ್ಟ್​ 30ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಅದೇ ದಿನ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಲ್ತಾನ್​ನಲ್ಲಿ ಮುಖಾಮುಖಿಯಾಗಲಿವೆ. ಪಿಸಿಬಿ ಮೂಲಗಳ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಾಕ್ ಅಶ್ರಫ್​, ಬಿಸಿಸಿಐ ಕಾರ್ಯದರ್ಶಿ ಜೈ ಶಾರನ್ನ ಈ ಪಂದ್ಯ ವೀಕ್ಷಿಸುವ ಸಲುವಾಗಿ ಪಾಕ್​ಗೆ ಆಹ್ವಾನಿಸಿದ್ದಾರೆ. ಜೈ ಶಾ ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂದು ಅಲ್ಲಿನ ಮಾಧ್ಯಮ ಹೇಳಿವೆ. ರಾಜಕೀಯ ಬದಿಗಿಟ್ಟು ಭಾರತದೊಂದಿಗೆ ಕ್ರಿಕೆಟ್​ ಸಂಬಂಧ ವೃದ್ಧಿಸಲು ಎದುರು ನೋಡುತ್ತಿದ್ದೇವೆ ಎಂದು ಪಿಸಿಬಿ ಹೇಳಿದೆ.

ಬೆಂಕಿಯಲ್ಲಿ ನಡೆದ ಬಾಂಗ್ಲಾ​​ ಕ್ರಿಕೆಟಿಗ

ಆಗಸ್ಟ್​​ 30ನೇ ತಾರೀಕಿನಿಂದ ಏಷ್ಯಾಕಪ್​​ 16ನೇ ಸೀಸನ್​ ಶುರುವಾಗಲಿದೆ. ಎಲ್ಲಾ ತಂಡದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಬಾಂಗ್ಲಾದ ಸ್ಟಾರ್​ ಕ್ರಿಕೆಟರ್​ ಓರ್ವ ಏಷ್ಯಾಕಪ್ ಟೂರ್ನಿಗಾಗಿ ಕೆಂಡದ ರಾಶಿ ಮೇಲೆ ನಡೆಯುವ ಮೂಲಕ ವಿಚಿತ್ರವಾಗಿ ತಯಾರಿ ನಡೆಸುತ್ತಿದ್ದಾರೆ. ಈ ಘಟನೆ ಅಭಿಮಾನಿಗಳನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ರೀತಿ ತಯಾರಿ ನಡೆಸಿ ಬೆಚ್ಚಿಬೀಳಿಸಿದ್ದು ಮತ್ಯಾರು ಅಲ್ಲ, ಬಾಂಗ್ಲಾದ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ ಶೇಕ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​​ನಿಂದ ಅಚ್ಚರಿಯ ನಡೆ.. ಜಯ್ ಶಾಗೆ ಆಹ್ವಾನ ಕೊಟ್ಟ ಪಿಸಿಬಿ.. ‘ಕ್ರಿಕೆಟ್ ಲೋಕ’ದ ಸೂಪರ್ ಸಿಕ್ಸ್ ಇಲ್ಲಿದೆ

https://newsfirstlive.com/wp-content/uploads/2023/08/jayshah.jpg

Load More