ಇದು ಸೂಪರ್ ಸಿಕ್ಸ್.. ಸುದ್ದಿಗಳ ಚುಟುಕು ಹೂರಣ..!!
ಸಂಜಯ್ ದತ್ ಯಾವ ಟಿ-20 ಫ್ರಾಂಚೈಸಿ ಮಾಲೀಕರು ಗೊತ್ತಾ ..?
ವಿರಾಟ್ ಕೊಹ್ಲಿ ಹಾದಿಯಲ್ಲೇ ಕುಲ್ದೀಪ್.. ‘ಪ್ರೇಮ ಮಂದಿರ’ಕ್ಕೆ ಭೇಟಿ
ಇಂಡೋ-ವಿಂಡೀಸ್ ಮೊದಲ ಟೆಸ್ಟ್ ಮುಂದೂಡಿಕೆ?
ವೆಸ್ಟ್ ಇಂಡೀಸ್ ಪ್ರವಾಸದ ಆರಂಭಕ್ಕೂ ಮುನ್ನವೇ ಹರಾರೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಸದ್ಯ ಏಕದಿನ ಅರ್ಹತಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ವೆಸ್ಟ್ ಇಂಡೀಸ್, ಜುಲೈ 9ರಂದು ಜಿಂಬಾಬ್ವೆ ಎದುರಿನ ಪಂದ್ಯವನ್ನಾಡಲಿದೆ. ಈ ಬೆನ್ನಲ್ಲೇ ಜುಲೈ 12ರಂದು ಟೆಸ್ಟ್ ಸರಣಿಗೆ ಅಣಿಯಾಗಬೇಕಾಗಿದೆ. ಲಾಜಿಸ್ಟಿಕ್ ಸಮಸ್ಯೆಯನ್ನು ಎದುರಿಸಲಿರುವ ವೆಸ್ಟ್ ಇಂಡೀಸ್ಗೆ ಕೆಲ ಪ್ರಮುಖ ಆಟಗಾರರ ಗೈರು ಕಾಡಲಿದೆ. ಹೀಗಾಗಿ ಮೊದಲ ಪಂದ್ಯ ರಿಶೆಡ್ಯೂಲ್ ಮಾಡುವತ್ತ ಚಿಂತನೆ ನಡೆದಿದೆ.
ದಾಖಲೆ ವೀಕ್ಷಣೆ ಪಡೆದ WTC ಫೈನಲ್
ಇಂಡೋ-ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ದಾಖಲೆಯ ವೀಕ್ಷಣೆ ಪಡೆದುಕೊಂಡಿದೆ. ಟೆಸ್ಟ್ ಕ್ರಿಕೆಟ್ ಪೈಕಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡ ದಾಖಲೆಗೆ WTC ಫೈನಲ್ ಪಾತ್ರವಾಗಿದೆ. 124ಕ್ಕೂ ಹೆಚ್ಚು ಮಿಲಿಯನ್ ಮಂದಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಹಿಂದಿನ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ WTC ಫೈನಲ್ಗಿಂತ ಶೇ.32ರಷ್ಟು ಅಧಿಕ ಮಂದಿ ಇಂಡೋ-ಆಸಿಸ್ ಟೆಸ್ಟ್ ಕಣ್ತುಂಬಿಕೊಂಡಿದ್ದಾರೆ. ಆ ಮೂಲಕ 2021ರ WTC ಫೈನಲ್ ಪಂದ್ಯದ ದಾಖಲೆಯನ್ನ ಬ್ರೇಕ್ ಮಾಡಿದೆ.
ಕೊಹ್ಲಿ ಹಾದಿಯಲ್ಲಿ ಕುಲ್ದೀಪ್
ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಾದಿಯಲ್ಲೇ ಕುಲ್ದೀಪ್ ಯಾದವ್ ಹೆಜ್ಜೆಹಾಕಿದ್ದಾರೆ. ಭಾರತದ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರೇಮ ಮಂದಿರಕ್ಕೆ ಭೇಟಿ ನೀಡಿದ ಕುಲದೀಪ್ ಯಾದವ್, ವಿಷ್ಣುವಿನ ದರ್ಶನ ಪಡೆದ ಬಳಿಕ ಕೆಲ ಕಾಲ ಆಧ್ಯಾತ್ಮದಲ್ಲಿ ಮುಳಗಿದರು. ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಹೆಣಗಾಡುತ್ತಿರುವ ಕುಲ್ದೀಪ್ ಯಾದವ್, ಪ್ರಮುಖ ಟೂರ್ನಿಗಳಾದ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಮಹಾದಾಸೆಯಲ್ಲಿದ್ದಾರೆ.
ಧೋನಿ-ಜಡ್ಡು ವಿವಾದಕ್ಕೆ ಸ್ಪಷ್ಟನೆ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಜಡೇಜಾ ನಡುವಿನ ಮನಸ್ತಾಪದ ವಿಚಾರವಾಗಿ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಕೆಂಡಕಾರಿದ್ದಾರಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ಏನಾಯ್ತು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇದರಲ್ಲಿ ಗೌಪ್ಯತೆ ಯಾವುದೂ ಇಲ್ಲ. ನಮಗೆ ಯಾವುದೇ ಸಮಸ್ಯೆ ಇಲ್ಲ. ಧೋನಿ ಬಗ್ಗೆ ಜಡೇಜಾಗೆ ಗೌರವವಿದೆ. ಧೋನಿ ಅಭಿಮಾನಿಗಳು ಜಡೇಜಾ ಔಟಾಗುವ ಬಗ್ಗೆ ಪ್ರಾರ್ಥನೆಯಿಂದ ಜಡೇಜಾಗೆ ಬೇಸರವಾಗಿರಬೇಕಾಷ್ಟೆ ಎಂದು ಮನಸ್ತಾಪದ ವಿಚಾರವನ್ನು ತಳ್ಳಿಹಾಕಿದ್ದಾರೆ.
ಪಾಕ್ನಿಂದ ಮತ್ತೊಂದು ಡಿಮ್ಯಾಂಡ್
ಏಕದಿನ ವಿಶ್ವಕಪ್ ಆರಂಭಕ್ಕೆ 3 ತಿಂಗಳು ಬಾಕಿಯಿದ್ದು, ಈಗಾಗಲೇ ವಿಶ್ವಕಪ್ ತಯಾರಿ ಬರದಿಂದ ಸಾಗುತ್ತಿದೆ. ಪಾಕ್ ಕ್ರಿಕೆಟ್ ಬೋರ್ಡ್ ಮಾತ್ರ ದಿನೇ ದಿನೇ ಒಂದಿಲ್ಲೊಂದು ಡಿಮ್ಯಾಂಡ್ ಮಾಡುತ್ತಾ ಸುದ್ದಿಯಾಗ್ತಿದೆ. ಈ ಹಿಂದೆ ನಮೋ ಸ್ಟೇಡಿಯಂ, ಚೆನ್ನೈನ ಚೆಪಾಕ್, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಪಂದ್ಯಗಳ ಸ್ಥಳ ಬದಲಾವಣೆಗೆ ಮನವಿ ಮಾಡಿದ್ದ ಪಾಕ್, ಈಗ ಅಭ್ಯಾಸ ಪಂದ್ಯವನ್ನ ಅಫ್ಘಾನ್ ವಿರುದ್ಧ ಆಡಲು ನಿರಾಕರಿಸುತ್ತಿದೆ. ಈ ಬಗ್ಗೆ ಐಸಿಸಿಗೆ ಪ್ರತ ಕೂಡ ಬರೆದಿರೋ ಪಾಕ್ ಕ್ರಿಕೆಟ್ ಬೋರ್ಡ್, ಏಷ್ಯಾಕಪ್ನಲ್ಲಿ ಅಫ್ಘಾನ್ ಎದುರು ಆಡುತ್ತೇವೆ. ಹೀಗಾಗಿ ಇತರೆ ದೇಶದ ಎದುರು ಅಭ್ಯಾಸ ಪಂದ್ಯವನ್ನಾಡಿಸಲು ಡಿಮ್ಯಾಂಡ್ ಮಾಡ್ತಿದೆ.
ಕ್ರಿಕೆಟ್ ಕ್ಷೇತ್ರಕ್ಕೆ ಸಂಜಯ್ ದತ್ ಎಂಟ್ರಿ!
ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಕ್ರಿಕೆಟ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಶ್ವದಾದ್ಯಂತ ಟಿ20 ಹಾಗೂ ಟಿ20 ಫ್ರಾಂಚೈಸಿ ಲೀಗ್ಗಳ ಅಬ್ಬರ ಜೋರಾಗಿದ್ದು, ಈಗ ಬಾಲಿವುಡ್ ನಟ ಸಂಜಯ್ ದತ್ ಕ್ರಿಕೆಟ್ ಟೀಮ್ವೊಂದರ ಮಾಲೀಕರಾಗಿದ್ದಾರೆ. ಜಿಂಬಾಬ್ವೆ ಆಯೋಜಿಸುತ್ತಿರುವ ಜಿಮ್ ಆಫ್ರೋ ಟಿ10 ಟೂರ್ನಿಯ ಹರಾರೆ ಹರೀಕೇನ್ಸ್ ತಂಡಕ್ಕೆ ನಟ ಸಂಜಯ್ ದತ್ ಸಹ ಮಾಲೀಕರಾಗಿದ್ದಾರೆ. ಈ ಲೀಗ್ನಲ್ಲಿ ಒಟ್ಟು ಐದು ತಂಡಗಳಿದ್ದು, ಈ ಟೂರ್ನಿ ಜುಲೈ 20ರಿಂದ ಆರಂಭಗೊಳ್ಳಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್