newsfirstkannada.com

Super Six; ಇಂಡೋ-ಪಾಕ್​​​​​ ಪಂದ್ಯದಿಂದ ಇಷ್ಟೊಂದು ಕೋಟಿ ಆದಾಯವೇ? ಇಲ್ಲಿವೆ 6 ಕ್ರಿಕೆಟ್ ಸುದ್ದಿ​

Share :

Published August 30, 2023 at 1:36pm

    ಶಿವನ ದರ್ಶನ ಪಡೆದ ವೆಂಕಟೇಶ್ ಅಯ್ಯರ್​​

    ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಸಂಪೂರ್ಣ ಸಿದ್ಧ

    ಮಹಾರಾಜ ಟಿ20 ಟ್ರೋಫಿ ಗೆದ್ದ ಹುಬ್ಬಳ್ಳಿ ಟೈಗರ್ಸ್​

ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಮಹಾರಾಜ ಟಿ20 ಟ್ರೋಫಿ ಫೈನಲ್​​ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​, ಮೈಸೂರು ವಾರಿಯರ್ಸ್​ ತಂಡವನ್ನ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್​ ತಂಡ ಮೊಹಮ್ಮದ್ ತಾಹ ಹಾಗೂ ಕ್ಯಾಪ್ಟನ್ ಮನೀಶ್​ ಪಾಂಡೆ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್​ಗೆ 203 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಮೈಸೂರು ತಂಡ ಪ್ರಬಲ ಪೈಪೋಟಿ ಒಡ್ಡಿತು. ಕರುಣ್ ನಾಯರ್ ಪಡೆ ಅಂತಿಮ ಓವರ್​​ನಲ್ಲಿ ಗೆಲ್ಲಲು 12 ರನ್ ಬೇಕಿತ್ತು. ಆದರೆ ಮನೀಶ್​ ಬಳಗ ಎದುರಾಳಿ ತಂಡವನ್ನ 8 ರನ್​​​​ಗಳಿಂದ ಮಣಿಸಿ ಟ್ರೋಫಿಗೆ ಮುತ್ತಿಕ್ಕಿತು.

‘ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಸಂಪೂರ್ಣ ಸಿದ್ಧ’

ಆಲೂರಿನ ಕೆಎಸ್​​ಸಿ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾದ 6 ದಿನಗಳ ಪೂರ್ವಭಾವಿ ಕ್ಯಾಂಪ್ ಯಶಸ್ವಿಯಾಗಿ ಮುಗಿದಿದೆ. ಕ್ಯಾಂಪ್​ ಮುಕ್ತಾಯಕ ಬಳಿಕ ಮಾತನಾಡಿರೋ ಹೆಡ್​ಕೋಚ್​ ರಾಹುಲ್​​ ದ್ರಾವಿಡ್​ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಸರ್ವರೀತಿಯಲ್ಲೂ ಸಿದ್ಧವಾಗಿದೆ ಎಂದಿದ್ದಾರೆ. ಆರು ದಿನಗಳ ಕ್ಯಾಂಪ್​​​ ಯಶಸ್ವಿಯಾಗಿ ಕೊನೆಗೊಂಡಿದೆ. ಈ ಅವಧಿಯಲ್ಲಿ ಎಲ್ಲಾ ವಿಭಾಗದ ಚಿಂತನೆ ನಡೆಸಲಾಗಿದೆ. ಆಟಗಾರರ ಫಿಟ್ನೆಸ್​​​​​, ರೋಲ್​ ಬಗ್ಗೆ ಮಾಹಿತಿ ನೀಡಿದ್ದೇವೆ. ಹಲವು ಗೊಂದಲಗಳಿಗೆ ಉತ್ತರ ಕಂಡುಕೊಂಡಿದ್ದು ಟೂರ್ನಿಯಲ್ಲಿ ಸಹಕಾರಿ ಆಗಲಿದೆ. ಕೆಎಸ್​ಸಿಎ ಹಾಗೂ ಎನ್​​ಸಿಎ ಉತ್ತಮ ಸೌಲಭ್ಯ ಒದಗಿಸಿತು ಎಂದು ಕೋಚ್​ ರಾಹುಲ್​ ದ್ರಾವಿಡ್ ಹೇಳಿದ್ದಾರೆ.

ಇಂಡೋ-ಪಾಕ್​​​​​ ಪಂದ್ಯದಿಂದ 400 ಕೋಟಿ ಆದಾಯ ?

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಏಷ್ಯಾಕಪ್​ ಟೂರ್ನಿಯಲ್ಲಿ ಸೆಪ್ಟೆಂಬರ್​​ 2 ರಂದು ಉಭಯ ತಂಡಗಳು ಸೆಣಸಾಡಲಿವೆ. ಈ ಒಂದು ಪಂದ್ಯದಿಂದಲೇ ಬ್ರಾಡ್​ಕಾಸ್ಟಿಂಗ್​ ಚಾನೆಲ್ 400 ಕೋಟಿ ರೂಪಾಯಿ ಆದಾಯ ಗಳಿಸುವ ಲೆಕ್ಕಾಚಾರದಲ್ಲಿದೆ. ಇಂಡೋ-ಪಾಕ್​​ ಪಂದ್ಯದ ವೇಳೆ 10 ಸೆಕೆಂಡ್​​​ ಜಾಹೀರಾತಿಗೆ 30 ಲಕ್ಷ ರೂಪಾಯಿ ನಿಗಧಿಪಡಿಸಲಾಗಿದೆ. ಎರಡು ತಂಡಗಳು ಒಂದು ವೇಳೆ ಫೈನಲ್​​ ಆಡಿದರೆ ಟೂರ್ನಿಯಲ್ಲಿ ಒಟ್ಟು 3 ಬಾರಿ ಮುಖಾಮುಖಿಯಾಗಲಿವೆ.

ಶಿವನ ದರ್ಶನ ಪಡೆದ ವೆಂಕಟೇಶ್ ಅಯ್ಯರ್​​

ಟೀಮ್ ಇಂಡಿಯಾ ಯುವ ಆಲ್​ರೌಂಡರ್ ವೆಂಕಟೇಶ್ ಅಯ್ಯರ್ ರಾಜಸ್ತಾನದ ಉದಯ್​​ಪುರ್​​ನಲ್ಲಿರೋ ವಿಶ್ವದ ಅತಿ ಎತ್ತರದ ಶಿವನ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದವರ ಜೊತೆ ದೇವಸ್ಥಾನಕ್ಕೆ ತೆರಳಿರುವ ವಿಡಿಯೋವನ್ನ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ರಾಜಸ್ಥಾನದ ಇತರೆ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ವೆಂಕಟೇಶ್ ಅಯ್ಯರ್ ಭೇಟಿಕೊಟ್ಟಿದ್ದಾರೆ.

ಮಕ್ಕಳ ಜೊತೆ ಪಾನಿಪುರಿ ಸವಿದ ಸಾಹ

ಟೀಮ್ ಇಂಡಿಯಾದಿಂದ ಹೊರಬಿದ್ದಿರೋ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಮಕ್ಕಳ ಜೊತೆ ಸೇರಿ ಪಾನೀಪುರಿ ತಿಂದು ಆಸ್ವಾದಿಸುತ್ತಿರುವ ವಿಡಿಯೋ ಸಖತ್​​ ವೈರಲ್ ಆಗಿದೆ. ಟೆಸ್ಟ್​​​ ತಂಡದ ಖಾಯಂ ವಿಕೆಟ್ ಅನ್ನಿಸಿಕೊಂಡಿದ್ದ ಸಾಹ ಸದ್ಯ ಐಪಿಎಲ್​​ನಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. 2023ನೇ ಐಪಿಎಲ್​​ನಲ್ಲಿ ಗುಜರಾತ್ ಟೈಟನ್ಸ್ ಪರ ಉತ್ತಮ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿದ್ದರು.

View this post on Instagram

A post shared by Wriddhiman Saha (@wriddhi)

ಹಾಡು ಹಾಡಿ ಪಾಕ್​​ ಪ್ಲೇಯರ್ಸ್​ ಮಸ್ತ್​ ಮಜಾ..!

ಪಾಕಿಸ್ತಾನ ಏಷ್ಯಾಕಪ್​​ ಆಯೋಜನೆಗೆ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಇದೇ ಹೊತ್ತಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಹಾಡು ಹಾಡಿ ಎಂಜಾಯ್ ಮಾಡಿದ್ದಾರೆ. ಏಷ್ಯಾಕಪ್ ಸಿದ್ಧತೆ ನಡುವೆ ವೇಗಿ ನಸೀಮ್ ಶಾ, ಮೊಹಮ್ಮದ್​ ವಾಸಿಮ್​, ಚಲಿಸುವ ಕಾರಿನಲ್ಲಿ ಹಾಡು ಹಾಡಿ ಸಂಭ್ರಮಿಸಿದ್ದಾರೆ. ​​ಪಾಕಿಸ್ತಾನಿ ಸಿಂಗರ್​ ಪಾಲಕ್ ಶಬ್ಬೀರ್​​ ಕಂಠದಲ್ಲಿ ಹಾಡು ಗುನುಗುತ್ತಿದ್ದಂತೆ ಇಬ್ಬರು ಆಟಗಾರರು ದನಿಗೂಡಿಸಿದ್ದಾರೆ. ಪಾಕ್​ ಕ್ರಿಕೆಟಿಗರ ಈ ಹಾಡಿನ ವಿಡಿಯೋ ವೈರಲ್ ಆಗ್ತಿದ್ದು ಇವರ ಟ್ಯಾಲೆಂಟ್​​ಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Super Six; ಇಂಡೋ-ಪಾಕ್​​​​​ ಪಂದ್ಯದಿಂದ ಇಷ್ಟೊಂದು ಕೋಟಿ ಆದಾಯವೇ? ಇಲ್ಲಿವೆ 6 ಕ್ರಿಕೆಟ್ ಸುದ್ದಿ​

https://newsfirstlive.com/wp-content/uploads/2023/08/Ind-vs-Pak.jpg

Load More