ವಿಶ್ವಕಪ್ಗೆ ಯುವ ಜನಾಂಗದ ಭರ್ಜರಿ ರೆಸ್ಪಾನ್ಸ್
ವಿಶ್ವಕಪ್ ದಂಗಲ್ ವೀಕ್ಷಣೆಯಲ್ಲಿ ಹೆಚ್ಚಳ ಆಗಿದ್ದೇಕೆ..?
ರೋಚಕತೆ ಇಲ್ಲವೆಂದ್ರೂ ಕ್ರೇಜ್ ಹೆಚ್ಚಾಗಿದ್ದು ಯಾಕೆ..?
ಒಂದು ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ಎಷ್ಟು ಇಂಪಾರ್ಟೆಂಟೋ. ಕ್ರಿಕೆಟ್ಗೂ ಕೂಡ ಅಷ್ಟೇ ಇಂಪಾರ್ಟೆಂಟ್. ಸದ್ಯ ನಡೀತಿರೋ ಏಕದಿನ ವಿಶ್ವಕಪ್ ವೀಕ್ಷಣೆಯಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಎಸ್ಪೆಷಲಿ ಯೂತ್ಸ್ ವಿಶ್ವಕಪ್ ಪಂದ್ಯಗಳನ್ನ ಮುಗಿಬಿದ್ದು ನೋಡ್ತಿದ್ದಾರೆ. ರಣರೋಚಕ ಪಂದ್ಯಗಳ ಸಂಖ್ಯೆ ಕಡಿಮೆಯಿದ್ರೂ, ಯುವ ಜನಾಂಗದಲ್ಲಿ ವಿಶೇಷವಾದ ಕ್ರೇಜ್ ಹುಟ್ಟಿದೆ.
ಏಕದಿನ ವಿಶ್ವಕಪ್. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ಮಹಾಜಾತ್ರೆ. ಈ ಕ್ರಿಕೆಟ್ ಜಾತ್ರೆಗಿರೋ ಕ್ರೇಜೆ ಬೇರೇ. ಇದ್ರ ಗತ್ತೇ ಬೇರೆ.. ವಿಶ್ವಾದ್ಯಂತ ಒಂದೂವರೆ ತಿಂಗಳ ಕಾಲ ಕ್ರಿಕೆಟ್ ಜಪ ನಡೆಯುತ್ತೆ. ಅದರಲ್ಲೂ ಈ ಬಾರಿಯ ವಿಶ್ವಕಪ್ ಅಂತೂ ಸಂಪೂರ್ಣ ಯೂತ್ಸ್ ಮಯವಾಗಿಬಿಟ್ಟಿದೆ. ಇದನ್ನು ಒನ್ಡೆ ವಿಶ್ವಕಪ್ ಅಂತ ಕರೆಯುವ ಬದಲು, ಯೂತ್ಸ್ ವಿಶ್ವಕಪ್ ಅಂತ ಕರಿಬೋದು. ಅಷ್ಟರಮಟ್ಟಿಗೆ ಕ್ರೇಜ್ ಇದೆ.
ವಿಶ್ವಕಪ್ ವೀಕ್ಷಿಸಿದ ಬರೋಬ್ಬರಿ 9.6 ಕೋಟಿ ಯುವಕರು
ವಿಶ್ವಕಪ್ ದಂಗಲ್ ಆರಂಭಗೊಂಡ ಮೂರು ವಾರ ಕಳೆದಿವೆ. ಫಸ್ಟ್ಹಾಫ್ ಬಹುತೇಕ ಮುಗಿದಿದೆ. 21 ಪಂದ್ಯಗಳ ಕದನ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಅದ್ರಲ್ಲೂ ಯುವ ಜನಾಂಗವಂತೂ ವಿಶ್ವಕಪ್ ನೋಡಲು ಮುಗಿಬಿದ್ದಿದೆ. ಟಿವಿ ಮುಂದೆ ಕೂತು ವಿಶ್ವಕಪ್ ವೀಕ್ಷಿಸೋದ್ರಲ್ಲಿ ಯುವಕರು ಎಲ್ಲರನ್ನ ಮೀರಿಸಿದ್ದಾರೆ.
ಬ್ಯಾಟ್-ಬೌಲ್ ಹಿಡಿದು ಆಟಗಾರರು ವಿಶ್ವಕಪ್ ರಣರಂಗದಲ್ಲಿ ಹೋರಾಡ್ತಿದ್ರೆ ಯುವ ಸಮೂಹ ಟಿವಿ ಮುಂದೆ ಕೂತು ಆ ರಣಕಲಿಗಳನ್ನ ಹುರಿದುಂಬಿಸ್ತಿದ್ದಾರೆ. ಅಕ್ಟೋಬರ್ 5 ರಿಂದ ಶುರುವಾದ ಈ ಮಹಾದಂಗಲ್ ಈವರೆಗೆ ಬರೋಬ್ಬರಿ 9.6 ಕೋಟಿ ಯಂಗ್ ಜನರೇಷನ್ ವೀಕ್ಷಿಸಿದ್ದಾರೆ. 22 ರಿಂದ 40 ವಯಸ್ಸಿನ 268 ಮಿಲಿಯನ್ ಯೂತ್ಸ್ ಇಲ್ಲಿತನಕ ವಿಶ್ವಕಪ್ ಪಂದ್ಯಗಳನ್ನ ಕಣ್ತುಂಬಿಕೊಂಡಿದ್ದಾರೆ.
ಕಳೆದ ವಿಶ್ವಕಪ್ಗೆ ಸೆಡ್ಡು..! ಈ ಬಾರಿ 22 ಪರ್ಸಂಟ್ ಹೆಚ್ಚಳ..!
2019ರ ವಿಶ್ವಕಪ್ಗೆ ಹೋಲಿಸಿದ್ರೆ ವಿಶ್ವಕಪ್ ನೋಡುವ ಯೂತ್ಸ್ ಸಂಖ್ಯೆಯಲ್ಲಿ 5 ಪರ್ಸಂಟ್ ಹೆಚ್ಚಳವಾಗಿದೆ. ಬರೀ ಯೂತ್ಸ್ ಅಷ್ಟೇ ಅಲ್ಲ, ಎಲ್ಲಾ ವಯೋಮಾನದವರು ಕೂಡ ವಿಶ್ವಕಪ್ ಅನ್ನ ಅತೀವ ಸಂತಸದಿಂದ ವೀಕ್ಷಿಸುತ್ತಿದ್ದಾರೆ. 11 ಪಂದ್ಯಗಳ ಅಂತ್ಯಕ್ಕೆ 2019ರ ವಿಶ್ವಕಪ್ ಹೋಲಿಸಿದ್ರೆ ಈ ಸಲ 22 ಪರ್ಸಂಟ್ ಹೆಚ್ಚಳವಾಗಿದೆ. ಮಕ್ಕಳು, ಯುವಕರು ಹಾಗೂ ವಯಸ್ಕರು ಬಿಗ್ ಟೂರ್ನಿಯನ್ನು ಕಣ್ತುಂಬಿಕೊಳ್ತಿದ್ದಾರೆ.
ವಿಶ್ವಕಪ್ ದಂಗಲ್ ವೀಕ್ಷಣೆಯಲ್ಲಿ ಹೆಚ್ಚಳ ಆಗಿದ್ದೇಕೆ
ಈ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಅದನ್ನ ಆನ್ಸರ್ ಸಿಂಪಲ್. 2023ನೇ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಹೇಳಿಕೇಳಿ ಭಾರತ ಕ್ರಿಕೆಟ್ನ ತವರೂರು. ಇಲ್ಲಿ ಕ್ರಿಕೆಟ್ ಅನ್ನ ಧರ್ಮದಂತೆ ಆರಾಧಿಸ್ತಾರೆ. ಇಲ್ಲಿ ಯಾವುದೇ ದ್ವಿಪಕ್ಷೀಯ ಸರಣಿ ನಡೀಲಿ, ಸ್ಟೇಡಿಯಂ ಭರ್ತಿಯಾಗಿರುತ್ತೆ. ಟಿವಿ ಹಾಗೂ ಮೊಬೈಲ್ನಲ್ಲಿ ಸಿಕ್ಸರ್-ಬೌಂಡ್ರಿಗಳ ಸದ್ದು ಕೇಳುತ್ತೆ. ಅಂತ್ರದಲ್ಲಿ ವಿಶ್ವಕಪ್ ಅಂದ್ರೆ ಕೇಳ್ಬೆಕಾ? ಆ ಕ್ರೇಜ್ ದುಪ್ಪಟ್ಟಾಗಿದೆ. ಇದರ ಜೊತೆ ಭಾರತ ತಂಡ ಅದ್ಭುತ ಪರ್ಫಾಮೆನ್ಸ್ ನೀಡ್ತಿದೆ. ಈ ಎಲ್ಲ ಕಾರಣಗಳು ವೀಕ್ಷಕರನ್ನ ತನ್ನತ್ತ ಸೆಳೆಯುವಂತೆ ಮಾಡಿದೆ.
ವೀಕ್ಷಣೆಯಲ್ಲಿ ಹೆಚ್ಚಾದ್ರೂ ರೋಚಕತೆ ಮಾಯ
2019ರ ವಿಶ್ವಕಪ್ ಹೋಲಿಸಿದ್ರೆ ಈ ಬಾರಿ ಟಿವಿಯಲ್ಲಿ ಪಂದ್ಯ ವೀಕ್ಷಿಸೋರ ಸಂಖ್ಯೆ 22 ಪರ್ಸಂಟ್ ಹೆಚ್ಚಳವಾಗಿದೆ ನಿಜ. ಆದ್ರೆ ಫಸ್ಟ್ಹಾಫ್ ಡಲ್ ಹೊಡೆಸಿದೆ. ರೋಚಕತೆ ಅನ್ನೋದೇ ಮಾಯವಾಗಿದೆ. 20 ಪಂದ್ಯಗಳ ಪೈಕಿ ದಕ್ಷಿಣ ಆಫ್ರಿಕಾ-ನೆದರ್ರ್ಲೆಂಡ್ಸ್ ಮ್ಯಾಚ್ ಹೊರತುಪಡಿಸಿ, ಉಳಿದೆಲ್ಲ ಪಂದ್ಯಗಳು ಒನ್ ಸೈಡೆಡ್ ಆಗಿ ಎಂಡ್ ಆಗಿವೆ. ಜಿದ್ದಾಜಿದ್ದಿನ ಹೋರಾಟವಿಲ್ಲದಿದ್ರೂ, ವಿಶ್ವಕಪ್ ಫಸ್ಟ್ಹಾಫ್ ಫ್ಯಾನ್ಸ್ ಮನ ಗೆದ್ದಿದೆ. ಸೆಕೆಂಡ್ ಹಾಫ್ನಲ್ಲೇದ್ರೂ ಟ್ವಿಸ್ಟ್ ಅಂಡ್ ಟರ್ನ್ ಸಿಕ್ಕಿದ್ದೇ ಆದರೆ ಆ ಕ್ರೇಜ್ ದುಪ್ಪಟ್ಟಾಗೋದ್ರಲ್ಲಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ