newsfirstkannada.com

ಸೌರವ್ ಗಂಗೂಲಿ ಸಹೋದರನಿಗೆ ಸಂಕಷ್ಟ; ಬಂಧನದ ಭೀತಿಯಲ್ಲಿ ಸ್ನೇಹಾಶಿಶ್ ಗಂಗೂಲಿ..!

Share :

04-11-2023

    ಕೋಲ್ಕತ್ತ ಪೊಲೀಸರಿಂದ ಮಹತ್ವದ ಪ್ರಕರಣ ವಿಚಾರಣೆ

    ಪೊಲೀಸರು ನೋಟಿಸ್ ನೀಡಿದರೂ ಹಾಜರಾಗಲಿಲ್ಲ

    24 ಗಂಟೆ ಗಡುವು ಬಳಿಕ ಮತ್ತೊಂದು ನೋಟಿಸ್

ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್​​ ಪಂದ್ಯಗಳ ಟಿಕೆಟ್​​ಗಳನ್ನು ಬ್ಲಾಕ್​ ಮಾರ್ಕೆಟ್​ನಲ್ಲಿ ಮಾರಾಟ ಮಾಡಿರುವ ಆರೋಪ ಪ್ರಕರಣದಲ್ಲಿ ಲಿಂಕ್ ಹೊಂದಿದ್ದಾರೆಂದು ನೋಟಿಸ್ ಜಾರಿ ಮಾಡಿದ್ದಾರೆ. ಸ್ನೇಹಾಶಿಶ್ ಗಂಗೂಲಿ ಅವರು ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಯ ಸಹೋದರ ಆಗಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಸ್ನೇಹಾಶಿಶ್ ಗಂಗೂಲಿ ಅವರಿಗೆ ಬ್ಲಾಕ್​ ಮಾರ್ಕೆಟ್​​ನಲ್ಲಿ ಟಿಕೆಟ್ ಮಾರಾಟ ಮಾಡಿರುವ ಪ್ರಕರಣ ಸಂಬಂಧ ನೋಟಿಸ್ ನೀಡಿದ್ದೇವು. ಆದರೆ ಅವರು ಯಾವುದೇ ಉತ್ತರವನ್ನು ತನಿಖಾಧಿಕಾರಿಗಳಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮನ್ಸ್ ನೀಡಲಾಗಿದ್ದು, 24 ಗಂಟೆಗಳ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಿನ್ನೆ BookMyShowನ ಇಬ್ಬರು ಅಧಿಕಾರಿಗಳು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು. ಅವರಿಗೂ ನೋಟಿಸ್ ನೀಡಲಾಗಿತ್ತು. ಬ್ಲಾಕ್​ ಮಾರ್ಕೆಟ್​​​ನಲ್ಲಿ ಟಿಕೆಟ್ ಮಾರಾಟ ಮಾಡಿರುವ ಆರೋಪ ಸಂಬಂಧ ಪ್ರಶ್ನೆಗಳನ್ನು ಕೇಳಲಾಗಿದೆ. ಕೋಲ್ಕತ್ತ ಡಿಟೆಕ್ಟೀವ್ ಡಿಪಾರ್ಟ್​ಮೆಂಟ್ ಟೀಂ ಅವರನ್ನು ಪ್ರಶ್ನೆ ಮಾಡಿದೆ ಎಂದು ತಿಳಿಸಲಾಗಿದೆ.

ಬ್ಲಾಕ್ ಮಾರ್ಕೆಟ್​ನಲ್ಲಿ ಟಿಕೆಟ್ ಮಾರಿದ ಆರೋಪದ ಮೇಲೆ ಕೋಲ್ಕತ್ತ ಪೊಲೀಸರು, 94 ಟಿಕೆಟ್​ಗಳನ್ನು ಸೀಜ್ ಮಾಡಿದ್ದಾರೆ. ಇಲ್ಲಿಯವರೆಗೆ 16 ಆರೋಪಿಗಳನ್ನು ಬಂಧಿಸಿದ್ದಾರೆ. ವಿವಿಧ ಕಡೆ 7 ಪ್ರಕರಣಳನ್ನು ದಾಖಲಿಸಿಕೊಂಡಿದ್ದಾರೆ. ಬುಕ್​ಮೈಶೋ, CAB, ಬಿಸಿಸಿಐನ ಕೆಲವು ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌರವ್ ಗಂಗೂಲಿ ಸಹೋದರನಿಗೆ ಸಂಕಷ್ಟ; ಬಂಧನದ ಭೀತಿಯಲ್ಲಿ ಸ್ನೇಹಾಶಿಶ್ ಗಂಗೂಲಿ..!

https://newsfirstlive.com/wp-content/uploads/2023/11/GANGULY-1.jpg

Load More