newsfirstkannada.com

MS ಧೋನಿ ಫಿಟ್ನೆಸ್ ಸರ್ಕಸ್.. ಸಿನಿಮಾ ರಂಗಕ್ಕಾಗಿ ಈ ತಯಾರಿನಾ? ಪತ್ನಿ ಸಾಕ್ಷಿಯೇ ಹೀರೋಯಿನ್​?

Share :

27-07-2023

    42ನೇ ವಯಸ್ಸಿನಲ್ಲೂ ಕಮ್ಮಿ ಆಗಿಲ್ಲ ಫಿಟ್ನೆಸ್​ ಮೇಲಿನ ಆಸಕ್ತಿ..!

    ಟೀಮ್​ ಇಂಡಿಯಾದಲ್ಲಿ ಎಂಎಸ್ ಧೋನಿ ಹಾಕಿದ ಗೆರೆ ‘ಫಿಟ್ನೆಸ್​’

    ಕ್ರಿಕೆಟ್ ದಿಗ್ಗಜ ಶೀಘ್ರದಲ್ಲೇ ಕಲರ್​ಫುಲ್​ ಲೋಕಕ್ಕೆ ಎಂಟ್ರಿ

ಎಂಎಸ್ ಧೋನಿ ಬಯೋಪಿಕ್​​​​ ಮೂವಿ ಎಲ್ಲರ ದಿಲ್ ಗೆದ್ದಿತ್ತು. ಈಗ ವಿಶ್ವವಿಖ್ಯಾತ ಧೋನಿನೇ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ರಿಕೆಟ್ ದಿಗ್ಗಜ ಶೀಘ್ರದಲ್ಲೇ ಕಲರ್​ಫುಲ್​ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಅದಕ್ಕಾಗಿ ತಯಾರಿಯು ಜೋರಾಗಿದೆ.

ಟೀಮ್ ಇಂಡಿಯಾಗೆ ಫಿಟ್ನೆಸ್​ ಕಲ್ಚರ್ ಪರಿಚಯಿಸಿದ್ದೇ ಚಾಂಪಿಯನ್​ ಕ್ಯಾಪ್ಟನ್ ಎಂಎಸ್ ಧೋನಿ. ಅಂದು ಮಾಹಿ ಬಿತ್ತಿದ ಫಿಟ್ನೆಸ್​​​ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟರ ಮಟ್ಟಿಗೆ ವಿಶ್ವಕ್ರಿಕೆಟ್​ಗೆ ಭಾರತ ತಂಡವಿಂದು ಫಿಟ್ನೆಸ್​​​​ ತವರೂರಾಗಿ ಗುರುತಿಸಿಕೊಂಡಿದೆ. ವಿರಾಟ್ ಕೊಹ್ಲಿ ಫಿಟ್ನೆಸ್​​​​​ ಟ್ರೆಂಡ್​​ ಸೆಟ್ಟರ್​ ಆಗಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಫಿಟ್ನೆಸ್​ ಇಷ್ಟೆಲ್ಲ ಆಳವಾಗಿ ಬೇರೂರಿದ್ರು ಮಾಜಿ ಕ್ಯಾಪ್ಟನ್ ಧೋನಿಗೆ ಫಿಟ್ನೆಸ್ ಮೇಲಿನ ಒಲವು ಮಾತ್ರ ಇನ್ನೂ ಕಮ್ಮಿಯಾಗಿಲ್ಲ.

ಅಬ್ಬಬ್ಬಾ, ಅದೇನ್ ಮೈಕಟ್ಟು.. ಯುವಕರೇ ನಾಚಬೇಕು..!

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿರೋ ಮಾಸ್ಟರ್​ಮೈಂಡ್​ ವರ್ಷಕ್ಕೊಮ್ಮೆ ಐಪಿಎಲ್​​ನಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. ಜಗತ್ತನ್ನೇ ಗೆದ್ದ ಮಹಿಗೀಗ 42 ವಯಸ್ಸು. ಈ ವಯಸ್ಸಿನಲ್ಲು ಮಿಸ್ಟರ್​ ಕೂಲ್​​ಗೆ ಫಿಟ್ನೆಸ್ ಮೇಲಿನ ಆಸಕ್ತಿ ಮಾತ್ರ ಕಿಂಚಿತ್ತು ಕಮ್ಮಿ ಆಗಿಲ್ಲ.

ನೋಡಿ ತನ್ನ ತೀಕ್ಷ್ಣ ಬುದ್ಧವಂತಿಕೆಯಿಂದಲೇ ಕ್ರಿಕೆಟ್ ಲೋಕವನ್ನಾಳಿದ ಧೋನಿ 42ನೇ ವಯಸ್ಸಿನಲ್ಲೂ ಎಷ್ಟೊಂದು ಫಿಟ್​​​​ ಆ್ಯಂಡ್​​​ ಫೈನ್ ಆಗಿದ್ದಾರೆ ಅನ್ನೋದನ್ನ. ಅಬ್ಬಬ್ಬಾ ಅದೇನ್​​ ಮೈಕಟ್ಟು, ಅದೇನ್​​​ ಮಸಲ್ಸ್ ಅಲ್ವಾ ? ನಿಜಕ್ಕೂ ಕ್ರೇಜಿನೇ ಬಿಡಿ. ತಲಾ ಧೋನಿ ರಾಂಚಿಯಲ್ಲಿ ಜಿಮ್​ ಸೆಷನ್​ ಮುಗಿಸಿಕೊಂಡು ಹೊರಬರ್ತಿರೋ ವಿಡಿಯೋ ಇದು. ಮಾಹಿಯ ಈ ಫಿಟ್ನೆಸ್​​​​​​ ಕಂಡು ಯಂಗ್​ಸ್ಟರ್ಸ್​ ನಾಚದೇ ಬೇರೆ ವಿಧಿಯಿಲ್ಲ.

ಸಿನಿ ರಂಗಕ್ಕೆ ಎಂಟ್ರಿಕೊಡಲು ನಡೀತಿದ್ಯಾ ಫಿಟ್ನೆಸ್ ಸರ್ಕಸ್​​​..?

ಈ ವಯಸ್ಸಿನಲ್ಲೂ ಧೋನಿಯ ಮೈಕಟ್ಟು ನೋಡಿ ನಿಮಗೆ ಅಚ್ಚರಿ ಅನ್ನಿಸಿರಬಹುದು. ಅಜಾನುಬಾಹು ತೋಳುಗಳು ಎಂತಹವರಿಗೂ ಜಲಸ್​ ಹುಟ್ಟಿಸುತ್ತೆ. ಕೇವಲ ದೇಹವನ್ನ ಸದೃಢವಾಗಿಟ್ಟುಕೊಳ್ಳಲು ಮಹಿ ಫಿಟ್ನೆಸ್​​​​ ಗೀಳಿಗೆ ಬಿದ್ದಿಲ್ಲ. ಬದಲಿಗೆ ಧೋನಿಯ ಫಿಟ್ನೆಸ್ ಸರ್ಕಸ್​ ಹಿಂದೆ ಸಿನಿಮಾ ಲೋಕಕ್ಕೆ ಎಂಟ್ರಿಕೊಡುವ ಲೆಕ್ಕಚಾರ ಅಡಗಿದೆ.

ಹೌದು, ಮಿಸ್ಟರ್​ ಕೂಲ್ ಫಿಟ್ನೆಸ್​​​​ ಕಡೆ ಇಷ್ಟೊಂದು ಗಮನ ಕೊಡಲು ಕಾರಣ ಸಿನಿಮಾ. ಬೆಳ್ಳಿಪರದೇ ಪರದೇ ಹಿರೋ ಆಗಿ ಅಬ್ಬರಿಸಲು ಧೋನಿ ಸೈಲೆಂಟಾಗಿ ಸಿದ್ಧತೆ ಆರಂಭಿಸಿದ್ದಾರೆ. ಸ್ವತಃ ಧೋನಿ ಪತ್ನಿ ಸಾಕ್ಷಿ ಧೋನಿ ಅವರೇ ಸಿನಿ ರಂಗಕ್ಕೆ ಧುಮುಕುವ ಹಿಂಟ್​ ನೀಡಿದ್ದಾರೆ.

‘ಧೋನಿ ಸಿನಿಮಾ ಮಾಡುತ್ತಾರೆ’

ಒಳ್ಳೆಯದು ಆಗುತ್ತೆ ಎಂದಾದರೆ ಎಂಎಸ್ ಧೋನಿ ಸಿನಿಮಾ ಮಾಡಬಲ್ಲರು. ಅನೇಕ ಜಾಹೀರಾತಿನಲ್ಲಿ ಮಾಹಿ ನಟಿಸಿದ್ದಾರೆ. ಅವರಿಗೆ ಕ್ಯಾಮರಾ ಭಯವಿಲ್ಲ. 2006 ರಿಂದ ಕ್ಯಾಮರಾ ಎದುರಿಸಿದ್ದಾರೆ. ಧೈರ್ಯವಾಗಿ ಜಾಹೀರಾತು ಮಾಡಬಲ್ಲರು.

ಸಾಕ್ಷಿ, ಧೋನಿ ಪತ್ನಿ

ಸಾಕ್ಷಿ ಧೋನಿ ಏನೋ ಮಾಹಿ ಸಿನಿಮಾ ಮಾಡ್ತಾರೆ ಅನ್ನುವ ಹಿಂಟ್ ನೀಡಿದ್ದಾರೆ. ಒಂದು ವೇಳೆ ಧೋನಿ ಮೂವಿ ಮಾಡಿದ್ರೆ ಅವರಿಗೆ ಯಾವ ರೋಲ್​ ಇಷ್ಟ ಅನ್ನೋದನ್ನ ಕೂಡ ಸಾಕ್ಷಿ ರಿವೀಲ್ ಮಾಡಿದ್ದಾರೆ.

ಧೋನಿಗೆ ಆ್ಯಕ್ಷನ್ ಅಂದ್ರೆ ಇಷ್ಟ..!

ಧೋನಿಗೆ ಆ್ಯಕ್ಷನ್​ ಮೂವಿಗಳು ಅಂದ್ರೆ ಇಷ್ಟ. ನೀವು ಅವರನ್ನ ಆ ಪಾತ್ರಕ್ಕೆ ಆಯ್ಕೆ ಮಾಡಿದರೆ ಅವರು ಆ್ಯಕ್ಷನ್ ಪಾತ್ರದಲ್ಲಿ ನಟಿಸಬಲ್ಲರು. ಯಾಕಂದ್ರೆ ಧೋನಿ ಸದಾ ಆ್ಯಕ್ಷನ್​​.

ಸಾಕ್ಷಿ, ಧೋನಿ ಪತ್ನಿ.

ಧೋನಿ ಪತ್ನಿ ಸಾಕ್ಷಿ, ಮಹಿ ಮೂವಿಯಲ್ಲಿ ನಟಿಸ್ತಾರೆ ಅಂತ ಹೇಳುವ ಮೂಲಕ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಆದ್ರೆ ಪತ್ನಿ ಹೇಳಿದಂತೆ ಮಹಿ ನಿಜಕ್ಕೂ ಬಣ್ಣದ ಲೋಕಕ್ಕೆ ಎಂಟ್ರಿಕೊಡ್ತಾರಾ ಅಥವಾ ಇಲ್ಲ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS ಧೋನಿ ಫಿಟ್ನೆಸ್ ಸರ್ಕಸ್.. ಸಿನಿಮಾ ರಂಗಕ್ಕಾಗಿ ಈ ತಯಾರಿನಾ? ಪತ್ನಿ ಸಾಕ್ಷಿಯೇ ಹೀರೋಯಿನ್​?

https://newsfirstlive.com/wp-content/uploads/2023/07/DHONI_WIFE.jpg

Load More