newsfirstkannada.com

ಗೆಳೆಯನ ನೆನೆದು ಕಣ್ಣೀರಿಟ್ಟ ಮಾಜಿ ಕ್ರಿಕೆಟರ್; ಡೇವಿಡ್​ ಜಾನ್ಸನ್​ ಬಗ್ಗೆ ವಿಜಯ್ ಭಾರದ್ವಾಜ್ ಏನಂದ್ರು?

Share :

Published June 20, 2024 at 4:06pm

Update June 20, 2024 at 4:11pm

  ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ ನಿಧನ!

  ಡೇವಿಡ್ ಜಾನ್ಸನ್ ಪಾತ್ರ ನೆನೆದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​

  ಭಾರತ ತಂಡದ ಮಾಜಿ ಕ್ರಿಕೆಟರ್ ವಿಜಯ್ ಭಾರದ್ವಾಜ್ ಏನಂದ್ರು?

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ (53) ಇಹಲೋಕ ತ್ಯಜಿಸಿದ್ದಾರೆ. 53ರ ಜಾನ್ಸನ್ ನಿಧನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಕಂಬನಿ ಮಿಡಿದಿದ್ದಾರೆ. ಈ ವೇಳೆ ಡೇವಿಡ್ ಜಾನ್ಸರ್​ರ ಕೊಡುಗೆಯನ್ನ ಸ್ಮರಿಸಿಕೊಂಡಿದ್ದಾರೆ.

ಆನ್​ಫೀಲ್ಡ್​ನಲ್ಲಿ ಡೇವಿಡ್​ ಜಾನ್ಸನ್​ ಫೈಟರ್​ನಂತೆ ಹೋರಾಟ ಮಾಡುತ್ತಿದ್ದರು. ಆದರೆ, ನಿಜ ಜೀವನದಲ್ಲಿ ಹೋರಾಟ ಮಾಡಲು ವಿಫಲರಾಗಿದ್ದಾರೆ. ನಾನು 10 ವರ್ಷಗಳ ಕಾಲ ಜಾನ್ಸನ್ ಜೊತೆ ಕ್ರಿಕೆಟ್​​ ಆಡಿದ್ದೇನೆ. 90ರ ದಶಕದ ದೇಶಿ ಕ್ರಿಕೆಟ್​ನಲ್ಲಿ ಕರ್ನಾಟಕ ಕ್ರಿಕೆಟ್​​​ ತಂಡ ಪಾರಮ್ಯ ಮೆರೆಯಲು ಡೇವಿಡ್ ಜಾನ್ಸನ್ ಪಾತ್ರ ದೊಡ್ಡದಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟರ್ ವಿಜಯ್ ಭಾರದ್ವಾಜ್ ನೆನೆದಿದ್ದಾರೆ.

ಯಾರು ಈ ಡೇವಿಡ್ ಜಾನ್ಸನ್?

ಇನ್ನು, ಭಾರತದ ಕ್ರಿಕೆಟ್​​ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಡೇವಿಡ್ ಜಾನ್ಸನ್ ಮೂಲತಃ ಕನ್ನಡಿಗ. ಕರ್ನಾಟಕದ ಹಾಸನ ಮೂಲದ ಅರಸೀಕೆರೆಯ ಈ ಪ್ರತಿಭೆ ಟೀಂ ಇಂಡಿಯಾ ತಂಡದಲ್ಲಿ ಗುರುತಿಸಿಕೊಂಡಿದ್ದರು. ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕೀರ್ತಿ ಇವರಿಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗೆಳೆಯನ ನೆನೆದು ಕಣ್ಣೀರಿಟ್ಟ ಮಾಜಿ ಕ್ರಿಕೆಟರ್; ಡೇವಿಡ್​ ಜಾನ್ಸನ್​ ಬಗ್ಗೆ ವಿಜಯ್ ಭಾರದ್ವಾಜ್ ಏನಂದ್ರು?

https://newsfirstlive.com/wp-content/uploads/2024/06/Vijay-Bharadwaj_david-johnson.jpg

Load More